ಭಯಗೊಂಡಿರುವ ಪ್ರಧಾನಿ ವೇದಿಕೆಯಲ್ಲೇ ಕಣ್ಣೀರು ಹಾಕಬಹುದು: ರಾಹುಲ್ ಗಾಂಧಿ

Date:

Advertisements

ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ನಡೆಸಿರುವ ವಾಗ್ದಾಳಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಅವರು, “ನಮ್ಮ ಪ್ರಧಾನಿ ಭಯಗೊಂಡಿದ್ದು ವೇದಿಕೆಯಲ್ಲೇ ಕಣ್ಣೀರು ಹಾಕಬಹುದು” ಎಂದು ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ನೀವು ಪ್ರಧಾನಿಯವರ ಭಾಷಣಗಳನ್ನು ಕೇಳಿರಬಹುದು, ಅವರು ಭಯ ಪಡುತ್ತಾರೆ. ಅವರು ವೇದಿಕೆಯ ಮೇಲೆ ಕಣ್ಣೀರು ಹಾಕುವ ಸಾಧ್ಯತೆಯಿದೆ” ಎಂದರು.

ಇತ್ತೀಚೆಗೆ ಪ್ರಧಾನಿ ಮೋದಿ ಮಂಗಲಸೂತ್ರ, ಸಂಪತ್ತಿನ ಮರುಹಂಚಿಕೆ, ಪಿತ್ರಾರ್ಜಿತ ತೆರಿಗೆ ಸೇರಿದಂತೆ ಹಲವು ವಿಚಾರಗಳಲ್ಲಿ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ಭಾಷಣ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ “ಮೋದಿ ವಿವಿಧ ವಿಧಾನಗಳ ಮೂಲಕ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುತ್ತಿದ್ದಾರೆ” ಎಂದು ಆರೋಪಿಸಿದರು.

Advertisements

ಇದನ್ನು ಓದಿದ್ದೀರಾ?  ಚುನಾವಣೆ ಈಗಾಗಲೇ ಮೋದಿ ಕೈ ತಪ್ಪಿದೆ, ಇದು ಅವರಿಗೂ ತಿಳಿದಿದೆ: ರಾಹುಲ್ ಗಾಂಧಿ

“ಮೋದಿ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಕೆಲವೊಮ್ಮೆ ಅವರು ಚೀನಾ ಮತ್ತು ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ, ಮತ್ತು ಕೆಲವೊಮ್ಮೆ ಅವರು ನಿಮ್ಮಲ್ಲಿ ತಟ್ಟೆಗಳನ್ನು ಬಾರಿಸಲು ಹೇಳುತ್ತಾರೆ. ನಿಮ್ಮ ಮೊಬೈಲ್ ಫೋನ್‌ಗಳ ಟಾರ್ಚ್ ಲೈಟ್ ಅನ್ನು ಆನ್ ಮಾಡಲು ಹೇಳುತ್ತಾರೆ” ಎಂದು ಗಾಂಧಿ ಟೀಕಿಸಿದರು.

“ಬಡತನ, ನಿರುದ್ಯೋಗ ಮತ್ತು ಬೆಲೆ ಏರಿಕೆ ಸೇರಿದಂತೆ ಭಾರತದಲ್ಲಿ ಮೂರ್ನಾಲ್ಕು ಪ್ರಮುಖ ಸಮಸ್ಯೆಗಳಿವೆ. ಕಾಂಗ್ರೆಸ್ ಮಾತ್ರ ನಿರುದ್ಯೋಗವನ್ನು ತೊಡೆದುಹಾಕಲು, ಬೆಲೆ ಏರಿಕೆಯನ್ನು ನಿಯಂತ್ರಿಸಲು ಮತ್ತು ಜನರಿಗೆ ಅವರ ಪಾಲನ್ನು ನೀಡಲು ಸಾಧ್ಯ” ಎಂದು ಗಾಂಧಿ ಪ್ರತಿಪಾದಿಸಿದರು.

ಇದನ್ನು ಓದಿದ್ದೀರಾ?  ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಮೋದಿ, ರಾಹುಲ್ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್

“ಮೋದಿ ಬಡವರ ಹಣವನ್ನು ಮಾತ್ರ ಕಿತ್ತುಕೊಂಡಿದ್ದಾರೆ. ಅವರು ಕೆಲವು ಕೋಟ್ಯಾಧಿಪತಿಗಳನ್ನು ಸೃಷ್ಟಿಸಿದ್ದಾರೆ. ದೇಶದ 70 ಕೋಟಿ ಜನರ ಸಂಪತ್ತಿಗೆ ಸಮನಾದ ಸಂಪತ್ತನ್ನು 22 ಮಂದಿ ಹೊಂದಿದ್ದಾರೆ. ಕೇವಲ ಒಂದು ಶೇಕಡ ಜನರು ರಾಷ್ಟ್ರದ ಶೇಕಡ 40ರಷ್ಟು ಸಂಪತ್ತನ್ನು ನಿಯಂತ್ರಿಸುತ್ತಿದ್ದಾರೆ” ಎಂದು ಆರೋಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲಿಂಗ ತಾರತಮ್ಯ | ಮಹಿಳೆಯರಿಗಿಂತ ಅಧಿಕ ವೇತನ ಪಡೆಯುತ್ತಾರೆ ಪುರುಷ ನರ್ಸ್‌ಗಳು: ಅಧ್ಯಯನ ವರದಿ

ನರ್ಸಿಂಗ್ ಅನ್ನು ಹೆಚ್ಚಾಗಿ ಮಹಿಳೆಯರ ವೃತ್ತಿ ಎಂಬಂತೆ ನೋಡಲಾಗುತ್ತದೆ. ಆದ್ದರಿಂದಾಗಿ ಪುರುಷರು...

ಆಧಾರ್ ಕಾರ್ಡ್‌ ಪೌರತ್ವದ ಪುರಾವೆಯಲ್ಲ: ಬಿಜೆಪಿಯ ಅಮಿತ್ ಮಾಳವೀಯ

ಆಧಾರ್ ಕಾರ್ಡ್‌ ಪೌರತ್ವದ ಪುರಾವೆಯಲ್ಲ. ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ...

ಉತ್ತರ ಪ್ರದೇಶ | ಭೀಕರ ಅಪಘಾತ: ಇಬ್ಬರು ಮಕ್ಕಳು ಸೇರಿ ಎಂಟು ಸಾವು, 43 ಮಂದಿಗೆ ಗಾಯ

ಟ್ರ್ಯಾಕ್ಟರ್ ಟ್ರಾಲಿ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು...

ಜಾರ್ಖಂಡ್ | ಭೂಸ್ವಾಧೀನ ವಿವಾದ; ಮಾಜಿ ಸಿಎಂ ಚಂಪೈ ಸೊರೇನ್‌ ಗೃಹಬಂಧನ

ಜಾರ್ಖಂಡ್ ಸರ್ಕಾರದ ಬಹುಕೋಟಿ ವೆಚ್ಚದ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌...

Download Eedina App Android / iOS

X