ಒಡಿಶಾ ಸಿಎಂ ನವೀನ್ 2 ಕ್ಷೇತ್ರದಲ್ಲಿ ಸ್ಪರ್ಧೆ; ಮೋದಿ ಅಲೆ – ಬಿಜೆಪಿ ಮಣಿಸಲು ಬಿಜೆಡಿ ತಂತ್ರ

Date:

Advertisements

ಒಡಿಶಾದಲ್ಲಿ ಅವಳಿ ಚುನಾವಣೆಗಳು (ವಿಧಾನಸಭಾ ಮತ್ತು ಲೋಕಸಭಾ) ನಡೆಯುತ್ತಿವೆ. ಒಡಿಶಾ ಮುಖ್ಯಮಂತ್ರಿ, ಬಿಜು ಜನತಾ ದಳ (ಬಿಜೆಡಿ) ಮುಖ್ಯಸ್ಥ ನವೀನ್ ಪಟ್ನಾಯಕ್ ಎರಡು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಪಶ್ಚಿಮ ಒಡಿಶಾದ ಕಾಂತಾಬಾಂಜಿ ಮತ್ತು ಗಂಜಾಂ ಜಿಲ್ಲೆಯ ಹಿಂಜಿಲಿ ವಿಧಾನಸಭಾ ಕ್ಷೇತ್ರದಲ್ಲಿ ಅವರು ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ಅಂದಹಾಗೆ, ಅವರು ಈ ರೀತಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಇದೇ ಮೊದಲೇನೂ ಅಲ್ಲ. 2019ರಲ್ಲಿಯೂ ಪಶ್ಚಿಮ ಒಡಿಶಾದ ಬಿಜೆಪುರ್ ಮತ್ತು ಹಿಂಜಿಲಿಯಲ್ಲಿ ಸ್ಪರ್ಧಿಸಿ, ಎರಡೂ ಕಡೆಯೂ ಗೆದ್ದಿದ್ದರು. ಬಳಿಕ, ಬಿಜೆಪುರ ಕ್ಷೇತ್ರವನ್ನು ಬಿಟ್ಟುಕೊಟ್ಟರು. ಹಿಂಜಿಲಿ ಕ್ಷೇತ್ರ ಅವರ ತವರು ಮತ್ತು ಭದ್ರಕೋಟೆಯಾಗಿದೆ.  ಅಲ್ಲಿ ಅವರು 2000ರಿಂದಲೂ ಗೆಲ್ಲುತ್ತಿದ್ದಾರೆ.

ಒಡಿಶಾದ ಅತ್ಯಂತ ಜನಪ್ರಿಯ ನಾಯಕ ಹೀಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾರಣವೇನು? ಗಮನಾರ್ಹ ವಿಚಾರವೆಂದರೆ, ಪ್ರಧಾನಿ ಮೋದಿ ಅವರೂ ಕೂಡ 2014ರ ಲೋಕಸಭಾ ಚುನಾವಣೆಯಲ್ಲಿ ಗುಜರಾತ್‌ನ ಬರೋಡ ಮತ್ತು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸ್ಪರ್ಧಿಸಿದ್ದರು.

