’ಒಕ್ಕಲಿಗರು ಸಂಸ್ಕೃತಿ ಹೀನರು’ ಹೇಳಿಕೆ; ಪ್ರೊ.ಭಗವಾನ್‌ ಸುತ್ತ ಕಾವೇರಿದ ಚರ್ಚೆ

Date:

ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಅವರು ಮೈಸೂರಿನಲ್ಲಿ ನಡೆದ ಮಹಿಷ ದಸರಾ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ಒಕ್ಕಲಿಗರು ಸಂಸ್ಕೃತಿ ಹೀನರೆಂದು ಕುವೆಂಪು ಹೇಳಿದ್ದರು” ಎಂದಿರುವುದು ಚರ್ಚೆಗೆ ಗ್ರಾಸವಾಗಿದೆ.

- Advertisement -

ಚಾಮರಾಜ ವಿಧಾನಸಭಾ ಕ್ಷೇತ್ರದ ಒಕ್ಕಲಿಗರ ಸಂಘದ ಕೆಲವರು ಒಕ್ಕಲಿಗ ಸಮುದಾಯದವರೇ ಆದ ಭಗವಾನ್ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬೆನ್ನಲ್ಲೇ ಚರ್ಚೆ ಕಾವೇರಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

ಕುವೆಂಪು ಅವರು ಬರೆದಿರುವ ಸಾಲುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಅನೇಕರು, ಭಗವಾನ್ ಅವರ ಹೇಳಿಕೆಗೆ ಪರ ಮತ್ತು ವಿರೋಧದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಸಾಮಾಜಿಕ ಹೋರಾಟಗಾರ, ನಟ ಚೇತನ್ ಅಹಿಂಸಾ ಪ್ರತಿಕ್ರಿಯಿಸಿ,  “ಭಗವಾನ್ ಅವರು— ನಮ್ಮೆಲ್ಲರ ಹಾಗೆ— ತನ್ನನ್ನು ತಾನು ವ್ಯಕ್ತಪಡಿಸುವ ಹಕ್ಕನ್ನು ಹೊಂದಿದ್ದಾರೆ (ಆರ್ಟಿಕಲ್ 19).  ಅವರು ಹೇಳಿದ್ದ ಮಾತುಗಳು ಕುವೆಂಪು ಅವರ ಮಾತುಗಳೆಂದು ಹೇಳಲಾಗಿದೆ.‌ ಯಾವುದೇ ಹಿಂಸೆಯನ್ನು ಅಥವಾ ನಿಂದನೆಯನ್ನು ಪ್ರತಿಭಟನಾಕಾರರು ಭಗವಾನ್ ಅವರಿಗೆ ತೋರಿಸದೆ  ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವ ಹಕ್ಕಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಮುಖಂಡರಾದ ಡಾ.ಎಚ್‌.ಎನ್‌.ರವೀಂದ್ರ ಅವರು ಪ್ರತಿಕ್ರಿಯಿಸಿ, “ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್‌ಗಳ ಪರ ವಿರೋಧದ ಚರ್ಚೆ ಆಯಿತು. ಈಗ ಕುವೆಂಪು ಸರದಿ. ಈಗಿನ ಸಂಘರ್ಷದ ದಿನಗಳಲ್ಲಿ, ಜಾತಿ ಜಾತಿಗಳ ದ್ವೇಷ ಇಮ್ಮಡಿಯಾಗುತ್ತಿರುವ ಕಾಲಘಟ್ಟದಲ್ಲಿ, ಒಕ್ಕಲಿಗರನ್ನ ಪಶುಗಳು ಎಂದು ಕುವೆಂಪು ಕರೆದಿದ್ದರು” ಎನ್ನುವುದು ಬೇಕಾಗಿರಲಿಲ್ಲ. ಒಕ್ಕಲುತನದ ಮೇಲೆ, ಶೂದ್ರ ಪರಿವಾರದ ಬಗೆಗೆ ಅಪಾರ ಪ್ರೀತಿಯನ್ನೂ, ಬ್ರಾಹ್ಮಣ್ಯದ ಬಗೆಗೆ ಅಪಾರ ಸಿಟ್ಟನ್ನೂ (ದ್ವೇಷವಲ್ಲ) ಹೊಂದಿದ್ದ ಕುವೆಂಪು ಅವರ ಹೆಸರನ್ನು ಭಗವಾನ್ ಹುಚ್ಚೆದ್ದು, ತನ್ನ ವಾದ ಸಮರ್ಥಿಸಿಕೊಳ್ಳಲು ಬಳಸಿಕೊಂಡಿರೋದು, ಶೂದ್ರ ಸಂಘಟನೆಯಲ್ಲಿ ನಂಬಿಕೆಯಿಟ್ಟಿರುವ ನನ್ನಂಥವರಿಗೆ ಆಘಾತವೇ ಸರಿ. ಅತಿರೇಕದ ಮಾತುಗಳಿಂದ , ವಿಘಟನೆಯೇ ಹೊರತು ಸಂಘಟನೆಯಲ್ಲ. ಇಂದಿನ ಕಾಲಘಟ್ಟಕ್ಕೆ, ಶೂದ್ರ ಸಂಘಟನೆಗೆ ಭಗವಾನ್ ಅಪಾಯಕಾರಿ. ಇಂಥವರಿಂದಾಗಿ, ಸರ್ದಾರ್ ಪಟೇಲರಂತೆ, ಸುಭಾಷ್ ಚಂದ್ರ ಬೋಸ್‌ರಂತೆ , ಭಗತ್ ಸಿಂಗ್‌ರಂತೆ ಕುವೆಂಪು ಕೂಡಾ ಬಿಜೆಪಿ ಪಾಲಾದರೆ ಅಚ್ಚರಿಯಿಲ್ಲ. ನಿಮಗಿದು ಇಂದು ಅರ್ಥವಾಗದಿದ್ದರೆ , ಮುಂದೊಂದು ದಿನ ಅರ್ಥ ಆಗ್ತದೆ” ಎಂದು ಎಚ್ಚರಿಸಿದ್ದಾರೆ.

