ಪ್ರಜ್ವಲ್ ಲೈಂಗಿಕ ಹಗರಣದಲ್ಲಿ ಸಂತ್ರಸ್ತೆಯರಿಗೆ ನೆರವು ನೀಡಿ. ಅವರಿಗೆ ಸ್ವಾಂತ್ವನ ಹೇಳಿ. ಜೊತೆಗೆ, ಸಂತ್ರಸ್ತರು ನ್ಯಾಯ ಪಡೆಯಲು ಅಗತ್ಯವಿರುವ ಬೆಂಬಲ ಒದಗಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಪತ್ರ ಬರೆದಿದ್ದಾರೆ. “ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ನ್ಯಾಯ ಸಿಗುವಂತೆ ಮಾಡಲು ಹೋರಾಟ ನಡೆಸಬೇಕಾದ್ದ ಕಾಂಗ್ರೆಸ್‌ನ ಜವಾಬ್ದಾರಿಯಾಗಿದೆ. ಇಂತದೊಂದು ಇಂತಹ ಘೋರ ಕೃತ್ಯದ ಬಗ್ಗೆ ಬಿಜೆಪಿ ನಾಯಕರಿಗೆ ಮಾಹಿತಿ ನೀಡಿದ್ದರೂ, ಪ್ರಧಾನಿ ಮೋದಿ ಅವರು ಸಾಮೂಹಿಕ ಅತ್ಯಾಚಾರಿಯ ಪರ ಮತ ಯಾಚಿಸಿರುವುದು ಆಘಾತಕಾರಿ ಸಂಗತಿ” ಎಂದು ಹೇಳಿದ್ದಾರೆ.
“ಕೃತ್ಯಗಳಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಕಾನೂನು ವ್ಯಾಪ್ತಿಗೆ ತಂದು, ಅಪರಾಧಿಗಳಿಗೆ ಶಿಕ್ಷೆ ಕೊಡಿಸಬೇಕಾದ ಹೊಣೆಗಾರಿಗೆ ನಮ್ಮ ಮೇಲಿದೆ. ಅತ್ಯಾಚಾರ ನಡೆಸಿರುವ ವ್ಯಕ್ತಿಗೆ ಕಾನೂನಿನ ಮೂಲಕ ವಿಧಿಸಲು ಸಾಧ್ಯವಿರುವ ಅತ್ಯಂತ ಕಠಿಣ ಶಿಕ್ಷೆ ಆಗಬೇಕು” ಎಂದು ರಾಹುಲ್ ಹೇಳಿದ್ದಾರೆ.
“ತನ್ನನ್ನು ಸಹೋದರ, ಮಗನಂತೆ ಭಾವಿಸಿದ್ದ ನೂರಾರು ಮಹಿಳೆಯರ ಮೇಲೆ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಹಿಳೆಯರ ಗೌರವ ಹಾಳು ಮಾಡಿದ್ದಾನೆ. ತನ್ನ ಕೃತ್ಯಗಳನ್ನು ತಾವೇ ವಿಡಿಯೋ ಮಾಡಿಕೊಂಡಿರುವ ಆತನಿಗೆ ಶಿಕ್ಷೆಯಾಗಬೇಕು” ಎಂದಿದ್ದಾರೆ.
