ಕೇಂದ್ರ ಸರ್ಕಾರವು ಆರ್ಟಿಕಲ್ 370 ರದ್ದು ಮಾಡಿದ ಬಳಿಕ ನಡೆದ ಮೊದಲ ಲಡಾಕ್ ಹಿಲ್ ಕೌನ್ಸಿಲ್ ಚುನಾವಣೆಯಲ್ಲಿ ಜೆಕೆಎನ್‌ಸಿ-ಕಾಂಗ್ರೆಸ್ ಮೈತ್ರಿಯು ಭರ್ಜರಿ ಗೆಲುವು ದಾಖಲಿಸಿದ್ದು, ಬಿಜೆಪಿಗೆ ಭಾರೀ ಮುಖಭಂಗವಾಗಿದೆ.
ಲಡಾಕ್ ಹಿಲ್ ಕೌನ್ಸಿಲ್ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಮೈತ್ರಿ ಭರ್ಜರಿ ಗೆಲುವು ದಾಖಲಿಸಿದೆ.
Congress Celebrations Started in Kargil Ladakh Autonomous Hill Development Council, Kargil election Result 2023 🔥 🙌
Next PM Rahul Gandhi’s ‘Bharat Jodo Yatra’ significantly impacted the BJP in Ladakh and also reflects the mood of the people in J&K. ♥️ pic.twitter.com/Evps2DTGsp
— Venisha G Kiba (@KibaVenisha) October 8, 2023
ಲಡಾಕ್ ಹಿಲ್ ಕೌನ್ಸಿಲ್‌ನ 26 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 22 ಸ್ಥಾನಗಳನ್ನು ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಮೈತ್ರಿ ಗೆದ್ದುಕೊಂಡಿದೆ. ಇತ್ತ ಬಿಜೆಪಿ ಕೇವಲ ಎರಡು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇಬ್ಬರು ಪಕ್ಷೇತರರು ಕೂಡ ಗೆದ್ದಿದ್ದಾರೆ.
ಜಮ್ಮು, ಕಾಶ್ಮೀರ ಮತ್ತು ಲಡಾಖ್ ಅನ್ನು ಎರಡು ಒಕ್ಕೂಟಗಳಾಗಿ ವಿಭಜಿಸಿದ ನಂತರ ಕಾರ್ಗಿಲ್‌ನಲ್ಲಿ ನಡೆದ ಮೊದಲ ಸ್ಥಳೀಯ ಚುನಾವಣೆ ಇದಾಗಿತ್ತು. ಆಗಸ್ಟ್ 05, 2019ರಂದು ಲಡಾಖ್ ಅನ್ನು ಜಮ್ಮು ಮತ್ತು ಕಾಶ್ಮೀರದಿಂದ ಬೇರ್ಪಡಿಸಲಾಗಿತ್ತು.
Thank you Kargil. pic.twitter.com/uoFaqieuvd
— Omar Abdullah (@OmarAbdullah) October 8, 2023
ಅಕ್ಟೋಬರ್ 4ರಂದು 26 ಸ್ಥಾನಗಳಿಗೆ ಮತದಾನ ನಡೆದಿತ್ತು. ಕೌನ್ಸಿಲ್‌ನಲ್ಲಿ ಒಟ್ಟು 30 ಸ್ಥಾನಗಳಿದ್ದರೂ ಉಳಿದ ನಾಲ್ಕು ಕೌನ್ಸಿಲರ್‌ಗಳನ್ನು ನಾಮನಿರ್ದೇಶನ ಮಾಡಲಾಗುತ್ತದೆ. ಚುನಾವಣೆ ನಡೆದ 26 ಸ್ಥಾನಗಳಿಗೆ ಒಟ್ಟು 85 ಅಭ್ಯರ್ಥಿಗಳು ಕಣದಲ್ಲಿದ್ದರು.
#WATCH | Kargil: “I want to give credit to everyone who worked hard during the election campaigns…I am happy that I will be getting a chance to serve the people…,” says Mohd Jaffer Akhoon winning in the 5th Ladakh Autonomous Hill Development Council Election pic.twitter.com/uSzlLiHinX
— ANI (@ANI) October 8, 2023
2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್-370 ರದ್ದು ಮಾಡಿದ ಬಳಿಕ ಮಹತ್ತರ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿತ್ತು. ಆದರೆ ಲಡಾಖ್ ಪ್ರದೇಶದಲ್ಲಿ ಬಿಜೆಪಿ ಪ್ರಯತ್ನಗಳಿಗೆ ಮತದಾರರಿಂದ ಮನ್ನಣೆ ಸಿಕ್ಕಿಲ್ಲ. ಬಿಜೆಪಿಗೆ ಕೇವಲ 2 ಸ್ಥಾನ ನೀಡಿರುವ ಲಡಾಕ್ ಮತದಾರರು, ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್‌ಗೆ 22 ಸ್ಥಾನ ನೀಡಿದ್ದಾರೆ. ಈ ಪೈಕಿ ನ್ಯಾಷನಲ್ ಕಾನ್ಫರೆನ್ಸ್ 12 ಸ್ಥಾನ ಗೆದ್ದುಕೊಂಡಿದ್ದರೆ, ಕಾಂಗ್ರೆಸ್ 10 ಸ್ಥಾನ ಗೆದ್ದುಕೊಂಡಿದೆ.
•JKNC emerged as the largest political party in Kargil winning 12 seats!
•Current tally- JKNC+INC – 21 seats. BJP – 2 seats! pic.twitter.com/aXu4hpGigB
— JKNC (@JKNC_) October 8, 2023
ಲಡಾಖ್‌ನಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಇದು ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ಯಾತ್ರೆ’ಗೆ ಸಿಕ್ಕ ಗೆಲುವು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಗೆ ಸಿಕ್ಕಿ ಈ ಭರ್ಜರಿ ಗೆಲುವು ಕೇಂದ್ರದ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಜೆಕೆಎನ್‌ಸಿ ಮುಖ್ಯಸ್ಥ ಉಮರ್ ಅಬ್ದುಲ್ಲಾ ಹೇಳಿದ್ದಾರೆ.