ಹಿರಿಯಣ್ಣನ ಚಾಳಿ | ದ.ರಾ ಬೇಂದ್ರೆ ಪಾರ್ಕ್‌ ಬೋರ್ಡ್‌ನಲ್ಲಿ ಬೇಂದ್ರೆಯೇ ಇಲ್ಲ- ಅಶೋಕ್‌ದೇ ಎಲ್ಲ

Date:

Advertisements

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರಕ್ಕೇರಿದ ಬಳಿಕ, ದೇಶದ ರಾಜಕಾರಣದಲ್ಲಿ ಫೋಟೋಶೂಟ್‌ ಖಯಾಲಿ ಹೆಚ್ಚಾಗಿದೆ. ಎಲ್ಲೆಡೆಯೂ ತಮ್ಮದೇ ಚಿತ್ರ ಇರಬೇಕು ಎಂಬುದನ್ನು ಹಲವಾರು ರಾಜಕಾರಣಿಗಳು ಮೋದಿ ಅವರನ್ನು ನೋಡಿ ಕಲಿಯುತ್ತಿದ್ದಾರೆ. ಜಾಹೀರಾತು, ಫ್ಲೆಕ್ಸ್‌, ಪ್ಲೆಕಾರ್ಡ್‌, ಕರಪತ್ರ, ಬ್ಯಾನರ್, ಬೋರ್ಡ್‌ಗಳಲ್ಲಿ ತಮ್ಮದೇ ಫೋಟೋಗಳು ಇರಬೇಕೆಂದು ಬಯಸುವ ರಾಜಕಾರಣಿಗಳ ಸಂಖ್ಯೆ ಹೆಚ್ಚುತ್ತಿದೆ. ಅದೇ ರೀತಿಯ ಫೋಟೋ ಗೀಳು ಕರ್ನಾಟಕ ವಿಧಾನಸಭೆಯ ವಿಪಕ್ಷ ನಾಯಕ ಆರ್‌ ಅಶೋಕ್ ಅವರಿಗೂ ಬಂದಿದೆ. ಅವರು ಕೂಡ ಫೋಟೋ ಪ್ರಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಆರ್‌ ಅಶೋಕ್ ಅವರು ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕ. ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ ಇಸ್ರೋ ಬಡಾವಣೆಯ ದ.ರಾ ಬೇಂದ್ರೆ ಪಾರ್ಕ್‌ನಲ್ಲಿ ಹೊಸದಾಗಿ ಬೋರ್ಡ್‌ ಒಂದನ್ನು ಹಾಕಿಸಿದ್ದಾರೆ. ಆ ಬೋರ್ಡ್‌ನಲ್ಲಿ ‘ದ.ರಾ ಬೇಂದ್ರೆ ಉದ್ಯಾನವನ’ ಎಂದು ಬರೆಯಲಾಗಿದೆ. ಆದರೆ, ಅದರಲ್ಲಿ ಬೇಂದ್ರೆ ಅವರು ಚಿತ್ರವೇ ಇಲ್ಲ. ಬದಲಾಗಿ, ಒಂದೆಡೆ ಬಿಬಿಎಂಪಿ ಲೋಗೋ ಇದ್ದರೆ, ಮತ್ತೊಂದೆಡೆ ಆರ್‌ ಅಶೋಕ್ ಅವರ ಚಿತ್ರವಿದೆ. ಹೀಗಾಗಿ, ಬೋರ್ಡ್‌ ನೋಡಿದವರು ‘ಬೇಂದ್ರೆ ಎಲ್ಲಿದ್ದಾರೆ’ ಎಂದು ಪ್ರಶ್ನಿಸುತ್ತಿದ್ದಾರೆ. ಆ ಬೋರ್ಡ್‌ಅನ್ನು ಫೋಟೋ ತೆಗೆದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ‘ಬೇಂದ್ರೆ ಎಲ್ಲಿದ್ದಾರೆ ಹುಡುಕಿ’ ಎಂದೆಲ್ಲ ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ.

ಆದಾಗ್ಯೂ, ಇದೊಂದು ಗಂಭೀರ ವಿಚಾರ. ಯಾವವೊಂದು ಸ್ಥಳ ಅಥವಾ ಕಟ್ಟಡಕ್ಕೆ ಯಾರ ಹೆಸರನ್ನು ಇಡಲಾಗಿರುತ್ತದೆಯೋ ಅವರ ಚಿತ್ರವೇ ಇಲ್ಲದೆ, ಶಾಸಕ, ಸಂಸದ ಅಥವಾ ಅದನ್ನು ಕಟ್ಟಿಸಿದವರ ಚಿತ್ರ ಹಾಕಿಕೊಳ್ಳುವುದು ಹೆಚ್ಚುತ್ತಿದೆ. ಇದೊಂದು ಮನೋರೋಗವಾಗಿಯೂ ಕಾಣಿಸುತ್ತಿದೆ.

