ರಾಜಕೀಯ ಲೆಕ್ಕಾಚಾರ ಮತ್ತು ಅಪ್ಪ ಮಕ್ಕಳ ಪಕ್ಷ

Date:

Advertisements

ವಂಶಾಡಳಿತ ರಾಜಕಾರಣದ ಆಡಳಿತ ರಾಜರ ಕಾಲದಲ್ಲಿ ಹೇರುವಿಕೆಯಾಗಿತ್ತು. ಜನ ಮತ್ತೆ ಮತ್ತೆ ಆಯ್ಕೆ ಮಾಡಿದರೆ ಗೆದ್ದವನ ತಪ್ಪಲ್ಲ…

ರಾಜಕೀಯ ಲೆಕ್ಕಾಚಾರ ಅನ್ನುವುದನ್ನು ಕೇಳುತ್ತೇವೆ. ನನ್ನ ಅನುಭವದ ಪ್ರಕಾರ ವಿಜ್ಞಾನ , ಗಣಿತ, ಆಡಳಿತ ಹೀಗೆ ವಿವಿಧ ವಿಷಯದಲ್ಲಿ ಒಂದು ಲೆಕ್ಕಾಚಾರದ ಚೌಕಟ್ಟು ಇದೆ. ರಾಜಕೀಯ ಲೆಕ್ಕಾಚಾರ ಅಂದರೆ ಅದು ಯಾವುದೇ ಚೌಕಟ್ಟನಿಲ್ಲಿ ಇರುವುದಲ್ಲ. ಹಾಗಾಗಿ ಅದು ಲೆಕ್ಕಾಚಾರವೂ ಅಲ್ಲ. ಅದು ಯಾವ ಗೆರೆಯೂ ಇಲ್ಲದ ತೆರೆದ ಬಯಲಿನ ಆಟ ಅಷ್ಟೆ. ನೀತಿ ನಿಯಮವಿಲ್ಲ . ಹೇಗಾದರೂ ಆಡು ಗೆಲ್ಲಬೇಕು. ಅದಕ್ಕೆ ಜನ ಬೆಂಬಲವಿದ್ದರೆ ಮುಗಿಯಿತು.

ಬಿಜೆಪಿ ಸತತವಾಗಿ ತಾನು ಉಳಿದವರಿಗಿಂತ ಭಿನ್ನ, ನಾನು ಭ್ರಷ್ಟಾಚಾರ ರಹಿತ , ನಾನು ವಂಶಾಡಳಿತದ ವಿರುದ್ಧ ಎಂದು ಹೇಳಿಕೊಂಡೆ ಬಂದಿತು. ಜನ ನಂಬಿದ್ದರು ಕೂಡಾ. ರಾಜಕೀಯದಲ್ಲಿ ಅಥವಾ ಬದುಕಿನಲ್ಲಿ ಯಾವುದೇ ಸಂಪತ್ತು ಅಧಿಕಾರ ಇಲ್ಲದಾಗ ಮೌಲ್ಯಗಳು, ನೈತಿಕತೆಗಳು ಮಾತನಾಡುತ್ತದೆ. ಅದು ಅಧಿಕಾರ ಸಂಪತ್ತು ಇದ್ದಾಗ ಹೇಗಿರುತ್ತದೆ ಅನ್ನುವುದು ಮುಖ್ಯ. ಬಿಜೆಪಿ ಅಧಿಕಾರ ಸಿಗುವ ಮೊದಲು ಸ್ವಚ್ಛ , ಸುಂದರ. ಆದರೆ, ಒಂದೊಂದೇ ರಾಜ್ಯಗಳಲ್ಲಿ ಅಧಿಕಾರ ಸಿಕ್ಕಂತೆ ಅಲ್ಲಿ ಭ್ರಷ್ಟಾಚಾರ, ಅನೈತಿಕ ರಾಜಕಾರಣ ನಿಧಾನವಾಗಿ ಶಬ್ದ ಮಾಡತೊಡಗಿದ್ದು. ಈಗ ದೀರ್ಘ ಕಾಲ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷವು ನೈತಿಕತೆ, ಭ್ರಷ್ಟಾಚಾರ, ಆದರ್ಶ ಶಬ್ದಗಳ ಬಳಕೆ ಮಾಡಿದರೆ ಅವರ ಪಕ್ಷದ ಕಾರ್ಯಕರ್ತರು ಮತ್ತು ಜನಸಾಮಾನ್ಯರು ಗಹಗಹಿಸಿ ನಗುವ ಮಟ್ಟಕ್ಕೆ ಬಂದಿದೆ.

