“2024ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬರುತ್ತಿದ್ದಂತೆಯೇ ಇಂಡಿಯಾ ಮೈತ್ರಿಕೂಟದ ಹಲವು ಮಂದಿ ಮುಖಂಡರು ನಿತೀಶ್ ಕುಮಾರ್ ಅವರನ್ನು ಸಂಪರ್ಕ ಮಾಡಿ ಪ್ರಧಾನಿ ಹುದ್ದೆಯ ಆಫರ್ ನೀಡಿದ್ದರು. ಆದರೆ ನಾವು ತಿರಸ್ಕರಿಸಿದೆವು” ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ ಸಿ ತ್ಯಾಗಿ ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, “ಲೋಕಸಭಾ ಚುನಾವಣೆಯ ಫಲಿತಾಂಶದ ಸಮಯದಲ್ಲಿ ಎನ್‌ಡಿಎ ತೊರೆದು ಇಂಡಿಯಾ ಒಕ್ಕೂಟ ಸೇರಿದರೆ ನಿತೀಶ್ ಕುಮಾರ್ ಅವರನ್ನೇ ಪ್ರಧಾನಿ ಮಾಡುವುದಾಗಿ ಆಫರ್ ನೀಡಿದ್ದರು. ಇದನ್ನು ದೃಢೀಕರಿಸುವ ಫೋನ್ ದಾಖಲೆಗಳು ನಮ್ಮ ಬಳಿ ಇವೆ” ಎಂದು ಆರೋಪಿಸಿದ್ದಾರೆ.
VIDEO | Here’s what JD(U) General Secretary KC Tyagi said on the party’s decision to leave INDIA bloc to join the NDA during Lok Sabha 2024 elections.
“All the regional partners were in favour of making Nitish Kumar the convenor but in a conspiracy, Arvind Kejriwal and Mamata… pic.twitter.com/6CeCn9quBC
— Press Trust of India (@PTI_News) June 8, 2024
ಲೋಕಸಭಾ ಚುನಾವಣೆಗೂ ಮುನ್ನ ಇಂಡಿಯಾ ಮೈತ್ರಿಕೂಟವನ್ನು ನಿತೀಶ್ ಕುಮಾರ್ ಅವರು ತೊರೆಯಲು ಕಾರಣ ಏನು ಎಂಬ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ ಸಿ ತ್ಯಾಗಿ, “ಇಂಡಿಯಾ ಮೈತ್ರಿಕೂಟದ ಮೊದಲ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಪ್ರಾದೇಶಿಕ ಪಕ್ಷಗಳ ಮುಖಂಡರು ನಿತೀಶ್ ಕುಮಾರ್ ಅವರನ್ನೇ ಸಂಚಾಲಕರನ್ನಾಗಿ ಮಾಡುವ ಆಸಕ್ತಿ ಹೊಂದಿದ್ದರು. ಆದರೆ ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿ ಅವರು ಪಿತೂರಿ ಮಾಡಿದ್ದರಿಂದ ಅವರಿಗೆ ಆ ಸ್ಥಾನ ಲಭಿಸಿಲ್ಲ. ಆ ಬಳಿಕ ಪ್ರಧಾನಿ ಹುದ್ದೆಗೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಕೂಡ ಶಿಫಾರಸು ಮಾಡಿದರು” ಎಂದು ತಿಳಿಸಿದ್ದಾರೆ.
“ನಿತೀಶ್ ಕುಮಾರ್ ಅವರು ಇಂಡಿಯಾ ಮೈತ್ರಿಕೂಟದ ಸಂಚಾಲಕರಾಗುವುದಕ್ಕೆ ವಿರೋಧ ವ್ಯಕ್ತಪಡಿಸಿ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಪ್ರಶ್ನೆಗಳನ್ನು ಎತ್ತಿದರು. ಎಲ್ಲರನ್ನೂ ಒಟ್ಟುಗೂಡಿಸಲು ಆಗ ಶ್ರಮಿಸಿದ್ದು ನಿತೀಶ್ ಕುಮಾರ್. ಆದರೆ, ಅವರನ್ನು ಸಂಚಾಲಕರನ್ನಾಗಿ ಮಾಡುವುದರಿಂದ ತಪ್ಪಿಸಿದರು. ಇಂತಹ ಅವಮಾನವನ್ನು ಎದುರಿಸುವುದು ನಮಗೆ ಸ್ವೀಕರಿಸಲು ಆಗಿಲ್ಲ. ನಾವು ಅವರ ಒಳಗಿನ ಉದ್ದೇಶವನ್ನು ಅರ್ಥಮಾಡಿಕೊಂಡೆವು. ಹಾಗಾಗಿಯೇ, ಜೆಡಿಯು ಇಂಡಿಯಾ ಮೈತ್ರಿಕೂಟದೊಂದಿಗಿನ ಸಂಬಂಧವನ್ನು ಮುರಿದುಕೊಂಡು ಎನ್‌ಡಿಎ ಸೇರಿದೆ” ಎಂದು ಹೇಳಿಕೆ ನೀಡಿದ್ದಾರೆ.
