ಮೋದಿ ಸರ್ಕಾರದ 9 ವರ್ಷಕ್ಕೆ 9 ಸವಾಲು; ಒಂಬತ್ತು ಪ್ರಶ್ನೆ ಮುಂದಿಟ್ಟ ಕಾಂಗ್ರೆಸ್‌

Date:

Advertisements
  • ಒಂಬತ್ತು ವರ್ಷಗಳ ಅಧಿಕಾರಕ್ಕೆ ಒಂಬತ್ತು ಸವಾಲಿಟ್ಟ ಕಾಂಗ್ರೆಸ್
  • ಅಧಿಕೃತ ಜಾಲತಾಣದಲ್ಲಿ ಪಟ್ಟಿ ಪ್ರಕಟಿಸಿದ ಜೈರಾಮ್‌ ರಮೇಶ್‌

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೇ 30ಕ್ಕೆ ಒಂಬತ್ತು ವರ್ಷಗಳನ್ನು ಪೂರೈಸುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಅವರು ‘ಒಂಬತ್ತು ವರ್ಷ, ಒಂಬತ್ತು ಸವಾಲು’ ಹೆಸರಿನಲ್ಲಿ ಶುಕ್ರವಾರ (ಮೇ 26) ಪ್ರಶ್ನೆಗಳನ್ನು ಕೇಳಿದ್ದಾರೆ.

ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಜೈರಾಮ್ ರಮೇಶ್, ಬಿಜೆಪಿಗೆ ಪ್ರಶ್ನೆಗಳ ಪಟ್ಟಿ ಇರುವ ‘9 ವರ್ಷ, 9 ಪ್ರಶ್ನೆಗಳು’ ಶೀರ್ಷಿಕೆಯ ದಾಖಲೆ ಬಿಡುಗಡೆ ಮಾಡಿದ್ದಾರೆ. “ಈ ಪ್ರಶ್ನೆಗಳ ಬಗ್ಗೆ ಪ್ರಧಾನಿ ಮೋದಿ ಮೌನ ಮುರಿಯಬೇಕೆಂದು ನಾವು ಬಯಸುತ್ತೇವೆ” ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಆಡಳಿತದ ಒಂಬತ್ತು ವರ್ಷಗಳಿಗೆ ಸಂಬಂಧಿತ ಆರ್ಥಿಕತೆ, ಭ್ರಷ್ಟಾಚಾರ, ಕೋವಿಡ್‌ ನಿರ್ವಹಣೆ ಹಾಗೂ ಸಾಮಾಜಿಕ ನ್ಯಾಯದ ವಿಚಾರಗಳ ಮೇಲೆ ಕಾಂಗ್ರೆಸ್ ಈ ಒಂಬತ್ತು ಪ್ರಶ್ನೆಗಳನ್ನು ಕೇಳಿದೆ. “ಬಿಜೆಪಿ 9 ವರ್ಷಗಳ ಅಧಿಕಾರದ ಸಂಭ್ರಮಾಚರಣೆ ಆರಂಭಿಸುವ ಮೊದಲು ಪ್ರಧಾನಿ ಈ ಒಂಬತ್ತು ಪ್ರಶ್ನೆಗಳಿಗೆ ಉತ್ತರಿಸಬೇಕು” ಎಂದು ಕಾಂಗ್ರೆಸ್ ಟ್ವೀಟ್‌ನಲ್ಲಿ ಹೇಳಿದೆ.

