ಕಳೆದ ಭಾನುವಾರ ಗುಜರಾತ್‌ನ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಆರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ 6ನೇ ಬಾರಿಗೆ ಚಾಂಪಿಯನ್ ಆಗಿತ್ತು.
ಟೂರ್ನಿಯಲ್ಲಿ ಫೈನಲ್ ಪಂದ್ಯಕ್ಕೂ ಮೊದಲು ಆಡಿದ್ದ ಎಲ್ಲ ಹತ್ತು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯಿಸುವ ಮೂಲಕ ಫೈನಲ್ ತಲುಪಿತ್ತು. ಆದರೆ ಫೈನಲ್‌ನಲ್ಲಿ ಅದೃಷ್ಟ ಕೈ ಹಿಡಿಯಲಿಲ್ಲ. ಟೀಮ್ ಇಂಡಿಯಾ ಸೋಲನುಭವಿಸಿದ್ದರಿಂದ ಕೋಟ್ಯಂತರ ಭಾರತೀಯರ ಕನಸು ನುಚ್ಚು ನೂರಾಗಿತ್ತು.
ಈ ಸೋಲಿನ ಬಳಿಕ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವಾಗಲೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಾರ್ವಜನಿಕ ಸಭೆಯಲ್ಲಿ ನೀಡಿರುವ ಹೇಳಿಕೆಯೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
पनौती 😉 pic.twitter.com/kVTgt0ZCTs
— Congress (@INCIndia) November 21, 2023
ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಹೆಸರು ಉಲ್ಲೇಖಿಸದೆಯೇ ಪರೋಕ್ಷವಾಗಿ ‘ಪನೌತಿ (ಅಪಶಕುನ)’ ಎಂದು ವ್ಯಂಗ್ಯವಾಡಿದ್ದಾರೆ.
जननायक श्री @RahulGandhi ने राजस्थान के अकोली में विशाल जनसभा को संबोधित किया।
राजस्थान की कांग्रेस सरकार ने जनता से जो वादे किए थे, वो निभाए हैं। लोगों को महंगाई से बचाया है, बेहतर शिक्षा और स्वास्थ्य की सुविधाएं दी हैं।
जनता के प्यार और आशीर्वाद से हम फिर एक बार राजस्थान… pic.twitter.com/mP5vzeQKEO
— Congress (@INCIndia) November 21, 2023
ಟೀಮ್ ಇಂಡಿಯಾದ ಸೋಲಿಗೆ ‘ಕೆಟ್ಟ ಶಕುನ’ ಅಲ್ಲಿದ್ದದ್ದು ಕಾರಣ ಎನ್ನುವ ಮೂಲಕ ವ್ಯಂಗ್ಯವಾಡಿದ್ದು, ಈ ವಿಡಿಯೋ ಈ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Panauti 😂
Our boys were going to win but, because of a Panauti they lost.
— Rahul Gandhi 🔥 pic.twitter.com/9kZ6qi1C7s
— Shantanu (@shaandelhite) November 21, 2023
“ಪನೌತಿ (ಕೆಟ್ಟ ಶಕುನ) ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿತ್ತು. ಇದರಿಂದಾಗಿ ಟೀಂ ಇಂಡಿಯಾ ಗೆಲ್ಲಬೇಕಿದ್ದ ಪಂದ್ಯವನ್ನು ಸೋತಿದೆ. ಮಾಧ್ಯಮಗಳು ಹಾಗೂ ಟಿವಿಯಲ್ಲಿ ಇದನ್ನು ತೋರಿಸುವುದಿಲ್ಲ. ಆದರೆ, ನಿಜ ಹೇಳಬೇಕೆಂದರೆ ಇದು ದೇಶದ ಜನತೆಗೆ ಗೊತ್ತಿದೆ” ಎಂದು ಪರೋಕ್ಷವಾಗಿ ಪ್ರಧಾನಿ ಹೆಸರು ಹೇಳದೆಯೇ ಟಾಂಗ್ ನೀಡಿದ್ದಾರೆ. ಈ ವೇಳೆ ಅಲ್ಲಿ ಸೇರಿದ್ದ ಜನರು ನಕ್ಕು ಬೊಬ್ಬೆ ಹೊಡೆದಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ಬಿಜೆಪಿಗರನ್ನು ಕೆರಳಿಸಿದೆ.
राहुल गाँधी के लिये 140 करोड़ भारतीय ही पनौती हैं जिन्होंने इनको और इनके परिवार को सत्ता से बाहर किया और इनके घोटालों का पर्दाफ़ाश किया!
मुझे बड़ा खेद है कि @RahulGandhi को अपने परिवार से ऐसे संस्कार मिले हैं जो वो देश के प्रधानमंत्री के लिए ऐसे अपशब्दों का इस्तेमाल कर रहे हैं…… pic.twitter.com/ABME0J7SRS
— Manjinder Singh Sirsa (@mssirsa) November 21, 2023
ರಾಹುಲ್ ಅವರ ‘ಪನೌತಿ’ ಹೇಳಿಕೆಗೆ ಗರಂ ಆಗಿರುವ ಬಿಜೆಪಿ ಮುಖಂಡ ಮಂಜಿಂದರ್ ಸಿಂಗ್ ಸಿರ್ಸಾ, ‘ರಾಹುಲ್ ಗಾಂಧಿಯವರು ಹೇಳಿಕೆ ಖಂಡನೀಯ. ಚುನಾವಣೆಯಲ್ಲಿ ಗೆದ್ದು ದೇಶದ ಪ್ರಧಾನಿಯಾಗಿರುವವರನ್ನು ‘ಪನೌತಿ’ ಎಂದು ಹೇಳುವ ಮೂಲಕ ನಿಂದನೀಯ ಪದಗಳನ್ನು ಬಳಸಿದ್ದಾರೆ. ಅಧಿಕಾರಕ್ಕಾಗಿ ಗಾಂಧಿ ಕುಟುಂಬ ಈ ರೀತಿಯ ಹೇಳಿಕೆ ಒಪ್ಪುವಂಥದ್ದಲ್ಲ. ಇಡೀ ಜಗತ್ತಿನ ದೊಡ್ಡ ಅಪಶಕುನಗಳು ನಿಮ್ಮ ಗಾಂಧಿ ಪರಿವಾರ. ನಿಮ್ಮ ಹೇಳಿಕೆಗೆ 140 ಕೋಟಿ ಭಾರತೀಯರು ಉತ್ತರ ನೀಡಲಿದ್ದಾರೆ. ರಾಹುಲ್ ಗಾಂಧಿಯವರ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ” ಎಂದು ಆಕ್ರೋಶ ಹೊರಹಾಕಿದ್ದಾರೆ.