ಗುಣಮಟ್ಟದ ಶಿಕ್ಷಣ, ಶಾಲೆಗಳು, ಆಸ್ಪತ್ರೆಗಳು, ರಸ್ತೆಗಳು, ಉಚಿತ ವಿದ್ಯುತ್ ಮತ್ತು ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವುದು ತನ್ನ ಪತಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಾತ್ರ ಎಂದು ಪತ್ನಿ ಸುನೀತಾ ಕೇಜ್ರಿವಾಲ್ ಹೇಳಿದ್ದಾರೆ.
ಯಮುನಾನಗರದ ಸಧೌರಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸುನೀತಾ, ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ಅರವಿಂದ್ ಕೇಜ್ರಿವಾಲ್ ಮಾತ್ರ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅರವಿಂದ್ ಕೇಜ್ರಿವಾಲ್ ವಿರುದ್ಧ ಪಿತೂರಿ ಮಾಡಿದೆ, ಜೈಲಿಗೆ ಹಾಕಿದೆ ಎಂದು ದೂರಿದರು.
“ಶಾಲೆಗಳನ್ನು ಸುಧಾರಿಸಿದ, ಮೊಹಲ್ಲಾ ಕ್ಲಿನಿಕ್‌ಗಳನ್ನು ನಿರ್ಮಿಸಿದ, ಸರ್ಕಾರಿ ಆಸ್ಪತ್ರೆಗಳನ್ನು ಸುಧಾರಿಸಿದ ಮತ್ತು ವಿದ್ಯುತ್ ಉಚಿತ ಮಾಡಿದ ಬೇರೆ ಯಾವುದಾದರೂ ಪಕ್ಷವಿದೆಯೇ” ಎಂದು ಸುನೀತಾ ಕೇಜ್ರಿವಾಲ್ ಪ್ರಶ್ನಿಸಿದ್ದು, “ಹರಿಯಾಣದ ಲಾಲ್ (ಮಗ) ಅರವಿಂದ್ ಕೇಜ್ರಿವಾಲ್ ಮಾತ್ರ ಹಾಗೆ ಮಾಡಬಹುದು” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಅರವಿಂದ್ ಕೇಜ್ರಿವಾಲ್ ಕೋಮಾಗೆ ಜಾರಬಹುದು ಎಂದ ಎಎಪಿ, ತಿಹಾರ್ ಜೈಲು ಹೇಳುವುದೇನು?
“ಪ್ರಧಾನಿ ಮೋದಿ ಅವರಿಗೆ ಕೇಜ್ರಿವಾಲ್ ಬಗ್ಗೆ ಹೊಟ್ಟೆಕಿಚ್ಚಿದೆ. ಹಾಗಾಗಿಯೇ ದೆಹಲಿ ಮುಖ್ಯಮಂತ್ರಿಯನ್ನು ನಕಲಿ ಪ್ರಕರಣದಲ್ಲಿ ಜೈಲಿಗೆ ಹಾಕಲಾಗಿದೆ. ಮೋದಿ ಮುಂದೆ ಕೇಜ್ರಿವಾಲ್ ತಲೆಬಾಗುವುದಿಲ್ಲ” ಎಂದರು.
ಇತ್ತೀಚೆಗೆ ಇಂಡಿಯಾ ಒಕ್ಕೂಟದ ಎಎಪಿ ಹರಿಯಾಣದ ಎಲ್ಲಾ 90 ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ಪ್ರಕಟಿಸಿದೆ. ಸುನೀತಾ ಎರಡು ದಿನಗಳ ಹರಿಯಾಣ ಪ್ರವಾಸದಲ್ಲಿದ್ದು ದೆಹಲಿಯಲ್ಲಿರುವ ಸರ್ಕಾರ ಕಾಲೇಜು ಬಗ್ಗೆ ಮಾತನಾಡಿದ್ದಾರೆ. ಹಾಗೆಯೇ ಸಧೌರಾದಲ್ಲಿ ಒಂದೇ ಒಂದು ಸರ್ಕಾರಿ ಕಾಲೇಜು ಇಲ್ಲ ಎಂದು ತನ್ನ ಭಾಷಣಗಳಲ್ಲಿ ಹೇಳಿದ್ದಾರೆ.
ಎಎಪಿ ಅಧಿಕಾರಕ್ಕೆ ಬಂದರೆ, ಸಾರ್ವಜನಿಕರಿಗೆ ನೀಡಿದ ಎಲ್ಲಾ ಐದು ಭರವಸೆಗಳನ್ನು ಈಡೇರಿಸಲಾಗುವುದು. ಉಚಿತ ಮತ್ತು 24-ಗಂಟೆಗಳ ವಿದ್ಯುತ್, ಪ್ರತಿ ಹಳ್ಳಿಯಲ್ಲಿ ಮೊಹಲ್ಲಾ ಚಿಕಿತ್ಸಾಲಯಗಳು, ಸರ್ಕಾರಿ ಆಸ್ಪತ್ರೆಗಳು ಮತ್ತು ಶಾಲೆಗಳ ಪರಿಸ್ಥಿತಿಗಳನ್ನು ಸುಧಾರಿಸುವುದು, ಉಚಿತ ಮತ್ತು ಗುಣಾತ್ಮಕ ಶಿಕ್ಷಣವನ್ನು ಒದಗಿಸುವುದು ಐದು ಭರವಸೆಯಾಗಿದೆ ಎಂದಿದ್ದಾರೆ.
हरियाणा के लाल @ArvindKejriwal की अपने हरियाणावासियों के लिए 5 Guarantee👇
💡24 घंटे और मुफ़्त बिजली
🏥 हर गाँव-शहर में Mohalla Clinics और अस्पतालों को ठीक कर, सभी का मुफ़्त इलाज करेंगे
🏫सरकारी स्कूलों को ठीक कर, हर बच्चे को World Class शिक्षा देंगे
🙍♀️महिलाओं को ₹1,000/Month… pic.twitter.com/JhdEiJQyNu— AAP (@AamAadmiParty) July 27, 2024