ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಬಹುಮತವಿಲ್ಲ. ಒಂದು ವೇಳೆ ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಸಭಾಪತಿ ಸ್ಥಾನದಲ್ಲಿ ನಾನು ಒಂದು ಕ್ಷಣವೂ ಕೂರುವುದಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿ, “ಮುಂದಿನ ವರ್ಷ ಕೆಲವೊಂದು ಸ್ಥಾನಗಳು ತೆರವಾಗಲಿವೆ. ಆಗ ಬಿಜೆಪಿಗೆ ಬಹುಮತದ ಸಮಸ್ಯೆ ಎದುರಾಗಬಹುದು. 2024ರ ಜೂನ್‌ವರೆಗೂ ಸಭಾಪತಿ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ” ಎಂದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ಗೆಳೆತನ ಹಿಂದಿನಿಂದಲೂ ಗಟ್ಟಿಯಾಗಿದೆ. ಸ್ನೇಹದಿಂದ ಭೇಟಿ ಮಾಡಿರುವೆ ಹೊರತು ರಾಜಕೀಯ ಕಾರಣಗಳಿಂದ ಅಲ್ಲ” ಎಂದಿದ್ದಾರೆ.