ಲೋಕಸಭಾ ಚುನಾವಣೆಯ ಮೊದಲ ಹಂತದ ಬಳಿಕ ವಿಚಿತ್ರ ಹೇಳಿಕೆಗಳನ್ನು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸುದ್ದಿಯಾಗುತ್ತಿದ್ದಾರೆ.
ಈ ಹಿಂದೆ, ಕಾಂಗ್ರೆಸ್ ನಿಮ್ಮ ಮಂಗಳಸೂತ್ರವನ್ನು ಕಸಿದುಕೊಳ್ಳುತ್ತದೆ, ನಿಮ್ಮಲ್ಲಿ ಎರಡು ಎಮ್ಮೆಗಳಿದ್ದರೆ ಒಂದನ್ನು ಕದಿಯಲಿದೆ, ನಾನು ಜೈವಿಕವಾಗಿ ಹುಟ್ಟಿಲ್ಲ, ಪರಮಾತ್ಮನೇ ನನ್ನನ್ನು ಕಳುಹಿಸಿದ್ದು ಎಂಬಿತ್ಯಾದಿ ಹೇಳಿಕೆಗಳನ್ನು ನೀಡಿದ್ದ ಪ್ರಧಾನಿ ಮೋದಿ, ನಿನ್ನೆ ಖಾಸಗಿ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದ ವೇಳೆ ಮಹಾತ್ಮಾ ಗಾಂಧಿಯವರ ಬಗ್ಗೆಯೂ ವಿಚಿತ್ರ ಹೇಳಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರು ನಿರಂತರ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಅದರ ಭಾಗವಾಗಿ ನಿನ್ನೆ ಹಿಂದಿ ಸುದ್ದಿ ವಾಹಿನಿ ಎಬಿಪಿ ನ್ಯೂಸ್‌ಗೂ ಕೂಡ ಸಂದರ್ಶನ ನೀಡಿದ್ದು, ಈ ವೇಳೆ, “ಮಹಾತ್ಮಾ ಗಾಂಧಿ ಅವರ ಬಗ್ಗೆ ಸಿನಿಮಾ ಬರುವವರೆಗೆ ಜಗತ್ತಿಗೆ ಅವರು ಯಾರೆಂಬುದೇ ಗೊತ್ತಿರಲಿಲ್ಲ” ಎಂದು ವಿಚಿತ್ರ ಹೇಳಿಕೆ ನೀಡಿದ್ದಾರೆ.
Nobody knew Mahatma Gandhi before a film was made about him.
— Narendra Modi
He has lost his senses for sure… pic.twitter.com/ZJYxXd8ClH
— Shantanu (@shaandelhite) May 29, 2024
“ಮಾರ್ಟಿನ್ ಲೂಥರ್ ಕಿಂಗ್, ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಅವರು ಯಾರೆಂಬುದು ಜಗತ್ತಿಗೇ ಗೊತ್ತಿದೆ. ಆದರೆ, ಮಹಾತ್ಮಾ ಗಾಂಧಿ ಅವರ ಬಗ್ಗೆ ಮೊದಲ ಬಾರಿಗೆ ಸಿನಿಮಾ ಬರುವವರೆಗೆ ಯಾರೆಂಬುದೇ ಜಗತ್ತಿಗೆ ಗೊತ್ತಿರಲಿಲ್ಲ. ಮಹಾತ್ಮ ಗಾಂಧಿ ದೊಡ್ಡ ವ್ಯಕ್ತಿಯಾಗಿದ್ದರೂ ಜಗತ್ತಿಗೆ ಅವರ ಬಗ್ಗೆ ತಿಳಿದಿರಲಿಲ್ಲ, ಜಗತ್ತು ಅವರ ಬಗ್ಗೆ ತಿಳಿಯುವಂತಾಗಲು ಎಲ್ಲಾ ಭಾರತೀಯ ರಾಜಕೀಯ ನಾಯಕರು ಸ್ವಾತಂತ್ರ್ಯ ದೊರೆತ 75 ವರ್ಷಗಳ ನಂತರದ ಈ ಅವಧಿಯಲ್ಲಿ ಶ್ರಮಿಸಬೇಕು” ಎಂದು ಪ್ರಧಾನಿ ಹೇಳಿಕೊಂಡರು.