Advertisements

ಕಾಂಗ್ರೆಸ್‌ ಪಟ್ಟಿ ಮಾಡಿರುವ ಒಂಬತ್ತು ಪ್ರಶ್ನೆಗಳು

  1. ಆರ್ಥಿಕತೆ: ಭಾರತದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಏಕೆ ಗಗನಕ್ಕೇರುತ್ತಿದೆ? ಶ್ರೀಮಂತರು ಏಕೆ ಶ್ರೀಮಂತರಾದರು, ಬಡವರು ಬಡವರಾಗಿದ್ದಾರೆ? ಆರ್ಥಿಕ ಅಸಮಾನತೆಗಳು ಹೆಚ್ಚುತ್ತಿರುವಾಗಲೂ ಸಾರ್ವಜನಿಕ ಆಸ್ತಿಯನ್ನು ಪ್ರಧಾನಿ ಮೋದಿ ಸ್ನೇಹಿತರಿಗೆ ಏಕೆ ಮಾರಾಟ ಮಾಡುತ್ತಿದ್ದಾರೆ?
  2. ಕೃಷಿ ಮತ್ತು ರೈತರು: ಮೂರು ಕಪ್ಪು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಾಗ ರೈತರೊಂದಿಗೆ ಮಾಡಿಕೊಂಡ ಒಪ್ಪಂದಗಳನ್ನು ಏಕೆ ಗೌರವಿಸಲಾಗಿಲ್ಲ? ಕನಿಷ್ಠ ಬೆಂಬಲ ಬೆಲೆಯನ್ನು ಏಕೆ ಕಾನೂನುಬದ್ಧವಾಗಿ ಖಾತರಿಪಡಿಸಿಲ್ಲ? ಕಳೆದ 9 ವರ್ಷಗಳಲ್ಲಿ ರೈತರ ಆದಾಯ ಏಕೆ ದ್ವಿಗುಣಗೊಂಡಿಲ್ಲ?
  3. ಭ್ರಷ್ಟಾಚಾರ: ನಿಮ್ಮ ಸ್ನೇಹಿತ ಅದಾನಿಗೆ ಲಾಭ ಮಾಡಲು ಎಲ್ಐಸಿ ಮತ್ತು ಎಸ್‌ಬಿಐನಲ್ಲಿ ಜನರು ಕಷ್ಟಪಟ್ಟು ಸಂಪಾದಿಸಿದ ಉಳಿತಾಯದ ಹಣ ಏಕೆ ಹಾಕುತ್ತಿದ್ದೀರಿ? ಕಳ್ಳರನ್ನು ತಪ್ಪಿಸಿಕೊಳ್ಳಲು ಏಕೆ ಬಿಡುತ್ತಿದ್ದೀರಿ? ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅತಿರೇಕದ ಭ್ರಷ್ಟಾಚಾರದ ಬಗ್ಗೆ ನೀವು ಏಕೆ ಮೌನವಾಗಿದ್ದೀರಿ?
  4. ಚೀನಾ ಮತ್ತು ರಾಷ್ಟ್ರೀಯ ಭದ್ರತೆ: 2020ರಲ್ಲಿ ನೀವು ಚೀನಾವನ್ನು ನಿರ್ದೋಷಿ ಎಂದು ಹೇಳಿದ ನಂತರವೂ ಅವರು ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳುವುದನ್ನು ಏಕೆ ಮುಂದುವರಿಸಿದ್ದಾರೆ? ಚೀನಾದೊಂದಿಗೆ 18 ಸಭೆಗಳನ್ನು ನಡೆಸಲಾಗಿದೆ. ಆದರೂ ಅವರು ಭಾರತೀಯ ಪ್ರದೇಶವನ್ನು ನೀಡಲು ನಿರಾಕರಿಸುತ್ತಾರೆ. ಬದಲಿಗೆ ತಮ್ಮ ಆಕ್ರಮಣಕಾರಿ ತಂತ್ರಗಳನ್ನು ಏಕೆ ಮುಂದುವರಿಸುತ್ತಾರೆ?
  5. ಸಾಮಾಜಿಕ ಸಾಮರಸ್ಯ: ನೀವು ಉದ್ದೇಶಪೂರ್ವಕವಾಗಿ ದ್ವೇಷದ ರಾಜಕೀಯವನ್ನು ಚುನಾವಣಾ ಲಾಭಕ್ಕಾಗಿ ಬಳಸುತ್ತಿರುವಿರಿ. ಸಮಾಜದಲ್ಲಿ ಭಯದ ವಾತಾವರಣವನ್ನು ಏಕೆ ಹೆಚ್ಚಿಸುತ್ತಿದ್ದೀರಿ?
