ಜ.22ರಂದು ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳಲಿರುವ ರಾಮಮಂದಿರ ಲೋಕಾರ್ಪಣೆಯ ಕಾರ್ಯಕ್ರಮವು ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ನಾಯಕರ ಹೇಳಿಕೆ, ಬೆಳವಣಿಗೆಗಳು ಒಂದೊಂದು ರಾಜ್ಯಗಳಲ್ಲಿ ಒಂದೊಂದು ವಿವಾದಗಳು ಉಂಟಾಗುತ್ತಿದೆ.
ಕರ್ನಾಟಕದಲ್ಲಿ ಸದ್ಯ ಬಿಜೆಪಿ ಹೇಳುತ್ತಿರುವ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನವು ವಿವಾದವಾಗಿದ್ದರೆ, ನೆರೆಯ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ನಾಯಕನೋರ್ವ ನೀಡಿರುವ ‘ರಾಮ ಮಾಂಸಾಹಾರಿ’ ಹೇಳಿಕೆಯು ವಿವಾದ ಸೃಷ್ಟಿಸಿದೆ.
ಎನ್‌ಸಿಪಿ ಶರದ್ ಪವಾರ್ ಬಣದ ಶಾಸಕ ಮತ್ತು ಮಾಜಿ ಸಚಿವ ಜಿತೇಂದ್ರ ಆವ್ಹಾದ್, ಶ್ರೀರಾಮನನ್ನು ಮಾಂಸಾಹಾರಿ ಎಂದು ಕರೆಯುವ ಮೂಲಕ ವಿವಾದ ಹುಟ್ಟು ಹಾಕಿದ್ದಾರೆ. ಇದಕ್ಕೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಜಿತೇಂದ್ರ ಅವರ ಈ ಹೇಳಿಕೆಗೆ ಸಂಬಂಧಿಸಿದಂತೆ ಅಜಿತ್ ಪವಾರ್ ಬಣದ ಎನ್‌ಸಿಪಿ ಕೂಡ ಮುಂಬೈನಲ್ಲಿ ಪ್ರತಿಭಟನೆ ನಡೆಸಿದೆ.
मैं अरुण यादव महाराष्ट्र सरकार से इस रामद्रोही JITENDRA AWHAD को तुरंत गिरफ्तार करने की मांग कर रहा हूं।
मेरे साथ सभी राम भक्त इस ट्रेंड का समर्थन करे। 👇👇#ArrestJitendraAwhad https://t.co/Tr4wwg2isQ pic.twitter.com/N8RI3BFNLZ
— Arun Yadav🇮🇳 (@beingarun28) January 3, 2024
“ರಾಮ ನಮ್ಮವನು, ಬಹುಜನರಿಗೆ ಸೇರಿದವನು. ರಾಮ ಬೇಟೆಯಾಡಿ ಪ್ರಾಣಿಗಳನ್ನು ತಿನ್ನುತ್ತಿದ್ದ. ನಾವು ರಾಮನನ್ನು ಆದರ್ಶ ಎಂದು ಪರಿಗಣಿಸಿ ಕುರಿ ಮಾಂಸ ತಿನ್ನುತ್ತೇವೆ. ಇದು ರಾಮನ ಆದರ್ಶ. 14 ವರ್ಷಗಳ ಕಾಲ ಕಾಡಿನಲ್ಲಿ ವಾಸಿಸುವ ವ್ಯಕ್ತಿಯು ಸಸ್ಯಾಹಾರವನ್ನು ಹುಡುಕಲು ಎಲ್ಲಿಗೆ ಹೋಗುತ್ತಾನೆ” ಎಂದು ಅವರು ಹೇಳಿದರು.