Advertisements

ದ.ರಾ ಬೇಂದ್ರೆ (ದತ್ತಾತ್ರೇಯ ರಾಮಚಂದ್ರ ಬೇಂದ್ರೆ) ಅವರು ಕನ್ನಡ ಸಾಹಿತ್ಯದ ದಿಗ್ಗಜ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ಮಾತ್ರವಲ್ಲ, ಕರ್ನಾಟಕದ ಸಾಂಸ್ಕೃತಿಕ ಗುರುತಿನ ಪ್ರಮುಖ ಸಂಕೇತವೂ ಆಗಿದ್ದಾರೆ. ಅವರ ಕವಿತೆಗಳು, ಕಾದಂಬರಿಗಳು ಹಾಗೂ ಚಿಂತನೆಗಳು ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಹಚ್ಚಳಿದಿವೆ. ಆದರೆ, ಅವರ ಹೆಸರಿನ ಉದ್ಯಾನವನವೊಂದರ ನಾಮಫಲಕದಲ್ಲಿ ಅವರ ಚಿತ್ರವೇ ಇಲ್ಲದಿರುವುದು ಮತ್ತು ಆರ್. ಅಶೋಕ್‌ ತಮ್ಮ ಫೋಟೋವನ್ನು ಮಾತ್ರ ಹಾಕಿಕೊಂಡಿರುವುದು ನಿಜಕ್ಕೂ ಬೇಂದ್ರೆಯವರಿಗೆ ಮಾಡಿದ ಅಪಮಾನ.

ಹೀಗಾಗಿ, ಕನ್ನಡ ಸಾಹಿತ್ಯಾಸಕ್ತರು, ಬುದ್ಧಿಜೀವಿಗಳು ಮತ್ತು ಸಾಮಾನ್ಯ ಜನರು ಆರ್ ಅಶೋಕ್ ನಡೆಯ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಬೇಂದ್ರೆಯವರ ಗೌರವಕ್ಕೆ ಧಕ್ಕೆ ತಂದ ಕೃತ್ಯವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ರಾಜಕೀಯ ಸ್ವಾರ್ಥದ ಕೃತ್ಯವೆಂದು ಟೀಕಿಸಿದ್ದಾರೆ.

ರಾಜಕಾರಣಿಗಳಿಗೆ ಸಾಂಸ್ಕೃತಿಕ ಲೋಕದ ಹೆಗ್ಗುರುತಾಗಿರುವ ಬೇಂದ್ರೆ ಅವರಂತಹವರ ಬಗ್ಗೆ ತಿಳಿವಳಿಕೆ ಇರಬೇಕು. ಸಾಂಸ್ಕೃತಿ ಚಿಹ್ನೆಗಳ ಕುರಿತ ಸೂಕ್ಷ್ಮತೆ ಇರಬೇಕು. ಆರ್ ಅಶೋಕ್ ನಡೆಯುವ ಅವರಲ್ಲಿ, ಸಾಂಸ್ಕೃತಿಕ ಸಂವೇದನೆಯ ಕೊರತೆ ಇದೆ ಎಂಬುದನ್ನು ಸೂಚಿಸುತ್ತದೆ. ತಮ್ಮ ರಾಜಕೀಯ ಲಾಭಕ್ಕಾಗಿ ಸಾಂಸ್ಕೃತಿಕ ಮೌಲ್ಯಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಲುಧಿಯಾನ ಉಪಚುನಾವಣೆ: ಎಎಪಿ ಗೆದ್ದರೆ ಅಚ್ಚರಿ ಇಲ್ಲ – ಸೋಲು ಮಾತ್ರ ದುರಂತ

ರಾಜಕಾರಣಿಗಳು ತಮ್ಮ ಫೋಟೋಗಳನ್ನು ಸಾರ್ವಜನಿಕ ಯೋಜನೆಗಳ ನಾಮಫಲಕಗಳಲ್ಲಿ ಹಾಕಿಕೊಂಡು, ತಮ್ಮ ರಾಜಕೀಯ ಗುರುತನ್ನು ಪ್ರದರ್ಶಸಿಲು ಯತ್ನಿಸುವುದು ಹೊಸತೇನಲ್ಲ. ತಾವು ತಮ್ಮ ಕ್ಷೇತ್ರದಲ್ಲಿ ಏನೆಲ್ಲ ಕೆಲಸ ಮಾಡಿದ್ದೇವೆ. ಮಾಡುತ್ತಿದ್ದೇವೆ ಎಂಬುದನ್ನು ದಿನನಿತ್ಯ ಜನರ ಗಮನಕ್ಕೆ ತರಲು ಎಲ್ಲೆಡೆ ತಮ್ಮ ಫೋಟೋಗಳನ್ನು ಹಾಕಿಕೊಳ್ಳುವುದು ರಾಜಕೀಯ ತಂತ್ರದ ಭಾಗವಾಗಿಹೋಗಿದೆ. ಆದರೆ, ತಮ್ಮ ಪ್ರಚಾರದ ಭರದಲ್ಲಿ ಆ ಬೋರ್ಟ್‌ ಅಥವಾ ಇನ್ನಾವುದೇ ಪ್ರದರ್ಶಕಗಳ ಉದ್ದೇಶವನ್ನು ಮರೆತುಬಿಡಬಾರದು. ತಮ್ಮ ಚಿತ್ರವನ್ನು ಮಾತ್ರವೇ ಹಾಕಿಕೊಳ್ಳುವಷ್ಟು ಪ್ರಚಾರದ ಗೀಳಿಗೆ ಬೀಳಬಾರದು.