ಹೋರಾಟಗಾರ ಡಾ.ವಡ್ಡಗೆರೆ ನಾಗರಾಜಯ್ಯ ಅವರು ತಮ್ಮ ಪೋಸ್ಟ್‌ನಲ್ಲಿ, “ದಾರ್ಶನಿಕ ಕವಿ ಕುವೆಂಪು ಅವರಂತೆಯೇ ಭಗವಾನ್ ಕೂಡಾ ಹುಟ್ಟಿನಿಂದ ಒಕ್ಕಲಿಗ ಸಮುದಾಯದ ಪ್ರಖ್ಯಾತ ವಿಚಾರವಾದಿ. ಕುವೆಂಪು ಮತ್ತು ಭಗವಾನ್ ಇಬ್ಬರೂ ಹಿಂದೂಧರ್ಮೀಯರು ತಾವಲ್ಲವೆಂದು ಘೋಷಿಸಿಕೊಂಡವರು. ಇಬ್ಬರೂ ಜಾತಿಯಾಚೆಗೆ ಜಿಗಿದವರು. ಕುವೆಂಪು ಅವರ ವಿಶ್ವಮಾನವತಾ ಆಶಯದ ವಿರುದ್ಧ ಕೆಲವರು ಕುವೆಂಪು ಹೆಸರಿಲ್ಲಿಯೇ ಒಕ್ಕಲಿಗ ಜಾತಿ ಸಂಘಟನೆಗಳನ್ನು ಕೂಡಾ ಕಟ್ಟಿಕೊಂಡಿದ್ದಾರೆ. ಕೆಲವು ಬಲಪಂಥೀಯ ಧೋರಣೆಯ ಒಕ್ಕಲಿಗರು ಭಗವಾನ್ ಅವರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವೇನೆಂದರೆ ಕುವೆಂಪು ಅವರ ಹೆಸರಿನಿಂದ ಲಾಭವಿರುವಂತೆ ಪ್ರೊ.ಭಗವಾನ್ ಹೆಸರಿನಿಂದ ಒಕ್ಕಲಿಗರಿಗೆ ಯಾವುದೇ ರಾಜಕೀಯ ಲಾಭವಿರುವುದಿಲ್ಲ. ಒಕ್ಕಲಿಗರನ್ನು ಸಂಸ್ಕೃತಿಹೀನರೆಂದಿರುವ ಕುವೆಂಪು ಅವರನ್ನು ಸ್ವೀಕರಿಸಿರುವ ಒಕ್ಕಲಿಗರು, ಕುವೆಂಪು ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಭಗವಾನ್ ಅವರನ್ನು ದೂಷಣಾಕ್ರಮಣಕ್ಕೆ ಗುರಿಮಾಡಿಕೊಳ್ಳುವುದು ನಿಜಕ್ಕೂ ವಿಪರ್ಯಾಸಕರ” ಎಂದಿದ್ದಾರೆ.

