ಕಾಡು ಬೆಳೆಸುವ ಭಾವನೆ ಜನರಲ್ಲಿಯೂ ಮೂಡಿ ಸರ್ಕಾರದ ಜೊತೆಗೆ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ, ಅರಣ್ಯ ಬೆಳೆಸುವುದು ಸರ್ಕಾರ ಮತ್ತು ಜನರ ಕರ್ತವ್ಯ. ವೈಜ್ಞಾನಿಕವಾಗಿ ಅಗತ್ಯವಿರುವಷ್ಟು ಅರಣ್ಯ ಪ್ರದೇಶ ನಮ್ಮಲ್ಲಿ ಇಲ್ಲ. ಪ್ರತಿ ವರ್ಷ ಸಸಿ ನೆಡಲು ಹಣ ಖರ್ಚು ಮಾಡಿದರೂ ನಮಗೆ ಅಗತ್ಯವಿರುವಷ್ಟು ಅರಣ್ಯವಿಲ್ಲ ಎಂದರು.
ಈ ವರ್ಷ 5 ಕೋಟಿ ಗಿಡ ನೀಡಬೇಕೆಂಬ ಉದ್ದೇಶವಿದೆ. ಐದು ಕೋಟಿ ಸಸಿಗಳೂ ಬದುಕುವುದಿಲ್ಲ. ಶೇ. 50 ಕ್ಕಿಂತಲೂ ಕಡಿಮೆ ಗಿಡಗಳು ಬದುಕುಳಿಯುತ್ತವೆ. ಹಾಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಕಾಡು ಬೆಳೆದಿಲ್ಲ ಎಂದು ಹೇಳಿದರು.
ತೆಂಗಿನ ಸಸಿ ನೆಟ್ಟ ಸಿಎಂ
ಸ್ವಾಭಿಮಾನಿ ಪಾರ್ಕ್ ಮತ್ತು ವನಮಹೋತ್ಸವ ಉದ್ಘಾಟಿಸಿದ್ದು, ತೆಂಗಿನ ಸಸಿಯನ್ನು ನೆಟ್ಟಿರುವುದಾಗಿ ತಿಳಿಸಿದರು. ಹಿಂದೆಯೂ ಒಂದು ಗಿಡ ನೆಟ್ಟಿದ್ದು ಅದು ಚೆನ್ನಾಗಿ ಬೆಳೆದಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಕರ್ನಾಟಕದ ಅಮರನಾಥ ಯಾತ್ರಾರ್ಥಿಗಳು ಸುರಕ್ಷಿತ: ಮುಖ್ಯಮಂತ್ರಿ ಸಿದ್ದರಾಮಯ್ಯ