  6. ಸಾಮಾಜಿಕ ನ್ಯಾಯ: ನಿಮ್ಮ ದಬ್ಬಾಳಿಕೆಯ ಸರ್ಕಾರ ಸಾಮಾಜಿಕ ನ್ಯಾಯದ ಅಡಿಪಾಯವನ್ನು ಕ್ರಮಬದ್ಧವಾಗಿ ನಾಶಪಡಿಸುತ್ತಿರುವುದು ಏಕೆ? ಮಹಿಳೆಯರು, ದಲಿತರು, ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ಬಗ್ಗೆ ಏಕೆ ಮೌನವಾಗಿದ್ದೀರಿ? ಜಾತಿ ಗಣತಿ ಬೇಡಿಕೆಯನ್ನು ಏಕೆ ನಿರ್ಲಕ್ಷಿಸುತ್ತಿದ್ದೀರಿ?
  7. ಪ್ರಜಾಪ್ರಭುತ್ವ ಮತ್ತು ಸಂಯುಕ್ತ ವ್ಯವಸ್ಥೆ: ಕಳೆದ ಒಂಬತ್ತು ವರ್ಷಗಳಲ್ಲಿ ನೀವು ನಮ್ಮ ಸಾಂವಿಧಾನಿಕ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಏಕೆ ದುರ್ಬಲಗೊಳಿಸಿದ್ದೀರಿ? ಪ್ರತಿಪಕ್ಷಗಳ ನಾಯಕರ ವಿರುದ್ಧ ಸೇಡಿನ ರಾಜಕಾರಣ ಏಕೆ ಮಾಡುತ್ತಿದ್ದೀರಿ? ಜನರಿಂದ ಚುನಾಯಿತರಾದ ಸರ್ಕಾರಗಳನ್ನು ಅಸ್ಥಿರಗೊಳಿಸಲು ನೀವು ಹಣದ ಬಲವನ್ನು ಏಕೆ ಬಳಸುತ್ತಿದ್ದೀರಿ?
  8. ಕಲ್ಯಾಣ ಯೋಜನೆಗಳು: ಬಡವರು, ನಿರ್ಗತಿಕರು ಹಾಗೂ ಬುಡಕಟ್ಟು ಜನಾಂಗದವರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಅವರ ಬಜೆಟ್‌ಗಳನ್ನು ಕಡಿತಗೊಳಿಸಿ ನಿರ್ಬಂಧಿತ ನಿಯಮಗಳನ್ನು ಮಾಡುವ ಮೂಲಕ ಏಕೆ ದುರ್ಬಲಗೊಳಿಸಲಾಗುತ್ತಿದೆ?
  9. ಕೋವಿಡ್ ದುರುಪಯೋಗ: ಕೋವಿಡ್‌ನಿಂದ 40 ಲಕ್ಷಕ್ಕೂ ಹೆಚ್ಚು ಜನರ ದುರಂತ ಸಾವಿನ ಹೊರತಾಗಿಯೂ, ಅವರ ಕುಟುಂಬಗಳಿಗೆ ಪರಿಹಾರ ನೀಡಲು ಮೋದಿ ಸರ್ಕಾರ ಏಕೆ ನಿರಾಕರಿಸಿದೆ? ಲಕ್ಷಗಟ್ಟಲೆ ಕಾರ್ಮಿಕರನ್ನು ಮನೆಗೆ ಮರಳುವಂತೆ ಮಾಡಿದ ಲಾಕ್‌ಡೌನ್ ಅನ್ನು ನೀವು ಇದ್ದಕ್ಕಿದ್ದಂತೆ ಏಕೆ ವಿಧಿಸಿದ್ದಿರಿ?

ಈ ಸುದ್ದಿ ಓದಿದ್ದೀರಾ? ಎಎಪಿ ನಾಯಕ ಸತ್ಯೇಂದ್ರ ಜೈನ್‌ಗೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು

ಪಟ್ಟಿ ಬಿಡುಗಡೆ ಮಾಡಿ ಮಾತನಾಡಿರುವ ಜೈರಾಮ್ ರಮೇಶ್, “ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಮತ್ತು ನಂತರ ರಾಹುಲ್ ಗಾಂಧಿ ಈ 9 ಪ್ರಶ್ನೆಗಳನ್ನು ನಿರಂತರವಾಗಿ ಕೇಳುತ್ತಿದ್ದರು. ಆದರೆ ಈವರೆಗೆ ಪ್ರಧಾನಿ ಅವರಿಂದ ಪಕ್ಷ ಯಾವುದೇ ಉತ್ತರ ಸ್ವೀಕರಿಸಿಲ್ಲ. ಇದು ಪ್ರಧಾನಿ ಮೌನ ಮುರಿಯುವ ಸಮಯ” ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X