ಕಳೆದ ಕೆಲವು ದಿನಗಳಿಂದ ಎನ್‌ಸಿಪಿ (ಎಸ್‌ಪಿ) ವಕ್ತಾರ ವಿಕಾಸ್ ಲಾವಾಂಡೆ ಅವರಿಗೆ ನೂರಾರು ಬೆದರಿಕೆ ಕರೆಗಳು ಬರುತ್ತಿವೆ ಎಂದು ಎನ್‌ಸಿಪಿ (ಎಸ್‌ಪಿ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಹೇಳಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಪುಣೆ ಪೊಲೀಸ್ ಆಯುಕ್ತರು ಈ ಬಗ್ಗೆ ತಕ್ಷಣವೇ ಕ್ರಮಕೈಗೊಳ್ಳಬೇಕೆಂದು ಸುಪ್ರಿಯಾ ಒತ್ತಾಯಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸುಪ್ರಿಯಾ ಸುಳೆ ಅವರು, “ಕೊಲೆ ಬೆದರಿಕೆ ನೀಡುತ್ತಿರುವವರು ಸಂಭಾಜಿ ಭಿಡೆ ಗುರೂಜಿ ಅವರ ಅನುಯಾಯಿಗಳು ಎಂದು ಹೇಳಿಕೊಳ್ಳುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ನನಗೆ ಯಾರಿಂದಲೂ ಜೀವ ಬೆದರಿಕೆ ಕರೆ ಬಂದಿಲ್ಲ: ಮೃತ್ಯುಂಜಯ ಸ್ವಾಮೀಜಿ
“ಈ ಸಂಬಂಧ ರಾಜ್ಯ ಮುಖ್ಯಮಂತ್ರಿ ಮತ್ತು ಪುಣೆ ನಗರ ಪೊಲೀಸರಿಗೆ ವಿವರವಾದ ಪುರಾವೆಗಳೊಂದಿಗೆ ದೂರು ಸಲ್ಲಿಸಲಾಗಿದೆ. ಆದರೆ ಇನ್ನೂ ಕೂಡಾ ಯಾರ ವಿರುದ್ಧವೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂದು ತನ್ನ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.
गेल्या काही दिवसांपासून राष्ट्रवादी काँग्रेस पार्टी शरदचंद्र पवार पक्षाचे प्रवक्ते विकास लवांडे यांना संभाजी भिडे गुरुजींचे धारकरी म्हणवनाऱ्यांकडून शेकडोच्या संख्येने फोनवरून व सोशल माध्यमातून जाहीरपणे जीवे मारण्याच्या व घात अपघात करू अशा अनेक धमक्या आलेल्या आहेत. याबाबत त्यांनी… pic.twitter.com/OzDM5EQYTe
— Supriya Sule (@supriya_sule) March 22, 2025
ಮಾರ್ಚ್ 1 ರ ಸಂಜೆ 250 ರಿಂದ 300 ಯುವಕರ ಗುಂಪು ಹವೇಲಿ ತಾಲ್ಲೂಕಿನ ವಿಕಾಸ್ ಲಾವಾಂಡೆ ಅವರ ಮನೆಯ ಭಾಗದಲ್ಲಿ ಗಮಭೆ ಸೃಷ್ಟಿಸುವ ಉದ್ದೇಶದಿಂದ ಹೋಗಿತ್ತು. “ಆ ಸಮಯದಲ್ಲಿ, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಗ್ರಾಮದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಯಿತು. ಹೀಗಾಗಿ ದೊಡ್ಡ ಅನಾಹುತ ತಪ್ಪಿತು” ಎಂದು ತಿಳಿಸಿದರು. ನಿನ್ನೆಯೂ ಅಪರಿಚಿತ ಕರೆಗಳು ಬಂದಿವೆ. ಲಾವಾಂಡೆಗೆ ಬೆದರಿಕೆ ಹಾಕಲಾಗಿದೆ ಎಂದು ಸುಪ್ರಿಯಾ ಹೇಳಿದ್ದಾರೆ.