#WATCH | Delhi: JD(U) spokesperson KC Tyagi says, “It shows the political bankruptcy of the leaders of INDIA bloc who were not ready to make Nitish Kumar the convener of the alliance, they offered him the PM post. I am happy that JDU leadership rejected them and Nitish Kumar… pic.twitter.com/DxDn5cj6zq
— ANI (@ANI) June 8, 2024
“ಚುನಾವಣೆಗೂ ಮೊದಲು ನಿತೀಶ್ ಕುಮಾರ್ ಅವರು ಸಂಚಾಲಕರಾಗುವುದನ್ನು ಇಷ್ಟಪಡದ ಇಂಡಿಯಾ ಮೈತ್ರಿಕೂಟದ ನಾಯಕರು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬರುತ್ತಿದ್ದಂತೆಯೇ ಪ್ರಧಾನಿ ಹುದ್ದೆಯನ್ನು ಆಫರ್ ನೀಡಿದರು. ನಾವು ಅದನ್ನು ತಿರಸ್ಕರಿಸಿ ಎನ್‌ಡಿಎ ಜೊತೆಗೆ ಮೈತ್ರಿ ಮುಂದುವರಿಸಿದ್ದೇವೆ. ನರೇಂದ್ರ ಮೋದಿಯವರನ್ನು ಎನ್‌ಡಿಎ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪಿದ್ದೇವೆ” ಎಂದು ಜೆಡಿಯು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ತ್ಯಾಗಿ ತಿಳಿಸಿದ್ದಾರೆ.
‘ನಮಗೆ ಈವರೆಗೆ ಅಂತಹ ಯಾವುದೇ ಮಾಹಿತಿ ಇಲ್ಲ’ ಎಂದ ಜೆಡಿಯು ಮುಖಂಡ!
ಕೆ ಸಿ ತ್ಯಾಗಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಇನ್ನೋರ್ವ ಜೆಡಿಯು ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಕುಮಾರ್ ಝಾ, “ನಿತೀಶ್ ಕುಮಾರ್ ಅವರಿಗೆ ಇಂಡಿಯಾ ಒಕ್ಕೂಟದಿಂದ ಪ್ರಧಾನಿ ಆಫರ್ ಬಂದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ” ಎಂದು ವ್ಯತಿರಿಕ್ತವಾದ ಹೇಳಿಕೆ ನೀಡಿದ್ದಾರೆ.
VIDEO | “Our party is not aware about it. In fact, the CM – Nitish Kumar – isn’t aware about it. During the NDA parliamentary party meeting yesterday, Nitish Kumar has clearly said that we had formed a pre-poll alliance and we have won three-fourth seats in Bihar. He said… pic.twitter.com/xdb9zup8Lc
— Press Trust of India (@PTI_News) June 8, 2024
ಸುದ್ದಿ ಸಂಸ್ಥೆ ಪಿಟಿಐ ಜೊತೆಗೆ ಮಾತನಾಡಿರುವ ಅವರು, “ನಮ್ಮ ಮುಖ್ಯಮಂತ್ರಿಯವರಿಗೋ ಅಥವಾ ನಮ್ಮ ಪಕ್ಷಕ್ಕೋ ಈ ಬಗ್ಗೆ ತಿಳಿದಿಲ್ಲ. ನಿನ್ನೆ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ, ನಿತೀಶ್ ಕುಮಾರ್ ಅವರು ನಾವು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದೆವು. ಅದನ್ನು ಮುಂದುವರಿಸುತ್ತೇವೆ ಎಂದಷ್ಟೇ ಹೇಳಿದ್ದಾರೆ. ಎನ್‌ಡಿಎ ಒಕ್ಕೂಟದಿಂದ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಬಯಸುತ್ತೇವೆ ಎಂದು ನಿತೀಶ್ ಅವರೇ ಹೇಳಿದ್ದಾರೆ. ನಿತೀಶ್ ಕುಮಾರ್ ಅವರಿಗೆ ಪ್ರಧಾನಿ ಹುದ್ದೆಯ ಆಫರ್ ಬಂದಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ” ಎಂದು ಹೇಳುವ ಮೂಲಕ ಜೆಡಿಯು ಮುಖಂಡ ಕೆ ಸಿ ತ್ಯಾಗಿ ನೀಡಿದ್ದ ಹೇಳಿಕೆಗೆ ಸಂಜಯ್ ಕುಮಾರ್ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.
