ಶಾಸಕ ಹಾಗೂ ಸಂಸದರು ಭಾಷಣ ಮಾಡಲು ಹಾಗೂ ಮತಕ್ಕಾಗಿ ಪಡೆಯುವ ಲಂಚಕ್ಕೆ ವಿನಾಯಿತಿ ನೀಡುವ 1998ರ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
“ಲಂಚ ತೆಗೆದುಕೊಂಡಾಗ ಅದು ಸಂಪೂರ್ಣ ಲಂಚವಾಗುತ್ತದೆ” ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ಏಳು ಸದಸ್ಯರ ಸಾಂವಿಧಾನಿಕ ಪೀಠ ಸರ್ವಾನುಮತದ ತೀರ್ಪು ನೀಡಿದೆ.
“ಶಾಸಕ ಸದಸ್ಯರು ಪಡೆಯುವ ಲಂಚ ಹಾಗೂ ಭ್ರಷ್ಟಾಚಾರವು ಸಾರ್ವಜನಿಕ ಜೀವನದಲ್ಲಿನ ಪ್ರಾಮಾಣಿಕತೆಯನ್ನು ಹಾಳುಗೆಡುವುತ್ತದೆ. ವಿವಾದದ ಎಲ್ಲ ಅಂಶಗಳಿಂದ ನಾವು ಸ್ವತಂತ್ರವಾಗಿ ತೀರ್ಪು ನೀಡಿದ್ದೇವೆ. ಸಂಸದರು ವಿನಾಯಿತಿಯಿಂದ ಸಂತಸ ಪಡುತ್ತಾರೆಯೆ? ಬಹುತೇಕ ಈ ಅಂಶವನ್ನು ಒಪ್ಪುವುದಿಲ್ಲ, ರದ್ದುಗೊಳಿಸುತ್ತೇವೆ” ಎಂದು ಹೇಳಿದರು.
1998ರ ತೀರ್ಪಿನಲ್ಲಿ ಐದು ಸದಸ್ಯರ ಪೀಠವು ಸಂವಿಧಾನದ 105(2) ಹಾಗೂ 194(2)ರ ವಿಧಿಗಳಿಂದ ನೀಡಲಾದ ಸವಲತ್ತುಗಳ ಅಡಿಯಲ್ಲಿ ಶಾಸಕರು ಮತ್ತು ಸಂಸದರು ಭಾಷಣ ಹಾಗೂ ಮತ ಪಡೆಯಲು ನೀಡುವ ಲಂಚಕ್ಕೆ ವಿನಾಯಿತಿ ನೀಡುವ ಕಾನೂನು ನೀಡಿ ತೀರ್ಪು ನೀಡಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಬ್ರ್ಯಾಂಡ್ ಬೆಂಗಳೂರು’ ಬಡವರು ಬದುಕಲು ಯೋಗ್ಯವಾದ ನಗರವೂ ಆಗಲಿ
ಆದಾಗ್ಯೂ, 2012ರ ಮನವಿಯಲ್ಲಿ ಜೆಎಂಎಂ ನಾಯಕ ಸೀತಾ ಸೊರೆನ್ ರಾಜ್ಯಸಭೆಯಲ್ಲಿ ಮತ ಪಡೆಯಲು ಲಂಚ ಸ್ವೀಕರಿಸಿದ್ದಕ್ಕೆ ಆರೋಪಿಸಲಾಗಿತ್ತು. ಇವರು 105ರ ವಿಧಿಯಡಿ ವಿನಾಯಿತಿ ಕೋರಿದ್ದರು. ಅರ್ಜಿದಾರರ ಮನವಿಯನ್ನು ಜಾರ್ಖಂಡ್ ಕೋರ್ಟ್ ವಜಾಗೊಳಿಸಿತ್ತು. ನಂತರ ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
2023ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ 7 ಸದಸ್ಯರ ಪೀಠವು ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್ ಮತ್ತು ಅಮಿಕಸ್ ಕ್ಯೂರಿ ಪಿ.ಎಸ್.ಪಟ್ವಾಲಿಯಾ ಸೇರಿದಂತೆ ವಕೀಲರ ತಂಡ ಎರಡು ದಿನಗಳ ಸುದೀರ್ಘ ವಾದಗಳನ್ನು ಮಂಡಿಸಿದ ನಂತರ ತೀರ್ಪನ್ನು ಕಾಯ್ದಿರಿಸಿತ್ತು.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಏಳು ಸದಸ್ಯರ ಸಾಂವಿಧಾನಿಕ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ಎಂ.ಎಂ.ಸುಂದರೇಶ್, ಪಿ.ಎಸ್.ನರಸಿಂಹ, ಜೆ.ಬಿ.ಪರ್ಡಿವಾಲ, ಸಂಜಯ್ ಕುಮಾರ್ ಮತ್ತು ಮನೋಜ್ ಮಿಶ್ರಾ ಇದ್ದರು.
