- ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚನೆ
- ನೈಸರ್ಗಿಕ ವಿಕೋಪದ ವೇಳೆ ತುರ್ತು ನಿರ್ಧಾರ ಕೈಗೊಳ್ಳಲಿರುವ ಸಮಿತಿ
ರಾಜ್ಯದಲ್ಲಿನ ಬರ, ಪ್ರವಾಹ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ಉದ್ಭವಿಸಬಹುದಾದ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ರಾಜ್ಯ ಸರ್ಕಾರ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿದೆ.
ಕಂದಾಯ ಸಚಿವ ಕೃಷ್ಣಭೈರೇಗೌಡರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಈ ಸಮಿತಿ, ರಾಜ್ಯದಲ್ಲಿ ಉದ್ಬವಿಸಬಹುದಾದ ಬರ, ಪ್ರವಾಹ ಮತ್ತು ಇತರ ನೈಸರ್ಗಿಕ ವಿಕೋಪಗಳ ಕುರಿತು ಪರಾಮರ್ಶಿಸುವುದರ ಜೊತೆಗೆ ಇವನ್ನು ಸಮರ್ಥವಾಗಿ ನಿಭಾಯಿಸಿ ನಿರ್ದೇಶನ ನೀಡಲಿದೆ.
ಸರ್ಕಾರ ರಚಿಸಿರುವ ಸಂಪುಟ ಉಪಸಮಿತಿ ಸದಸ್ಯರ ವಿವರ ಈ ಕೆಳಗಿನಂತಿದೆ.
ಕೃಷ್ಣಭೈರೇಗೌಡ (ಅಧ್ಯಕ್ಷರು), ಸತೀಶ್ ಜಾರಕಿಹೊಳಿ (ಸದಸ್ಯರು), ಪ್ರಿಯಾಂಕ್ ಖರ್ಗೆ (ಸದಸ್ಯರು), ಎನ್. ಚಲುವರಾಯಸ್ವಾಮಿ (ಸದಸ್ಯರು), ಎಸ್.ಎಸ್. ಮಲ್ಲಿಕಾರ್ಜುನ್ (ಸದಸ್ಯರು), ಕೆ.ಎನ್. ರಾಜಣ್ಣ(ಸದಸ್ಯರು).