ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ರಾಜ್ಯ ಬಿಜೆಪಿಯೊಳಗೆ ದಿನೇ ದಿನೇ ಹೆಚ್ಚಾಗುತ್ತಿರುವ ಅಂತರ್ಯುದ್ಧ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿ ಕುಟುಕಿದೆ.
“ಬೊಮ್ಮಾಯಿ vs ಯತ್ನಾಳ್, ಯತ್ನಾಳ್ vs ನಿರಾಣಿ, ಈಶ್ವರಪ್ಪ vs ವಲಸಿಗರು, ಪ್ರತಾಪ್ ಸಿಂಹ vs ಬೊಮ್ಮಾಯಿ, ಸೋಮಣ್ಣ vs ಸಂತೋಷ್, ಸಿ ಟಿ ರವಿ vs ಬಿಎಸ್‌ವೈ.. ಹೀಗೆ ಬಿಜೆಪಿಯಲ್ಲಿ ಮಾತಿನ ಮಲ್ಲಯುದ್ಧ ನಡೆಯುತ್ತಿದೆ. ಮುಂದೆ ಆರ್‌ಎಸ್‌ಎಸ್ ನವರ ಲಾಠಿ ಕಸಿದುಕೊಂಡು ಇವರೆಲ್ಲರೂ ಬಡಿದಾಡಿಕೊಂಡರೂ ಆಶ್ಚರ್ಯವಿಲ್ಲ!” ಎಂದು ಟೀಕಿಸಿದೆ.
“ಚುನಾವಣೆಯ ಸೋಲಿನ ನಂತರ ಮರೆಗೆ ಸರಿದ ಜೋಶಿ ಮತ್ತು ಸಂತೋಷ್ ಜೋಡಿ ತೆರೆಯ ಹಿಂದೆ ಕುಳಿತು ಆಡಿಸುತ್ತಿರುವ ಗೊಂಬೆಯಾಟ ಇದು” ಎಂದು ಕಾಲೆಳೆದಿದೆ.
“ಆತ್ಮಾವಲೋಕನ ಸಭೆಗಳು ನಡೆಯುತ್ತಿರುವುದು ನೋಡಿದರೆ ಬಿಜೆಪಿ ಪಕ್ಷವೇ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವವಿದೆ! ಪಕ್ಷದೊಳಗಿನ ಆಂತರಿಕ ಕಲಹವನ್ನು ನಿಭಾಯಿಸಲಾಗದ ನಳಿನ್ ಕುಮಾರ್ ಕಟೀಲ್ ಅವರದ್ದು ಅಸಾಮರ್ಥ್ಯ ಎಂಬುದನ್ನು ಒಪ್ಪಿಕೊಳ್ಳುವ ಧೈರ್ಯವಿದೆಯೇ ಬಿಜೆಪಿಗೆ” ಎಂದು ಪ್ರಶ್ನಿಸಿದೆ.
“ಪರಸ್ಪರ ಬೆನ್ನಿಗೆ ಚೂರಿ ಹಾಕಿಕೊಳ್ಳಲು ಬಿಜೆಪಿಯಲ್ಲಿ ಎಲ್ಲರೂ ಸದಾ ಚೂರಿ ಹಿಡಿದುಕೊಂಡೇ ಓಡಾಡುತ್ತಿರುವಂತಿದೆ” ಎಂದು ಲೇವಡಿ ಮಾಡಿದೆ.