“ರಾಮ ಕ್ಷತ್ರಿಯ, ಕ್ಷತ್ರಿಯರು ಎಂದೂ ಮಾಂಸಾಹಾರಿಗಳು, ರಾಮ ಕೂಡ ಮಾಂಸಾಹಾರಿಯಾಗಿದ್ದ. ಬಿಜೆಪಿ ಮತ್ತು ಆರ್‍ಎಸ್‌ಎಸ್‌ನವರು ಭಾರತವನ್ನು ಸಸ್ಯಾಹಾರಿ ದೇಶವನ್ನಾಗಿಸಲು ಹೊರಟಿದ್ದಾರಾ? ಈ ದೇಶದ 80 ಶೇ. ಜನರು ಮಾಂಸಾಹಾರಿಗಳು. ಅವರಲ್ಲಿ ರಾಮಭಕ್ತರೂ ಕೂಡ ಇಲ್ಲವೇ. ಇದರಲ್ಲಿ ವಿವಾದ ಏನಿದೆ?” ಎಂದು ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ತೆರಳುತ್ತಿದ್ದ ವೇಳೆ ಜಿತೇಂದ್ರ ಆವ್ಹಾದ್ ಪ್ರಶ್ನಿಸಿದ್ದಾರೆ.
#WATCH | Pune, Maharashtra: BJP workers stage protest against NCP-Sharad Pawar faction leader Jitendra Awhad’s statement pic.twitter.com/pUn9gkZ6U4
— ANI (@ANI) January 4, 2024
ಈ ಕುರಿತು ಪ್ರತಿಕ್ರಿಯಿಸಿರುವ ಹಲವು ಬಿಜೆಪಿ ಮುಖಂಡು, “ಜಿತೇಂದ್ರ ಆವ್ಹಾದ್ ನೀಡಿರುವ ಹೇಳಿಕೆಯು ಹಾಸ್ಯಾಸ್ಪದ. ಶ್ರೀರಾಮ ಕಾಡಿನಲ್ಲಿ ಏನು ತಿನ್ನುತ್ತಿದ್ದರು ಎಂಬುದನ್ನು ನೋಡಲು ಹೋಗಿದ್ದರೇ? ಜ.22ರಂದು ರಾಮ ಮಂದಿರದ ಅದ್ಧೂರಿ ಉದ್ಘಾಟನೆ ನಡೆಯುತ್ತಿರುವುದರಿಂದ ಇಂಡಿಯಾ ಮೈತ್ರಿಕೂಟದ ಜನರಿಗೆ ಹೊಟ್ಟೆ ನೋವು ಅಷ್ಟೆ, ಇಷ್ಟು ದೊಡ್ಡ ಹೇಳಿಕೆ ನೀಡಿದ ನಂತರವೂ ರಾಹುಲ್ ಗಾಂಧಿ ಮತ್ತು ಉದ್ಧವ್ ಠಾಕ್ರೆ ಏಕೆ ಮೌನವಾಗಿದ್ದಾರೆ? ಸನಾತನ ಧರ್ಮವನ್ನು ಅವಹೇಳನ ಮಾಡಿದ್ದಾರೆ” ಎಂದು ಕಿಡಿಕಾರುತ್ತಿದ್ದಾರೆ.
ಕ್ಷಮೆಯಾಚನೆ
“ಸಂಶೋಧನೆ ಇಲ್ಲದೆ ಮಾತನಾಡಿಲ್ಲ. ಈ ಬಗ್ಗೆ ಮೂಲ ರಾಮಾಯಣದಲ್ಲೇ ಉಲ್ಲೇಖವಿದೆ. ಆದರೆ ನನ್ನ ಹೇಳಿಕೆಯಿಂದ ಭಾವನೆಗೆ ಧಕ್ಕೆಯಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಹೇಳಿಕೆಯು ವಿವಾದ ಉಂಟು ಮಾಡಿದ ನಂತರ ಎನ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್ ತಿಳಿಸುವ ಮೂಲಕ ಕ್ಷಮೆಯಾಚಿಸಿದ್ದಾರೆ. ಅಲ್ಲದೇ, ರಾಮಾಯಣದ ಕೆಲವೊಂದು ಅಧ್ಯಾಯಗಳನ್ನು ಮಾಧ್ಯಮಗಳಿಗೆ ತೋರಿಸಿದ್ದಾರೆ.
#WATCH | On his “non-vegetarian” comment on Lord Ram, NCP-Sharad Pawar faction leader Jitendra Awhad says, “I express regret. I did not want to hurt anyone’s sentiments.” pic.twitter.com/wFIAXQXAKb
— ANI (@ANI) January 4, 2024