- ಹಲವು ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶಿಸಿದ ರಾಜ್ಯ ಸರ್ಕಾರ
- ವಾರ್ತಾ ಇಲಾಖೆ ಆಯುಕ್ತರಾದ ಐಪಿಎಸ್ ಹೇಮಂತ್ ನಿಂಬಾಳ್ಕರ್
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೂತನ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹಾಗೆಯೇ 11 ಐಎಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಂಜುನಾಥ್ ಪ್ರಸಾದ್ ಅವರನ್ನು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನಾಗಿಸಿ, ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅವರನ್ನು ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಿದೆ.
ಈ ಸುದ್ದಿ ಓದಿದ್ದೀರಾ? : ಸಹಾಯಕ ಸರ್ಕಾರಿ ಅಭಿಯೋಜಕರು, ಸಹಾಯಕ ಸರ್ಕಾರಿ ವಕೀಲರ ನೇಮಕಾತಿ ಅಕ್ರಮ ಬಗ್ಗೆ ತನಿಖೆಗೆ ಸಿಎಂ ಸೂಚನೆ
ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಹೀಗಿದೆ.
ಮಂಜುನಾಥ್ ಪ್ರಸಾದ್- ಪ್ರದಾನ ಕಾರ್ಯದರ್ಶಿ, ಸಹಕಾರ ಇಲಾಖೆ
ಅನ್ಬುಕುಮಾರ್ –ಕಾರ್ಯದರ್ಶಿ, ಕೃಷಿ ಇಲಾಖೆ
ಕಪಿಲ್ ಮೋಹನ್- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರವಾಸೋದ್ಯಮ
ರಿಚರ್ಡ್ ಡಿಸೋಜ –ಕಾರ್ಯದರ್ಶಿ, ಎಂಎಸ್ ಎಂಇ ಮತ್ತು ಮೈನ್ ಇಲಾಖೆ
ಉಮಾಶಂಕರ್ -ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ
ಮೋಹನ್ ರಾಜ್- ಕಾರ್ಯದರ್ಶಿ, ತೋಟಗಾರಿಕೆ ಇಲಾಖೆ
ಗಿರೀಶ್ –ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ
ಕರೀಗೌಡ- ಅಟಲ್ ಜನಸ್ನೇಹಿ ಕೇಂದ್ರ, ನಿರ್ದೇಶಕರು
ಪಾಟೀಲ್ ಯಲಗೌಡ ಶಿವನಗೌಡ –ಕೃಷಿ ಇಲಾಖೆ, ಆಯುಕ್ತ
ಡಾ. ಮಹೇಶ್ –ಸಿಇಒ, ಕೆಐಎಡಿಬಿ
ಜಗದೀಶ್ –ಎಂಡಿ, ಪ್ರವಾಸೋದ್ಯಮ