Advertisements

ವಂಶಾಡಳಿತ ರಾಜಕಾರಣದ ಆಡಳಿತ ರಾಜರ ಕಾಲದಲ್ಲಿ ಹೇರುವಿಕೆಯಾಗಿತ್ತು. ಈಗ ಪ್ರಜಾಪ್ರಭುತ್ವ. ಜನರ ಆಯ್ಕೆಯಾಗುತ್ತದೆ. ಕಾಂಗ್ರೆಸ್‌‌ನ ವಿಷಯ ಬಂದಾಗ ನಾನು ಹೇಳುವುದು ಅದನ್ನೇ; ಜನ ಮತ್ತೆ ಮತ್ತೆ ಆಯ್ಕೆ ಮಾಡಿದರೆ ಗೆದ್ದವನ ತಪ್ಪಲ್ಲ. ನೆಹರೂ, ಇಂದಿರಾ ಗಾಂಧಿ, ರಾಜೀವ ಗಾಂಧಿ ಚುನಾವಣೆಯಲ್ಲಿ ಗೆದ್ದದ್ದು. ಈಗ ದೇಶದ ಬಹುತೇಕ ಕಡೆಗಳಲ್ಲಿ ನಾಯಕರ ಮಕ್ಕಳು, ಪ್ರಾದೇಶಿಕ ಪಕ್ಷದ ವಂಶಾವಡಳಿತಕ್ಕೂ ಜನ ಮತ ಕೊಡುತ್ತಿದ್ದಾರೆ. ನಾಳೆ ಯಡಿಯೂರಪ್ಪರ ನಂತರ ಅವರ ಮಗ, ನಂತರ ಅವರ ಮೊಮ್ಮಗನಿಗೆ ಜನ ಮತ ಕೊಟ್ಟದ್ದೇ ಆದರೆ ಯಾವ ಮೋದಿ, ಅಮಿತ್‌ ಶಾ, ಸಂಘ ಪರಿವಾರವೂ ಎನೂ ಮಾಡಲಾಗದು. ಪಕ್ಷ ಉಳಿಯಬೇಕಾ ಗೆಲ್ಲುವವರನ್ನು ನಿಲ್ಲಿಸಬೇಕು. ಹಾಗೇ ಸೈದ್ಧಾಂತಿಕವಾಗಿ ಕೂಡಾ ರಾಜಿಯಾಗುತ್ತದೆ. ಆಗಲೇ ಬೇಕಾಗುತ್ತದೆ.

ಒಬ್ಬ ನಾಯಕ 5 ಬಾರಿ ಹತ್ತು ಬಾರಿ ಒಂದು ಕ್ಷೇತ್ರದಲ್ಲಿ ಹಿಡಿತವಿರಿಸುವುದು ಜನರ ಬೆಂಬಲವೂ ಇರುವುದರಿಂದ. ಚುನಾವಣಾ ನೀತಿ ನಿಯಮಗಳಲ್ಲಿ ಬಿಜೆಪಿ ಯಾಕೆ ಆಸಕ್ತಿ ತೋರಿಸಲಿಲ್ಲ. ಕನಿಷ್ಠ ಚುನಾವಣಾ ಸುಧಾರಣೆಯ ಕುರಿತೂ ಸೊಲ್ಲೇ ಎತ್ತಲಿಲ್ಲ. ಯಾಕೆಂದರೆ ಅದಕ್ಕೆ ತನ್ನ ಅಧಿಕಾರ ಉಳಿಯಬೇಕು ಅಷ್ಟೆ. ಸುಧಾರಣೆ ಅಲ್ಲ.

