ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ರಾಜ್ಯಕ್ಕೆ ಕಾವೇರಿ ನದಿ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ವಿಧಾನಸಭೆ ಸೋಮವಾರ(ಅಕ್ಟೋಬರ್ 09) ನಿರ್ಣಯವನ್ನು ಅಂಗೀಕರಿಸಿತು.
ಬಿಜೆಪಿ ಸಭಾತ್ಯಾಗದ ನಂತರ ಸ್ಪೀಕರ್ ಎಂ ಅಪ್ಪಾವು ಅವರು ನಿರ್ಣಯವನ್ನು ಸ್ಪೀಕರ್ ಅಪ್ಪಾವು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿರುವುದಾಗಿ ಪ್ರಕಟಿಸಿದರು.
ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನಿರ್ಣಯವನ್ನು ಮಂಡಿಸಿದರು ಮತ್ತು ಕರ್ನಾಟಕವು “ಕೃತಕ ಬಿಕ್ಕಟ್ಟು” ಸೃಷ್ಟಿಸಿದೆ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನದಿಯಿಂದ ನೀರನ್ನು ಬಿಡುಗಡೆ ಮಾಡಿಲ್ಲ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನೇತೃತ್ವದ ಉಭಯ ಪಕ್ಷಗಳ ನಡುವೆ ನಡೆದ ತೀವ್ರ ಚರ್ಚೆಯ ನಂತರ ನಿರ್ಣಯವನ್ನು ಅಂಗೀಕರಿಸಲಾಯಿತು. ಆದಾಗ್ಯೂ, ಎಐಎಡಿಎಂಕೆ ನಿರ್ಣಯವನ್ನು ಬೆಂಬಲಿಸಿತು.
ಈ ಸುದ್ದಿ ಓದಿದ್ದೀರಾ? Big Breaking: ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ
ಅಂತರರಾಜ್ಯ ನದಿ ವಿವಾದಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ಆಡಳಿತ ಕೈಗೊಂಡಿರುವ ವಿವಿಧ ಸಾಧನೆಗಳನ್ನು ಸ್ಮರಿಸಿದ ಪಳನಿಸ್ವಾಮಿ, ಈ ವಿಷಯದ ಬಗ್ಗೆ ಕೇಂದ್ರದ ಮೇಲೆ ಸಾಕಷ್ಟು ಒತ್ತಡ ಹೇರಬೇಕು ಎಂದು ರಾಜ್ಯ ರ್ಕಾರವನ್ನು ಆಗ್ರಹಿಸಿದರು.
ಕೆಲವು ವರ್ಷಗಳ ಹಿಂದೆ ತಮ್ಮ ಪಕ್ಷವು ಈ ವಿಷಯಕ್ಕಾಗಿ ಸಂಸತ್ತನ್ನು ಕೆಲವು ದಿನಗಳ ಕಾಲ ಸ್ಥಗಿತಗೊಳಿಸಿತ್ತು ಎಂದು ಎಡಪ್ಪಾಡಿ ಕೆ ಪಳನಿಸ್ವಾಮಿ ನೆನಪಿಸಿಕೊಂಡರು.
ಈ ನಿರ್ಣಯವು ಕಾವೇರಿ ವಿವಾದಕ್ಕೆ ಸಮಗ್ರ ಮತ್ತು ಸಂಪೂರ್ಣ ಪರಿಹಾರದ ಗುರಿಯನ್ನು ತೋರುತ್ತಿಲ್ಲ ಮತ್ತು ನಿರ್ಣಯಕ್ಕೆ ತಾನು ಪ್ರಸ್ತಾಪಿಸಿದ ತಿದ್ದುಪಡಿಗಳನ್ನು ಸೇರಿಸುವ ಬಗ್ಗೆ ಸರ್ಕಾರ ಯಾವುದೇ ಭರವಸೆ ನೀಡದ ಕಾರಣ ಬಿಜೆಪಿ ಸದಸ್ಯರು ಸಬಾತ್ಯಾಗ ಮಾಡಿದರು.
ವಿಧಾನಸಭೆ ಅಂಗೀಕರಿಸಿದ ತಿದ್ದುಪಡಿಗಳು ನದಿಗಳ ರಾಷ್ಟ್ರೀಕರಣ ಮತ್ತು ಕೇಂದ್ರದ ಅಣೆಕಟ್ಟು ಸುರಕ್ಷತಾ ಮಸೂದೆಗೆ ಬೆಂಬಲವನ್ನು ಒಳಗೊಂಡಿವೆ.