ಜೂನ್ 1ರಂದು EXIT POLL ಪ್ರಕಟಿಸಿದ್ದ ಆ್ಯಕ್ಸಿಸ್ ಮೈ ಇಂಡಿಯಾವು ಎನ್‌ಡಿಎಗೆ 361ರಿಂದ 401 ಸ್ಥಾನಗಳು ಬರಲಿದೆ. ಪ್ರಧಾನಿಯಾಗಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಏರಲಿದ್ದಾರೆ ಎಂದಿದ್ದರು. ಆದರೆ, ಜೂನ್ 4ರಂದು AXIS MY INDIA ನಿರ್ದೇಶಕ ಪ್ರದೀಪ್ ಗುಪ್ತಾ ಅವರು ನುಡಿದಿದ್ದ ಭವಿಷ್ಯ ಸುಳ್ಳಾಗಿದೆ.
Pradeep Gupta says, We didn’t go wrong completely. But every pollster can say the same. https://t.co/0Avfr7p8Rl pic.twitter.com/66VNiXYzrL
— Mohammed Zubair (@zoo_bear) June 4, 2024
ಬಿಜೆಪಿ ನೇತೃತ್ವದ ಎನ್‌ಡಿಎಯು ಸರಳ ಬಹುಮತ(272 ಸ್ಥಾನ) ಪಡೆಯಲು ಹೆಣಗಾಡುತ್ತಿದೆ. ಹೀಗಾಗಿ, ಇಂಡಿಯಾ ಟುಡೇ ಚಾನೆಲ್‌ನ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಜೊತೆಗೆ ಚರ್ಚೆ ನಡೆಸುತ್ತಿದ್ದಾಗ AXIS MY INDIA ನಿರ್ದೇಶಕ ಪ್ರದೀಪ್ ಗುಪ್ತಾ ಕಣ್ಣೀರು ಹಾಕಿದ್ದಾರೆ. ಈ ವೇಳೆ ನಿರೂಪಕ ರಾಹುಲ್ ಕನ್ವಾಲ್ ಸಂತೈಸಿದರು. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಆ್ಯಕ್ಸಿಸ್ ಮೈ ಇಂಡಿಯಾ ಪ್ರಕಟಿಸಿದ್ದ EXIT POLL ಅನ್ನು ನಂಬಿಕೊಂಡಿದ್ದ ಹಲವು ಮಂದಿ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಹೂಡಿಕೆ ಮಾಡಿದ್ದರು. ಈಗ ಫಲಿತಾಂಶ ಬರುತ್ತಿದ್ದಂತೆಯೇ ಸುಮಾರು 46 ಲಕ್ಷ ಕೋಟಿ ಮಾರುಕಟ್ಟೆಯಲ್ಲಿ ಏರಿಳಿತವಾಗಿ, ನಷ್ಟ ಉಂಟಾಗಿರುವುದಾಗಿ ವರದಿಯಾಗಿದೆ.
Pradeep Gupta made fun of Rahul Gandhi yesterday and called Khata Khat as nonsense
Today RaGa brought him in knees, he is crying and we aren’t feeling bad 🔥 pic.twitter.com/50NEagxiO5
— Amockxi FC (@Amockx2022) June 4, 2024