ಆರ್. ಅಶೋಕ್‌ ಅವರು ತಮ್ಮ ರಾಜಕೀಯ ಸ್ವಾರ್ಥವನ್ನು ಮೀರಿ, ಒಬ್ಬ ಮಹಾನ್ ಸಾಹಿತಿ ಬಗ್ಗೆ ಗೌರವದಿಂದ ವರ್ತಿಸಬೇಕಿತ್ತು. ಬೋರ್ಡ್‌ನಲ್ಲಿ ಪ್ರಧಾನವಾಗಿ ಬೇಂದ್ರೆ ಅವರ ಚಿತ್ರವನ್ನೂ, ಬದಿಯಲ್ಲಿ ತಮ್ಮದೂ ಒಂದು ಸಣ್ಣ ಚಿತ್ರವನ್ನೂ ಹಾಕಿಕೊಳ್ಳಬಹುದಿತ್ತು,. ಆದರೆ, ಆರ್ ಅಶೋಕ್ ಅವರು ತಮ್ಮದೇ ಚಿತ್ರವನ್ನು ದೊಡ್ಡದಾಗಿ ಹಾಕಿಸಿ, ಬೇಂದ್ರ ಅವರ ಚಿತ್ರವನ್ನೇ ಕೈಬಿಟ್ಟಿದ್ದಾರೆ.

ಒಬ್ಬ ಜನಪ್ರತಿನಿಧಿಯಾಗಿ, ಆರ್ ಅಶೋಕ್ ಅವರು ಸಾಂಸ್ಕೃತಿಕ ಸಂಕೇತಗಳು ಮತ್ತು ಮೌಲ್ಯಗಳ ಗೌರವವನ್ನು ಕಾಪಾಡಬೇಕಿತ್ತು. ಆದರೆ, ಅವರು ತಮ್ಮ ವೈಯಕ್ತಿಕ ಗುರುತನ್ನು ಮಾತ್ರವೇ ತೋರಿಸಿಕೊಳ್ಳು ಆದ್ಯತೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಕ ವಿಚಾರಗಳ ಬಗ್ಗೆ ಕನ್ನಡಿಗರಿಗಿರುವ ಗೌರವವನ್ನು ಅರಿತುಕೊಳ್ಳದೆ ಬರೀ ರಾಜಕೀಯ ಲೆಕ್ಕಾಚಾರ ಹಾಕುವುದು ತಮಗೇ ಮುಳುವಾಗಿ ಪರಿಣಮಿಸಬಹುದು. ಅದನ್ನು ಆರ್ ಅಶೋಕ್ ಸೇರಿದಂತೆ ಎಲ್ಲ ರಾಜಕಾರಣಿಗಳು ಅರಿತುಕೊಳ್ಳಬೇಕು. ಆರ್ ಅಶೋಕ್ ವಿರುದ್ಧ ವ್ಯಕ್ತವಾಗುತ್ತಿರುವ ವಿಮರ್ಶೆ, ಟೀಕೆಗಳು ಉಳಿದ ರಾಜಕಾರಣಿಗಳಿಗೆ ಪಾಠವಾಗಬೇಕು. ಆರ್ ಅಶೋಕ್ ಅವರು ಸಾಹಿತ್ಯಾಸಕ್ತರ ಬಳಿ ಕ್ಷಮೆಯಾಚಿಸಿ, ಬೇಂದ್ರೆಯವರ ಚಿತ್ರವುಳ್ಳ ಹೊಸ ನಾಮಫಲಕವನ್ನು ಪಾರ್ಕ್‌ನಲ್ಲಿ ಅಳವಡಿಸಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಕಳಂಕಿತ ನೈಸ್ ಕಂಪನಿಗೆ ಯಾವುದೇ ಕಾಮಗಾರಿ ನೀಡದಂತೆ ಸರ್ಕಾರಕ್ಕೆ ನೈಸ್ ಭೂ ಸಂತ್ರಸ್ತ ರೈತರ ಆಗ್ರಹ

ಬಿಎಂಐಸಿ-ನೈಸ್ ಕಂಪನಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಸಲಹಾ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X