ಲೇಖಕರಾದ ನಾಗೇಗೌಡ ಕೀಲಾರ ಅವರು ಪ್ರತಿಕ್ರಿಯಿಸಿ, “ಕುವೆಂಪು ಆಗಲಿ, ಭಗವಾನ್ ಆಗಲಿ ಒಕ್ಕಲಿಗರನ್ನು ಕೀಳಾಗಿ ನೋಡುತ್ತಾರೆ ಅಂತ ಹೇಳಿದರೆ ನಮ್ಮ ನಾಲಿಗೆಗೆ ಹುಳ ಬೀಳುತ್ತೆ. ಇವರಿಬ್ಬರೂ ಒಕ್ಕಲಿಗರು ಮಾತ್ರವಲ್ಲ, ಸಕಲ ಜೀವಿಗಳನ್ನು ಕೀಳಾಗಿ ಕಾಣುವವರಲ್ಲ ಅನ್ನುವುದನ್ನು ನಾವುಗಳು ಮೊದಲು ಅರ್ಥ ಮಾಡಿಕೊಂಡರೆ, ಮಿಕ್ಕ ವಿಚಾರ ಏನು ಅಂತ ನೋಡಬಹುದು. ಪ್ರತಿಯೊಂದು ಮಾತು ಒಂದು ಸಂದರ್ಭದ ಹಿನ್ನೆಲೆಯಲ್ಲಿ ಮಾತನಾಡಿರುತ್ತಾರೆ. ಕುವೆಂಪು ಒಕ್ಕಲಿಗರು ಮೂಢರು ಅಂತ ಮಾತ್ರ ಹೇಳಿಲ್ಲ, ಮಾತಿನ ಕೊನೆಗೆ ಇಡೀ ಶೂದ್ರ ಸಮುದಾಯವೇ ಮೂಢತ್ವದಿಂದ ಕೂಡಿದೆ ಅಂತ ಹೇಳುತ್ತಾರೆ. ಮೂಢತ್ವಕ್ಕೆ ಕಾರಣ ಏನು, ಅದನ್ನು ಹೇಗೆ ಹೊಗಲಾಡಿಸಿಕೊಳ್ಳಬೇಕು ಅನ್ನುವುದನ್ನು ಮಕ್ಕಳಿಗೆ ಹೇಳಿದಂತೆ ಪ್ರೀತಿಯಿಂದ ಹೇಳಿದ್ದಾರೆ. ನೆನಪಿರಲಿ ಕುವೆಂಪು ಅನ್ನುವುದು ಕಳೆದ ಶತಮಾನ ಕರ್ನಾಟಕ ಮತ್ತು ಇಂಡಿಯಾ ಕಂಡ ಒಂದು ದೊಡ್ಡ Cultural phenomenon. ಇಂತಹ ಒಂದು ಅಪೂರ್ವ Phenomenon ಮತ್ತೊಮ್ಮೆ ಘಟಿಸಲು ಕರ್ನಾಟಕದ ಮಣ್ಣಿಗೆ ಇನ್ನೆಷ್ಟು ಶತಮಾನ ಹಿಡಿಯುತ್ತದೆ ಅಂತ ಹೇಳೋದು ಬಹಳ ಕಷ್ಟ. ಕುವೆಂಪು ಅವರು ನಮಗೆ ನೀಡಿರುವ ಅರಿವನ್ನು ಭಗವಾನ್ ಅವರು ಒಂದು ಸಂದರ್ಭದಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾಪ ಮಾಡಿದ್ದಾರೆ. ನಮ್ಮ ಅಪ್ಪ ಅವ್ವ ನಮಗೆ ಹೆಂಗೆ ಒಂಚೂರು ಖಾರವಾಗಿ ಬುದ್ಧಿ ಹೇಳುತ್ತಾರೆ ಅದೇ ರೀತಿಯಲ್ಲಿ ಭಗವಾನ್ ರವರು ಹಿರಿತನದ ಹಿನ್ನೆಲೆಯಲ್ಲಿ ಕುವೆಂಪು ರವರ ಮಾತನ್ನು ಮತ್ತೊಮ್ಮೆ ನಮಗೆಲ್ಲರಿಗೂ ನೆನಪಿಸಿ ಬುದ್ಧಿ ಹೇಳಿದ್ದಾರೆ ಅಷ್ಟೇ. ಕುವೆಂಪು ತಮ್ಮ ಜೀವಮಾನ ನಮ್ಮಂತಹ ಮೂಢರಿಗೆ ಬ್ರಾಹ್ಮಣ್ಯದ, ಹಾರುವರ ದಗಾಕೋರತನದ ಬಗ್ಗೆ ಚಿಕ್ಕ ಮಕ್ಕಳಿಗೆ ತಿಳಿ ಹೇಳಿದ ಹಾಗೆ ಬಿಡಿಸಿ ಬಿಡಿಸಿ ತಿಳಿ ಹೇಳಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಬರಹಗಾರ ಶಿವಕುಮಾರ್ ಶರ್ಮಾ ಪ್ರತಿಕ್ರಿಯಿಸಿ, “ಕುವೆಂಪು ಅವರ ಈ ಕೆಳಗಿನ ಲೇಖನ ಓದಿ, ಆಮೇಲೆ ಕೆ ಎಸ್ ಭಗವಾನ್ ಅವರನ್ನು ವಿರೋಧಿಸಿರಿ. ಹಿಂದೂ ಧರ್ಮದ ಅಸಮಾನತೆ, ಹುಳುಕುಗಳನ್ನು ಎತ್ತಿ ತೋರಿಸುವ ಯಾರಾದರೂ ಸರಿಯೇ ಅವರೆಲ್ಲ ಹಿಂದೂ ವಿರೋಧಿಗಳು ಅಲ್ವೇ ? ಒಂದು ವಿಚಾರ ತಿಳ್ಕೊಳ್ಳಿ, ಮಹಾತ್ಮ ಬಸವೇಶ್ವರ ಬರುವ ಪೂರ್ವದಲ್ಲಿ ಬ್ರಾಹ್ಮಣರನ್ನು ಹೊರತು ಪಡಿಸಿ ಎಲ್ಲರೂ ಶೂದ್ರರೇ ; ತೀರ ಇತ್ತೀಚಿಗೆ ಯಾರೆಲ್ಲ ತಮ್ಮ ರಾಜಕೀಯ ತೆವಲಿಗೆ ಹಿಂದೂ – ಹಿಂದುತ್ವದ ಹೆಸರಿನಲ್ಲಿ ಬಡ ಅಮಾಯಕರ ಮಕ್ಕಳನ್ನು ಬಲಿ ಪಶು ಮಾಡುತ್ತಿರುವುದು ಸೂರ್ಯ – ಚಂದ್ರರಷ್ಟೆ ಸತ್ಯ” ಎಂದು ತಿಳಿಸಿದ್ದಾರೆ.

