ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಹೊಸ ಅಧ್ಯಕ್ಷರು ತಿರುಮಲ ದೇವಸ್ಥಾನದಲ್ಲಿ ಹಿಂದೂಗಳು ಮಾತ್ರ ಸಿಬ್ಬಂದಿಗಳಾಗಬಹುದು ಎಂದು ಪ್ರತಿನಿಧಿಸಿದ್ದಾರೆ. ಹಾಗಿದ್ದಾಗ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರು ಯಾಕೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
ಅಕ್ಟೋಬರ್ 31ರಂದು ಬಿ.ಆರ್. ನಾಯ್ಡು ಅವರು ವೆಂಕಟೇಶ್ವರ ದೇವರ ದೇವಾಲಯದಲ್ಲಿ ಎಲ್ಲಾ ಸಿಬ್ಬಂದಿ ಹಿಂದೂಗಳಾಗಿರಬೇಕು ಎಂದು ಹೇಳಿಕೆ ನೀಡಿದ್ದರು. ಆದರೆ ಈಗ ಕೇಂದ್ರೀಯ ವಕ್ಫ್ ಕೌನ್ಸಿಲ್‌ನಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರನ್ನು ಕಡ್ಡಾಯಗೊಳಿಸುವ ವಕ್ಫ್ ಮಸೂದೆಯ ಪ್ರಸ್ತಾಪ ಮಾಡಲಾಗಿದೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಚುನಾವಣೆ | ಬಿಜೆಪಿಯ ಬಿ-ಟೀಮ್ ಎಐಎಂಐಎಂ; ಓವೈಸಿಯ ಪಕ್ಷಕ್ಕೆ ಗಫಾರ್ ಖಾದ್ರಿ ಗುಡ್-ಬೈ
ಕೇಂದ್ರ ಸರ್ಕಾರದ ಈ ಮಸೂದೆಗೆ ಎಐಎಂಐಎಂ ಮುಖ್ಯಸ್ಥ ಓವೈಸಿ ವಿರೋಧ ವ್ಯಕ್ತಪಡಿಸಿದ್ದಾರೆ. “ಟಿಟಿಡಿ ಮಂಡಳಿಯ 24 ಸದಸ್ಯರಲ್ಲಿ ಒಬ್ಬ ಸದಸ್ಯ ಕೂಡ ಹಿಂದೂಯೇತರರು ಆಗಿರಬಾರದು ಎಂದು ಟಿಟಿಡಿಯ ನೂತನ ಅಧ್ಯಕ್ಷರು ಹೇಳಿದ್ದಾರೆ. ಹಿಂದೂಗಳೇ ಇರಿ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಕೇಂದ್ರೀಯ ವಕ್ಫ್ ಕೌನ್ಸಿಲ್‌ನಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರನ್ನು ಕಡ್ಡಾಯಗೊಳಿಸುವ ನರೇಂದ್ರ ಮೋದಿ ಸರ್ಕಾರದ ಪ್ರಸ್ತಾವಿತ ವಕ್ಫ್ ಮಸೂದೆಗೆ ನಮ್ಮ ವಿರೋಧವಿದೆ” ಎಂದು ಹೇಳಿದರು.
AIMIM chief and Hyderabad MP #AsaduddinOwaisi (@asadowaisi):
— Surya Reddy (@jsuryareddy) November 2, 2024
"When trustees of #TTD cannot be Muslims, how will Non-Muslim members be on #WaqfBoard "
"Not even a single member of the 24 members of #TTDBoard (#TirumalaTirupatiDevasthanam ) is a non-Hindu…The new TTD Chairman… pic.twitter.com/jo5J5TCMvk
“ಟಿಟಿಡಿ ಹಿಂದೂ ಧರ್ಮದವರಾಗಿದ್ದರೆ, ವಕ್ಫ್ ಬೋರ್ಡ್ ಮುಸ್ಲಿಂ ಧರ್ಮದವರಿಗಾಗಿದೆ. ಟಿಟಿಡಿಯ ಟ್ರಸ್ಟಿಗಳು ಮುಸ್ಲಿಮರಾಗಿರಲು ಸಾಧ್ಯವಿಲ್ಲ ಎಂದಾಗ ಈ ನಿಬಂಧನೆಯನ್ನು ವಕ್ಫ್‌ಗೆ ಮಾತ್ರ ಯಾಕೆ ತರುತ್ತೀರಿ? ತಿರುಮಲ ಟ್ರಸ್ಟಿಯಲ್ಲಿ ಹಿಂದೂಗಳು ಮಾತ್ರ ಆಗಿರುವಾಗ ವಕ್ಫ್‌ನಲ್ಲಿ ಮುಸ್ಲಿಮೇತರರು ಯಾಕೆ” ಎಂದು ಓವೈಸಿ ಪ್ರಶ್ನಿಸಿದ್ದಾರೆ.
ಆಗಸ್ಟ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಲಾದ ವಕ್ಫ್ (ತಿದ್ದುಪಡಿ) ಮಸೂದೆ ಡಿಜಿಟಲೀಕರಣ, ಕಟ್ಟುನಿಟ್ಟಾದ ಲೆಕ್ಕಪರಿಶೋಧನೆ, ಪಾರದರ್ಶಕತೆ ಮತ್ತು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಆಸ್ತಿಗಳನ್ನು ಮರುಪಡೆಯುವ ಕಾನೂನಾಗಿದೆ.