Advertisements

ಮೋದಿಗೆ ರಾಷ್ಟ್ರ ಮಟ್ಟದಲ್ಲಿ ಜನ ಮನ್ನಣೆ ಇದೆ ಎಂಬುದನ್ನು ತೂರಿಸಿಲು ‘ಹಿಂದಿ ಬೆಲ್ಟ್‌’ನಲ್ಲಿ ಬಿಜೆಪಿ ಪ್ರಭಾವನ್ನು ಸೂಚಿವ ಮೇಲ್ನೋಟಕ್ಕಾಗಿ ಮೋದಿ ಅವರನ್ನು ಎರಡು ಕಡೆ ಬಿಜೆಪಿ ಕಣಕ್ಕಿಳಿಸಿತ್ತು. ಆದರೆ, ಪಟ್ನಾಯಕ್ ಅವರ ಪ್ರಾದೇಶಿಕ ಪಕ್ಷವು ಚುನಾವಣೆಗಳನ್ನು ಹಲವು ಬಾರಿ ಗೆದ್ದಿದೆ. ರಾಜ್ಯದಲ್ಲಿ ಆರನೇ ಬಾರಿಗೆ ಪಕ್ಷವು ಅಧಿಕಾರ ಹಿಡಿಯಲು ಮತ್ತು ಆರನೇ ಬಾರಿಗೆ ಮುಖ್ಯಮಂತ್ರಿಯಾಗಲು ನವೀನ್ ಪಟ್ನಾಯಕ್ ಸಿದ್ದವಾಗಿದ್ದಾರೆ. ಇಂತಹ ಸಮಯದಲ್ಲಿ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕಾದ ಅಗತ್ಯವಿಲ್ಲ ಎಂಬುದು ವಿಶ್ಲೇಷಕರ ಅಭಿಪ್ರಾಯ.

2009ರಲ್ಲಿ ಬಿಜೆಡಿ ಮತ್ತು ಬಿಜೆಪಿ ಒಡಿಶಾದಲ್ಲಿ ಮೈತ್ರಿ ಮಾಡಿಕೊಂಡಿದ್ದವು. ಬಳಿಕ, ಮೈತ್ರಿ ಮುರಿದುಬಿದ್ದಿತ್ತು. ಈಗ ಎರಡೂ ಪಕ್ಷಗಳ ನಡುವಿನ ದ್ವಂದ್ವ ಹೋರಾಟವು ಭಾರಿ ದಿನಗಳಿಂದ ನಡೆಯುತ್ತಿದೆ. ಇತ್ತೀಚೆಗೆ, ಉಭಯ ಪಕ್ಷಗಳು ಮತ್ತೆ ಮೈತ್ರಿಗಾಗಿ ಮಾತುಕತೆ ನಡೆಸಿದ್ದವು. ಕಳೆದ ತಿಂಗಳು ದೀರ್ಘಾವಧಿಯ ಚರ್ಚೆಯ ಬಳಿಕ, ಮೈತ್ರಿ ಮಾತುಕತೆ ಮುರಿದುಬಿದ್ದಿದೆ. ಮೈತ್ರಿ ಚರ್ಚೆಗೂ ಮುನ್ನ ಪಶ್ಚಿಮ ಒಡಿಶಾದ ಹಲವು ಬಿಜೆಡಿ ನಾಯಕರು ಬಿಜೆಪಿ ಸೇರಿದ್ದಾರೆ. ಹೀಗಾಗಿ, ನವೀನ್ ಪಟ್ನಾಯಕ್ ಸ್ವಲ್ಪ ಎಚ್ಚರಿಕೆ ವಹಿಸಿದ್ದು, ಪಶ್ಚಿಮ ಒಡಿಶಾದಲ್ಲಿ ಬಿಜೆಪಿಯ ಬೆಳವಣಿಗೆಯನ್ನು ತಡೆಯಲು ತಂತ್ರ ಎಣೆಯುತ್ತಿದ್ದಾರೆ.

24 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಡಿ, ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆ ಮಾತ್ರವಲ್ಲದೆ, ಹಲವು ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಭಾವನೆ ಮತ್ತು ತೀವ್ರವಾದ ಗುಂಪುಗಾರಿಕೆಯನ್ನು ಎದುರಿಸುತ್ತಿದೆ. ಆದ್ದರಿಂದ, ಒಡಿಶಾದಲ್ಲಿ ಮೋದಿ ಅಲೆ ಅಥವಾ ಮೋದಿ ಇಲ್ಲ. ಪಕ್ಷದ ಚಿತ್ರಣವನ್ನು ಯಾರು ಹಾಳುಮಾಡಲು ಸಾಧ್ಯವಿಲ್ಲ. ಇಡಿ, ಸಿಬಿಐ ರೀತಿಯ ತನಿಖಾ ಸಂಸ್ಥೆಗಳಿಂದ ತಮ್ಮನ್ನ ಅಣಿಯಲು ಸಾಧ್ಯವಾಗದು ಎಂಬ ಸಂದೇಶವನ್ನು ರವಾನಿಸಲು ಬಿಜೆಡಿ ಬಯಸುತ್ತಿದೆ ಎಂಬುದು ಸ್ಪಷ್ಟವಾಗಿದೆ.