ಹಿರಿಯ ಪತ್ರಕರ್ತ, ಚಿಂತಕರಾದ ಆರ್‌.ಜಿ.ಹಳ್ಳಿ ನಾಗರಾಜ್ ಪ್ರತಿಕ್ರಿಯಿಸಿ, “ವೈದಿಕ ಹಾಗೂ ಪುರೋಹಿತಶಾಹಿ ಚಿತಾವಣೆಗೆ ಮತಮೂಢ ಶೂದ್ರರು ಬಲಿಯಾಗಿದ್ದಾರೆ ಎಂದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಹೇಳಿದ್ದರು. ಮೂಲ ಕವನದಲ್ಲಿ (ಮುಂದೆ ಇದೇ ನಾಡಗೀತೆ ಆದ ಕವಿತೆಯಲ್ಲಿ) ’ಮಧ್ವ’ ಪದ ಇರಲಿಲ್ಲ. ಯಾರದ್ದೋ ಕೈವಾಡ, ಚಿತಾವಣೆಯಿಂದ ಮಧ್ವ ಪದ ಸೇರಿತು ಎಂದು ಸ್ಪಷ್ಟವಾಗಿ ಹೇಳಿದ ತೇಜಸ್ವಿ ’ಮತಮೂಢ ಶೂದ್ರರು’ ಎಂದು ಒಂದಿಬ್ಬರು ಒಕ್ಕಲಿಗ ಲೇಖಕರನ್ನು ಉದ್ದೇಶಿಸಿ ಹೇಳಿದಾಗ ಇಲ್ಲದ ಬೆಂಕಿ, ಕುವೆಂಪು ಅವರು ಹೇಳಿದ ವಿಚಾರವನ್ನೆ ಭಗವಾನ್ ಹೇಳಿದಾಗ ಏಕೆ ಬೆಂಕಿ ಹತ್ತಿತು? ಇಂಥ ವಿಚಾರ ಹರಡುವ ಹಿಟ್ಟೆಪಾಡಿನ (ಹೊಟ್ಟೆಪಾಡಿನ) ವಿದ್ಯುನ್ಮಾನ ಮಾಧ್ಯಮಗಳನ್ನು ಹತ್ತಿಕ್ಕಿ. ಇಲ್ಲಾ ಬಹಿಷ್ಕರಿಸಿ” ಎಂದು ಒತ್ತಾಯಿಸಿದ್ದಾರೆ.
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ? ಅಂಜಲಿ ಭಾರದ್ವಾಜ್‌ ಏನು ಹೇಳುತ್ತಾರೆ?

