ಬೆಂಗಳೂರಿನಲ್ಲಿ ನಿರ್ಮಲಾ ಸೀತಾರಾಮನ್: ’ಬಹಿರಂಗ ಚರ್ಚೆ’ಗೆ ಬರ್ತಾರಾ? ಬೆನ್ನು ತಿರುಗಿಸಿ ಓಡ್ತಾರಾ?

Date:

Advertisements

ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯವಾಗುತ್ತಿದೆಯೆಂಬ ಕೂಗಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉತ್ತರಿಸಬೇಕೆಂದು ಹಮ್ಮಿಕೊಳ್ಳಲಾಗಿರುವ ಬಹಿರಂಗ ಚರ್ಚೆಗೆ ನಿರ್ಮಲಾ ಅವರು ಬರುತ್ತಾರಾ ಅಥವಾ ಬೆನ್ನು ತಿರುಗಿಸಿ ಹೋ‌ಗುತ್ತಾರಾ ಎಂಬ ಕುತೂಹಲ ಹುಟ್ಟಿದೆ.

ರಾಜ್ಯದ ಜನರ ಪರವಾಗಿ ಜಾಗೃತ ಕರ್ನಾಟಕ ಸಂಘಟನೆ ಆಯೋಜಿಸಿರುವ ಚರ್ಚೆಗೆ ರಾಜ್ಯ ಸರ್ಕಾರದ ಭಾಗವಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಪಾಲ್ಗೊಳ್ಳುವುದಾಗಿ ಘೋಷಿಸಿದ್ದಾರೆ. ಕೇಂದ್ರದ ಪ್ರತಿನಿಧಿಯಾಗಿ ನಿರ್ಮಲಾ ಸೀತಾರಾಮನ್‌ ಅವರು ಬರಬೇಕೆಂದು ಆಗ್ರಹಿಸಲಾಗುತ್ತಿದೆ. ಶನಿವಾರ (ಇಂದು) ಸಂಜೆ 5.30ಕ್ಕೆ ಚರ್ಚೆಯನ್ನು ಏರ್ಪಡಿಸಲಾಗಿದೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಅನೇಕರು ಈಗಾಗಲೇ ನಿರ್ಮಲಾ ಸೀತಾರಾಮನ್ ಅವರನ್ನು ಟ್ಯಾಗ್‌ ಮಾಡಿ ಒತ್ತಾಯಿಸಿದ್ದಾರೆ. ಇಂದು ಬೆಂಗಳೂರಿನಲ್ಲಿಯೇ ಹಣಕಾಸು ಸಚಿವರು ಇರುವುದು ಭರವಸೆಯನ್ನು ಹುಟ್ಟು ಹಾಕಿದೆ ಎಂದು ಕಾರ್ಯಕ್ರಮ ಸಂಘಟಕರು ಹೇಳಿದ್ದಾರೆ.

Advertisements

“ಬಿಜೆಪಿಯ ಮಾಧ್ಯಮ ಸಂಚಾಲಕ‌ ಕರುಣಾಕರ ಖಾಸಲೆಯವರು ಎಲ್ಲಾ ಮಾಧ್ಯಮದವರಿಗೆ ಕಳಿಸಿರುವ ಆಹ್ವಾನದಂತೆ – ಇಂದು (ಶನಿವಾರ) ಮಧ್ಯಾಹ್ನ 3.15ಕ್ಕೆ ಬೆಂಗಳೂರಿನ ಜಿ.ಎಂ.ರಿಜಾಯ್ಜ್ ಹೋಟೆಲಿನಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಅವರು ಸಂಜೆಯ ಗಾಂಧಿಭವನದ ಮುಖಾಮುಖಿ ಚರ್ಚೆಗೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಈಗಾಗಲೇ ಸಾಕಷ್ಟು ಏಕಮುಖಿ ಚರ್ಚೆ ಆಗಿದೆ. ಮುಖಾಮುಖಿ ಚರ್ಚೆಗೂ ಅವರು ಇಂದು ಸಂಜೆ ಬರುತ್ತಾರೆಂದು ಆಶಿಸುತ್ತೇವೆ” ಎಂದು ಸಂಘಟಕರು ತಿಳಿಸಿದ್ದಾರೆ.

ಬರ ಪರಿಹಾರ, ತೆರಿಗೆ ಪಾಲು ಕೊಡುವಲ್ಲಿ ಭಾರೀ ವಂಚನೆ ಸೇರಿದಂತೆ ರಾಜ್ಯ ಸರ್ಕಾರ ಕಾನೂನು ಹೋರಾಟಕ್ಕೂ ಇಳಿದಿದೆ. “ಉಚಿತ ಯೋಜನೆಗಳಿಗೆ ರಾಜ್ಯ ಸರ್ಕಾರ ಹಣ ಖರ್ಚು ಮಾಡಿ, ನಮ್ಮ ಬಳಿ ಕೇಳುತ್ತಿದೆ. ಕೇಂದ್ರದಿಂದ ಬಿಡಿಗಾಸು ಕೂಡ ಬಾಕಿ ಇಲ್ಲ” ಎಂದು ನಿರ್ಮಲಾ ಸೀತಾರಾಮನ್ ಅವರು ವಾದ ಮಾಡುತ್ತಾ ಬಂದಿದ್ದಾರೆ.

ಆದರೆ ರಾಜ್ಯ ಸರ್ಕಾರವು ಕೇಂದ್ರದ ವಾದವನ್ನು ತಳ್ಳಿ ಹಾಕಿದೆ. “ನಮ್ಮ ಕಲ್ಯಾಣ ಕಾರ್ಯಕ್ರಮಗಳಿಗೆ ಕೇಂದ್ರದಿಂದ ಯಾವುದೇ ಹಣ ಬೇಡ. ಆದರೆ ನಮಗೆ ಬರಬೇಕಿರುವ ಬರ ಪರಿಹಾರವನ್ನು ಮತ್ತು ತೆರಿಗೆ  ಪಾಲನ್ನು ಪಾವತಿ ಮಾಡಲಿ” ಎಂದು ದಾಖಲೆಗಳನ್ನು ಇಟ್ಟು ಮಾತನಾಡುತ್ತಿರುವ ಕಂದಾಯ ಸಚಿವರು ಸಂವಾದಕ್ಕೂ ಸೈ ಎಂದಿದ್ದಾರೆ. ಸದ್ಯ ಕೇಂದ್ರದ ವಿತ್ತ ಸಚಿವರು, ಚರ್ಚೆಗೆ ಬರುತ್ತಾರಾ ಅಥವಾ ಹಿಟ್ ಅಂಡ್ ರನ್‌ ಮಾಡುತ್ತಾರಾ- ಎಂಬ ಕುತೂಹಲ ಕನ್ನಡಿಗರಲ್ಲಿ ಮೂಡಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X