ನವೀನ್ ಪಟ್ನಾಯಕ್ ಅವರ ದೃಢವಾದ ನಾಯಕತ್ವ ಮತ್ತು ಅತ್ಯಂತ ಉತ್ತಮ ರೀತಿಯ ಪಕ್ಷ ಸಂಘಟನೆಯ ಹೊರತಾಗಿಯೂ, ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲು ಸಾಧ್ಯವಾಗಿಲ್ಲ. ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಪಕ್ಷವು ಯೋಚಿಸುತ್ತಿದೆ.

ಈ ಸಮಯದಲ್ಲಿ ಏನಾದರೂ ತಪ್ಪಾಗಿದೆ ಮತ್ತು ಅದು ಏನಾಗಿರಬಹುದು? ಎಂಬ ಪ್ರಶ್ನೆ ಮುನ್ನೆಲೆಯಲ್ಲಿದೆ. ಪಟ್ನಾಯಕ್ ನೇತೃತ್ವದಲ್ಲಿ ಸರ್ಕಾರವು ಉತ್ತಮ ಆಡಳಿತ, ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ನಾನಾ ಸೌಲಭ್ಯಗಳನ್ನು ಜನರಿಗೆ ಒದಗಿಸಿದೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಮಂತ್ರಿಗಳು, ಶಾಸಕರು ಮತ್ತು ಸಂಸದರು ಜನರೊಂದಿಗೆ ಸರಿಯಾಗಿ ಬೆರೆಯಲಾಗಿಲ್ಲ. ಜೊತೆಗೆ, ಅಧಿಕಾರಶಾಹಿಗಳ ಸರ್ವಾಧಿಕಾರಿ ಕಾರ್ಯವೈಖರಿಯೂ ಸರ್ಕಾರದ ಮೇಲೆ ಕಪ್ಪು ಚುಕ್ಕಿ ಮೂಡಿಸಿದೆ.

ಅಲ್ಲದೆ, ಟಿಕೆಟ್‌ಗಾಗಿ ಆಕಾಂಕ್ಷಿಗಳ ಗೆಲುವಿನ ಕುರಿತು ಪೋಲೀಸ್ ಗುಪ್ತಚರ ಮಾಹಿತಿಯ ಮೇಲಿನ ಅತಿಯಾದ ಅವಲಂಬನೆಯು ಚುನಾವಣಾ ಕಣವನ್ನು ವಿಚಲಿತಗೊಳಿಸಿದೆ. ಇದರಿಂದ, ಈ ಬಾರಿ ಸಾಕಷ್ಟು ಹಾಲಿ ಶಾಸಕರು, ಸಂಸದರನ್ನು ಬದಲಿಸಬೇಕಾದ ಅಗತ್ಯ ಪಕ್ಷದಲ್ಲಿದೆ.

2019ರಲ್ಲಿ ಒಡಿಶಾದ 21 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಡಿ 12 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ 8 ಮತ್ತು ಕಾಂಗ್ರೆಸ್ ಒಂದರಲ್ಲಿ ಗೆಲುವು ಸಾಧಿಸಿತ್ತು. ಆ ವರ್ಷ, ಎರಡು ಪಕ್ಷಗಳು (ಬಿಜೆಡಿ-ಬಿಜೆಪಿ) ರಹಸ್ಯ ಒಪ್ಪಂದ ಮಾಡಿಕೊಂಡು ಈ ಸಾಧನೆ ಮಾಡಿವೆ ಎಂದು ಹಲವರು ಹೇಳುತ್ತಿದ್ದಾರೆ. ಅದೇ ಸಮಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಲವಾರು ಬಿಜೆಪಿ ಅಭ್ಯರ್ಥಿಗಳು ಸೋತಿದ್ದೂ ಇದೆ.

