ರಾಜ್ಯಸಭೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆಯ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳು ಕೇಂದ್ರ ಸಚಿವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಿದ್ದ ಅಮಿತ್ ಶಾ, “ಈಗ ಅಂಬೇಡ್ಕರ್ ಅಂಬೇಡ್ಕರ್, ಅಂಬೇಡ್ಕರ್… ಎನ್ನುವುದು ಫ್ಯಾಷನ್ ಆಗಿಬಿಟ್ಟಿದೆ. ಇಷ್ಟು ಸಲ ದೇವರ ನಾಮವನ್ನು ಜಪಿಸಿದ್ದರೆ ನಿಮಗೆ ಏಳೇಳು ಜನ್ಮಗಳಲ್ಲೂ ಸ್ವರ್ಗ ಪ್ರಾಪ್ತಿಯಾಗುತಿತ್ತು” ಎಂದು ಹೇಳಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ನಿಜ್ಜಾರ್ ಹತ್ಯೆ | ಅಮಿತ್ ಶಾ ವಿರುದ್ಧದ ಕೆನಡಾ ಆರೋಪ ಕಳವಳಕಾರಿ : ಅಮೆರಿಕ
ಈ ಹೇಳಿಕೆಯನ್ನು ರಾಹುಲ್ ಗಾಂಧಿ ಸೇರಿದಂತೆ ಹಲವು ವಿಪಕ್ಷ ನಾಯಕರು ಖಂಡಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, “ಮನುಸ್ಮೃತಿಯನ್ನು ನಂಬುವವರಿಗೆ ಅಂಬೇಡ್ಕರ್ ಎಂದರೆ ಖಂಡಿತವಾಗಿಯೂ ಸಮಸ್ಯೆ ಉಂಟಾಗುತ್ತದೆ” ಎಂದು ಹೇಳಿದ್ದಾರೆ.
ಇನ್ನು ಅಮಿತ್ ಶಾ ಹೇಳಿಕೆ ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಇಂದು ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಬಾಬಾ ಸಾಹೇಬ್‌ಗೆ ಮಾಡಿದ ಅವಮಾನವು ಬಿಜೆಪಿ/ಆರ್‌ಎಸ್‌ಎಸ್ ತ್ರಿವರ್ಣ ಧ್ವಜದ ವಿರುದ್ಧವಾಗಿದೆ, ಅಶೋಕ ಚಕ್ರವನ್ನು ವಿರೋಧಿಸುತ್ತದೆ ಮತ್ತು ಸಂವಿಧಾನದ ಬದಲು ಮನುಸ್ಮೃತಿಯನ್ನು ಜಾರಿಗೆ ತರಲು ಬಯಸಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಬಾಬಾಸಾಹೇಬರು ಅದಕ್ಕೆ ಅವಕಾಶ ನೀಡಿಲ್ಲ. ಆದ್ದರಿಂದಲೇ ಅಂಬೇಡ್ಕರ್ ಮೇಲೆ ಬಿಜೆಪಿಗರಿಗೆ ಇಷ್ಟೊಂದು ದ್ವೇಷವಿದೆ” ಎಂದು ಹೇಳಿದ್ದಾರೆ.
“These days a new fashion is going on..Ambedkar..Ambedkar…Ambedkar,
— Shantanu (@shaandelhite) December 17, 2024
If they had taken God’s name this much, they would have reached heaven for the next 7 births.”
Probably the biggest insult of Ambedkar Ji has been done by Amit Shah. pic.twitter.com/13UYoP9crl
ದಮನಿತ ಸಮುದಾಯಗಳಿಗೆ ಅಂಬೇಡ್ಕರ್ ಅವರ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದ ಖರ್ಗೆ, “ನನ್ನಂತಹ ಕೋಟಿ ಕೋಟಿ ಜನರಿಗೆ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ದೇವರಿಗಿಂತ ಕಡಿಮೆಯಿಲ್ಲ. ಅವರು ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಬಡವರ ಮಹಾತ್ಮ ಆಗಿದ್ದರು, ಎಂದಿಗೂ ಆಗಿರುತ್ತಾರೆ” ಎಂದು ಅಭಿಪ್ರಾಯಿಸಿದರು.

ಮಂದಿರ ಮಸೀದಿ ದೇವರು ಧರ್ಮ ಎಲ್ಲವನ್ನೂ ವ್ಯಾಪಾರ ಮಾಡಿಕೊಂಡ ಜುಮ್ಲಾಗಳಿಗೆ ಅಂಬೇಡ್ಕರ್ ಅಂದ್ರೆ ಪಥ್ಯ ಆಗಲು ಹೇಗೆ ಸಾಧ್ಯ,,,ಈ ಜುಮ್ಲಾಗಳ ಗುಲಾಮಗಿರಿಯಲ್ಲಿ ಇರುವ ಶೂದ್ರ ಚೌಕಿದಾರ ಮುಂಡೇವು ಅರ್ಥ ಮಾಡಿಕೊಳ್ಳದೇ ಹೋದರೆ ಅನರ್ಥ ಆಗಿ ಹೋಗುವಿರಿ