ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ‘ನ್ಯೂಸ್ ಕ್ಲಿಕ್’ಆನ್‌ಲೈನ್ ಪೋರ್ಟಲ್ ಸಂಸ್ಥೆಯ ವಿರುದ್ಧ ದಾಖಲಿಸಿಕೊಳ್ಳಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದ ದೆಹಲಿ ಪೊಲೀಸರ ವಿಶೇಷ ಸೆಲ್‌ನ ಅಧಿಕಾರಿಗಳು, ಸಂಜೆಯ ವೇಳೆಗೆ ಸಂಸ್ಥಾಪಕ ಮತ್ತು ಮುಖ್ಯ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರನ್ನು ಬಂಧಿಸಿದ್ದಾರೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳ ಅಡಿಯಲ್ಲಿ ಬಂಧಿಸಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.
Delhi Police arrests Prabir Purkayastha, Founder and Editor-in-Chief of NewsClick and Amit Chakraborty, HR Head of NewsClick in an alleged terror case.
— Vijaita Singh (@vijaita) October 3, 2023
ಚೀನಾ ಪರ ಪ್ರಚಾರಕ್ಕಾಗಿ ನ್ಯೂಸ್ ಪೋರ್ಟಲ್ ಹಣವನ್ನು ಪಡೆದಿರುವ ಆರೋಪದ ಮೇಲೆ ಇಂದು ನ್ಯೂಸ್‌ಕ್ಲಿಕ್ ಕಚೇರಿಯನ್ನು ದೆಹಲಿ ಪೊಲೀಸರು ಜಪ್ತಿ ಮಾಡಿದ್ದರು. ಅಲ್ಲದೇ, ಇದೇ ಪ್ರಕರಣದಲ್ಲಿ ಪತ್ರಕರ್ತ ಅಮಿತ್ ಚಕ್ರವರ್ತಿಯನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Delhi police arrests #NewsClick founders Prabir Purkayastha & Amit Chakravarty in UAPA case.
— Hari Prabhakaran (@Hariindic) October 3, 2023
NewsClick office sealed by Delhi Police after massive raids over China funds case ⚡
Proceedings still ongoing. Delhi Police & Mumbai police also conducted searches at the residence of…
“37 ಪುರುಷ ಶಂಕಿತರನ್ನು ಠಾಣೆಗೆ ಕರೆಸಿ, ಪ್ರಶ್ನಿಸಲಾಗಿದೆ. 9 ಮಹಿಳಾ ಶಂಕಿತರನ್ನು ಅವರ ಆಯಾ ಸ್ಥಳಗಳಲ್ಲಿ ಪ್ರಶ್ನಿಸಲಾಗಿದೆ” ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ? ಶೋಧ ಕಾರ್ಯಾಚರಣೆಯ ಬಳಿಕ ‘ನ್ಯೂಸ್ ಕ್ಲಿಕ್’ ಕಚೇರಿಯನ್ನು ಜಪ್ತಿ ಮಾಡಿದ ದೆಹಲಿ ಪೊಲೀಸರು
ಚೀನಾ ಪರ ಪ್ರಚಾರಕ್ಕಾಗಿ ಹಣ ಪಡೆದ ಆರೋಪದ ಹಿನ್ನೆಲೆಯಲ್ಲಿ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣವನ್ನು ಆಗಸ್ಟ್ 17ರಂದು ದಿಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಹೀಗಾಗಿ, ಇಂದು ಬೆಳಗ್ಗೆ ನ್ಯೂಸ್‌ಕ್ಲಿಕ್ ಮತ್ತು ಅದರ ಪತ್ರಕರ್ತರಿಗೆ ಸಂಬಂಧಿಸಿದ 30 ಸ್ಥಳಗಳಲ್ಲಿ ಏಕಕಾಲಕಕ್ಕೆ ದಾಳಿ ನಡೆಸಿ, ಶೋಧ ನಡೆಸಿತ್ತು.
ಪುರಕಾಯಸ್ತ