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು....

‘ಲೆಹರಾ ದೋ ತಿರಂಗಾ’ ಮಾರ್ಚ್‌ಗೆ ಮುನ್ನ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ದೆಹಲಿ ಪೊಲೀಸರಿಂದ ವಶಕ್ಕೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ಶುಕ್ರವಾರ...

ನ್ಯಾಯಾಂಗದ ಮೇಲೆ ಗೌರವವಿದೆ, ತಪ್ಪಾಗಿದ್ದರೆ ಕ್ಷಮೆಯಾಚಿಸುವೆ: ಸಂಜಯ್ ರಾವತ್

ಸುಪ್ರೀಂ ಕೋರ್ಟ್ ಕುರಿತು ತಾವು ನೀಡಿರುವ ಹೇಳಿಕೆಗಳು ಸೂಕ್ತವಲ್ಲ ಅಥವಾ ಅನುಚಿತ...

ತಿರಂಗಾ ಮಾರ್ಚ್ ನಡೆಸದಂತೆ ಅಭಿಜೀತ್ ದೀಪ್ಕೆಗೆ ದೆಹಲಿ ಪೊಲೀಸರಿಂದ ನೋಟಿಸ್: ಮನೆಯ ಬಳಿ ಬಿಗಿ ಭದ್ರತೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ದೆಹಲಿಯ...