ಇನ್ನು ಜನತಾದಳದ ಅಪ್ಪ ಮಕ್ಕಳ ಬಗ್ಗೆ, ಅವರಿಗೆ ತಮ್ಮ ಕುಟುಂಬದ ರಾಜಕಾರಣ ಮಾತ್ರ ಮುಖ್ಯ. ಅದು ಜಗಜ್ಜಾಹೀರು. ಕೆಲವು ಕ್ಷೇತ್ರದಲ್ಲಿ ಜನ ಜಾತಿ ರಾಜಕೀಯ ಕಾರಣಕ್ಕೆ ಅವರನ್ನು ಗೆಲ್ಲಿಸುತ್ತಾರೆ. ಇತ್ತೀಚೆಗೆ ಜನ ವಿರೋಧ ಬರುತ್ತಿದೆ. ಅದಕ್ಕೆ ಉಳಿಯಬೇಕಾದರೆ ಇವರಿಗೆ ಬಿಜೆಪಿ ಬೇಕು. ನಾಳೆ ಬೇಡ ಅಂದಾಗ ಬಿಡುತ್ತಾರೆ.

ಇದನ್ನೂ ಓದಿರಿ: ಒಳಮೀಸಲಾತಿ: ಮಾದಿಗರಿಗೆ ಮತ್ತೆ ಮಹಾವಂಚನೆ ಮಾಡುತ್ತಿರುವ ಮೋದಿ

ರಾಜಕೀಯದಲ್ಲಿ ಆದರ್ಶ ರಾಜಕಾರಣ, ನೈತಿಕ ರಾಜಕಾರಣ, ಮೌಲ್ಯಾಧಾರಿತ ರಾಜಕಾರಣದ ಬಿಜೆಪಿ ಭಾಷಣಗಳು ಅಧಿಕಾರ ಇಲ್ಲದ ದಿನಗಳಲ್ಲಿ ಕೇಳುವುದಕ್ಕೆ ಚಂದ ಇತ್ತು. ಈಗ ತೆರೆದುಕೊಳ್ಳುತ್ತಿರುವುದು ವಾಸ್ತವದ ಪರದೆ. ಇಲ್ಲಿ ಲೆಕ್ಕಾಚಾರ ಅಂದರೆ ಪ್ಲಸ್ ಮತ್ತು ಮೈನಸ್. ಯಾವತ್ತೂ ಪ್ಲಸ್ ಇರಬೇಕು ಅನ್ನುವುದಕ್ಕೆ ಎನು ಬೇಕಾದರೂ ಮಾಡಬೇಕು. ಅದು ಆಪರೇಷನ್ ಆದೀತು, ಸೈದ್ಧಾಂತಿಕ ರಾಜಿಯಾದೀತು, ಭ್ರಷ್ಟಾಚಾರಿಗಳಿಗೆ ಸ್ವಾಗತವಾದೀತು- ಪ್ಲಸ್ ಇರಬೇಕು. ಇದು ರಾಜಕಾರಣ.

ಕೊನೆಯ ಮಾತು. ಇನ್ನಾದರೂ ಬಿಜೆಪಿ ನಾಯಕರು, ಗುತ್ತಿಗೆ ಆಧಾರಿತ ಭಾಷಣಕಾರರಾದ ಸೂಲಿಬೆಲೆ ಮತ್ತು ಟೀಂ ನವರು, ಆರ್‌‌ಎಸ್‌ಎಸ್‌ ನಾಯಕರು ಉಳಿದ ರಾಜಕೀಯ ಪಕ್ಷದ ಬಗ್ಗೆ ಉರುಳಿಸುವ ಶಬ್ಧಗಳ ಬಗ್ಗೆ ಹುಷಾರಾಗಿದ್ದರೆ ಒಳ್ಳೆಯದು. ಇಲ್ಲವಾದರೆ ಸಾಮೂಹಿಕ ಜೋಕರ್‌‌ಗಳ ಸರ್ಕಸ್ ಕಂಪೆನಿಯಂತೆ ಜನ ನೋಡಿಯಾರು.

ಎಂ ಜಿ ಹೆಗಡೆ
ಎಂ ಜಿ ಹೆಗಡೆ, ಮಂಗಳೂರು
+ posts

ಲೇಖಕ, ಜನಪರ ಹೋರಾಟಗಾರ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಎಂ ಜಿ ಹೆಗಡೆ, ಮಂಗಳೂರು
ಎಂ ಜಿ ಹೆಗಡೆ, ಮಂಗಳೂರು
ಲೇಖಕ, ಜನಪರ ಹೋರಾಟಗಾರ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X