“ಮಹಾತ್ಮ ಗಾಂಧಿ ಮಹಾನ್ ವ್ಯಕ್ತಿಯಾಗಿದ್ದರು. ಕಳೆದ 75 ವರ್ಷಗಳಲ್ಲಿ ಅವರಿಗೆ ಜಾಗತಿಕ ಮನ್ನಣೆ ಒದಗಿಸಿಕೊಡುವುದು ನಮ್ಮ ಹಿಂದಿನ ಸರ್ಕಾರಗಳ ಕರ್ತವ್ಯವಾಗಿರಲಿಲ್ಲವೇ?” ಎಂದು ಅಚ್ಚರಿಯ ಹಾಗೂ ವಿಚಿತ್ರ ಹೇಳಿಕೆ ನೀಡಿದ್ದಾರೆ.
ಗಾಂಧಿ ಬಗ್ಗೆ ಹೇಳಿಕೆ: ಸುಳ್ಳು ಬಯಲಿಗೆಳೆದ ಕೇರಳ ಕಾಂಗ್ರೆಸ್
ಮೋದಿ ಅವರ ಸಂದರ್ಶನದ ಈ ತುಣುಕು ವೈರಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ಮೋದಿಯವರು ಹೇಳಿದ್ದು ನಿಜವೇ ಎಂದು ನೆಟ್ಟಿಗರು ಹುಡುಕಾಡಿದ್ದಾರೆ. ಪ್ರಧಾನಿ ಮೋದಿಯವರು ಗಾಂಧಿ ಬಗ್ಗೆ ಹೇಳಿರುವ ಹಸಿಹಸಿ ಸುಳ್ಳು ಈಗ ಬಯಲಾಗಿದೆ.
His entire knowledge of our nation’s history can be fitted on the back of a postage stamp.
That’s why he talks and acts the way he does. pic.twitter.com/8seJgoK03l
— Congress Kerala (@INCKerala) May 29, 2024
ಈ ಹಿಂದೆ ಮನ್‌ಕಿ ಬಾತ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾಗ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಮಹಾತ್ಮಾ ಗಾಂಧಿಯವರನ್ನು ಹೊಗಳಿ ನೀಡಿದ್ದ ಹೇಳಿಕೆ ಈಗ ವೈರಲಾಗಿದೆ.
“ಮಹಾತ್ಮ ಗಾಂಧಿಯವರ ಆದರ್ಶಗಳು ಇಡೀ ಜಗತ್ತನ್ನು ಪ್ರೇರೇಪಿಸಿತು. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮತ್ತು ನೆಲ್ಸನ್ ಮಂಡೇಲಾರಂಥವರು ಗಾಂಧೀಜಿಯವರ ಆದರ್ಶಗಳಿಂದ ತಮ್ಮ ಶಕ್ತಿಯನ್ನು ಪಡೆದರು” ಎಂದು ಈ ಹಿಂದೆ ನರೇಂದ್ರ ಮೋದಿ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆ ವೈರಲಾಗಿದೆ.
मन की बात व्हाट्सएप की बात pic.twitter.com/jWnfW3sN3k
— Atul Londhe Patil (INDIA Ka Parivar)🇮🇳 (@atullondhe) May 29, 2024
ಈ ನಡುವೆ ಗಾಂಧಿ ಬಗ್ಗೆ ಮೋದಿಯವರು ನೀಡಿರುವ ಹೇಳಿಕೆಯು ಸುಳ್ಳು ಎಂದು ಬಯಲಿಗೆಳೆದಿರುವ ಕೇರಳ ಕಾಂಗ್ರೆಸ್, ಮಹಾತ್ಮಾ ಗಾಂಧಿ ಹಾಗೂ ಅವರ ಜೀವನಾದರ್ಶಗಳ ಬಗ್ಗೆ ಜಗತ್ತಿನ ಖ್ಯಾತ ವಿಜ್ಞಾನಿ ಐನ್‌ಸ್ಟೈನ್, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ನೆಲ್ಸನ್ ಮಂಡೇಲಾ ಸೇರಿದಂತೆ ಮತ್ತಿತರರು ನೀಡುವ ಹೇಳಿಕೆಗಳನ್ನು ಪೋಸ್ಟ್ ಮಾಡಿದೆ.
“Nobody in the world knew of Mahatma Gandhi before the film was made” Narendra Modi.
Now read this thread by @samjawed65 debunking the false claim. 👇🏽pic.twitter.com/7I5RiS7peS https://t.co/G5FMQl3gTu— Mohammed Zubair (@zoo_bear) May 29, 2024