ಬಿಜೆಪಿ ಗೆದ್ದ ಬಹುಪಾಲು ಲೋಕಸಭಾ ಕ್ಷೇತ್ರಗಳು ಪಶ್ಚಿಮ ಒಡಿಶಾದ ಭಾಗಗಳಾಗಿವೆ. ಅಲ್ಲಿ ಮೋದಿ ಅಲೆ ಮತ್ತು ಹಿಂದುತ್ವ-ಧರ್ಮದ ಭಾವನಾತ್ಮಕ ವಿಷಯವು ಬಿಜೆಪಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದೆ. ಅದೇ ಅಂಶಗಳು ಇಂದಿಗೂ ಮುಂದುವರೆದಿವೆ ಎಂಬ ಅಭಿಪ್ರಾಯಗಳೂ ಇವೆ.

ಜೊತೆಗೆ, ಕರಾವಳಿ ಒಡಿಶಾದ ಜನರು ಪ್ರತ್ಯೇಕ ‘ಕೋಶಾಲ್’ ರಾಜ್ಯಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಈ ಭಾಗದೊಂದಿಗೆ ಬಿಜೆಡಿ ಭಾವನಾತ್ಮಕ ಸಂಬಂಧ ಸಾಧಿಸಲು ಸಾಧ್ಯವಾಗಿಲ್ಲ. ಈ ಅವಕಾಶವನ್ನು ಬಳಸಿಕೊಳ್ಳಲು ಬಿಜೆಪಿ ನಾಯಕರು ಎದುರು ನೋಡುತ್ತಿದ್ದಾರೆ. ಅದಕ್ಕಾಗಿಯೇ ಬಿಜೆಪಿ ಪ್ರಮುಖ ನಾಯಕರು ಪಶ್ಚಿಮ ಮತ್ತು ಕರಾವಳಿ ಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದು ಗೇಮ್ ಚೇಂಜರ್ ಆಗಬಹುದು ಎಂದು ಭಾವಿಸಿದ್ದಾರೆ.

ಈ ಭಾವನೆಯನ್ನು ಒಡೆಯಲು ಪಶ್ಚಿಮ ಒಡಿಶಾದ ಕಾಂತಾಬಾಂಜಿ ಕ್ಷೇತ್ರದಲ್ಲಿ ಸ್ಪರ್ಧಿಸಲು ನವೀನ್ ನಿರ್ಧರಿಸಿದ್ದಾರೆ. ಕಡು ಬಡತನ ಮತ್ತು ನಿರುದ್ಯೋಗದಲ್ಲಿ ಮುಳುಗಿರುವ ಪಶ್ಚಿಮ ಒಡಿಶಾ ಮತದಾರರೊಂದಿಗೆ ತಾವು ಇರುವುದಾಗಿ ಭರವಸೆ ನೀಡಲು ತಂತ್ರ ರೂಪಿಸಿದ್ದಾರೆ.

ಕಾಂತಾಬಾಂಜಿಯಲ್ಲಿ ಅವರ ಸ್ಪರ್ಧೆಯು ಪಶ್ಚಿಮ ಒಡಿಶಾದಲ್ಲಿ ಮತದಾನದ ಮೇಲೆ ಪರಿಣಾಮ ಬೀರಲಿದೆ. ಅಲ್ಲದೆ, ಪಕ್ಷದಲ್ಲಿ ಎದುರಾಗುತ್ತಿರುವ ಬಣಗಳನ್ನು ಒಗ್ಗೂಡಿಸಲು ಸಾಧ್ಯವಾಗುತ್ತದೆ ಎಂದು ಅವರು ನಂಬಿದ್ದಾರೆ. ಅವರ ನಂಬಿಕೆ ಏನಾಗಲಿದೆ ಕಾದು ನೋಡಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X