“ಪ್ರಜ್ವಲ್ ಕೃತ್ಯದ ಬಗ್ಗೆ 2023ರ ಡಿಸೆಂಬರ್‌ನಲ್ಲಿಯೇ ಬಿಜೆಪಿ ಮುಖಂಡ ಜಿ ದೇವರಾಜೇಗೌಡ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ಆದರೂ, ಆತನ ಪರವಾಗಿ ಮೋದಿ ಪ್ರಚಾರ ನಡೆಸಿದ್ದಾರೆ. ಪ್ರಜ್ವಲ್ ವಿದೇಶಕ್ಕೆ ಪರಾರಿಯಾಗಲು ಕೇಂದ್ರ ಸರ್ಕಾರವು ಇಚ್ಛೆಯಿಂದಲೇ ಸಹಕಾರ ನೀಡಿದೆ. ಆರೋಪಿಯನ್ನು ರಕ್ಷಿಸುತ್ತಿರುವ ಪ್ರಧಾನಿ ಮತ್ತು ಗೃಹ ಸಚಿವರ ನಡೆಯನ್ನು ಖಂಡಿಸಬೇಕು” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ತುಟಿ ಬಿಚ್ಚದ ಇಂತಹ ರಾಜಕಾರಣಿಗಳನ್ನು ನನ್ನ 20 ವರ್ಷದ ರಾಜಕೀಯದಲ್ಲಿ ಎಂದೂ ನೋಡಿರಲಿಲ್ಲ. ಮಣಿಪುರದಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರನ್ನು ಪ್ರಧಾನಿ ಬೆಂಬಲಿಸಿದ್ದರು” ಎಂದು ಆರೋಪಿಸಿದ್ದಾರೆ.
ನಾನು ಸತ್ತಂಗೆ ನಟಿಸುತ್ತಿನಿ.. ನೀನು ಅತ್ತಂಗೆ ನಾಟಕ ಮಾಡು ಅನ್ನೋ ರೀತಿಯಲ್ಲಿದೆ. ಪ್ರಜ್ವಲ್ ರೇವಣ್ಣನ ಅತ್ಯಾಚಾರ ಪ್ರಕರಣ. ಈ ಕಿರಾತಕರಿಂದ ನೂರಾರು ಸಂತ್ರಸ್ತೆಯರು ಜೀವನವನ್ನೇ ನಾಶ ಮಾಡಿಕೊಂಡಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡು 8 ದಿನಗಳಾಗುತ್ತಿದೆ. ಈಗಾಗಲೇ ಮೂರು ಎಫ್.ಐ,ಆರ್ ದಾಖಲಾಗಿದೆ. ಅದ್ರೂ ಯಾವುದೇ ಬೆಳವಣಿಗೆ ಆಗಿಲ್ಲ. ಈಗಾಗಲೇ ಆರೋಪಿಗಳನ್ನು ಹೆಡಮುರಿಕಟ್ಚಬೇಕಿತ್ತು ಪೊಲೀಸ್ರು.. ಅದ್ರೆ ಕಾಂಗ್ರೆಸ್ ಸರ್ಕಾರದಿ ಸಿಎಂ, ಡಿಸಿಎಂ ಹಾಗೂ ದಳಪತಿಗಳ ನಡುವೆ ಅಡ್ಜಸ್ಟ್ ಮೆಂಟ್ ರಾಜಕಾರಣವಾದಂತೆ ಕಾಣುತ್ತಿದೆ. ಏಕೆಂದ್ರೆ ಅತ್ಯಾಚಾರಗಳನ್ನು ಬಂಧಿಸಿ ಕ್ರಮಕೈಗೊಂಡಿಲ್ಲ. ರಾಜ್ಯದಲ್ಲಿ ಮಹಿಳೆಯರು ಆಕ್ರೋಶಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ ಅಷ್ಟೇ.. ರಾಜ್ಯದ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಸೇರಿ ಈ ಪ್ರಕರಣದಲ್ಲಿ ತಿಪ್ಪೇಸಾರಿಸು ಕೆಲಸ ಮಾಡದಿರಲಿ.. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಲೆಟರ್ ಬರೆದು ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲಿ ಎಂದಷ್ಟೇ ಹೇಳದಿರಲಿ..ಅಂತೆಯೇ ಕಾರ್ಯಕೂಡ ಸಾಗುವ ಮುೂಲಕ ಆರೋಪಿಗಳಿಗೆ ಕೂಡಲೇ ಶಿಕ್ಷೆ ವಿಧಿಸಿ ಸಂತ್ರಸ್ತ.. ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸಿ. ಆದೇನೇ ಆಗಲಿ ಆರೋಪಿಗಳಿಗೆ ಕೋರ್ಟ್ ಮಾತ್ರ ಯಾವುದೇ ಕಾರಣಕ್ಕೂ ಜಾಮೀನು ನೀಡದಿರಲಿ..