“ಪ್ರಧಾನಿ ನರೇಂದ್ರ ಮೋದಿಯವರಿಗೆ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರು ಸವಾಲು ಹಾಕದಿದ್ದರೆ, ಜನರೇ ಸವಾಲು ಹಾಕುತ್ತಿದ್ದಾರೆ” ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದರು.
ಸುದ್ದಿವಾಹಿನಿ ಆರ್‌ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಶಾಂತ್ ಕಿಶೋರ್, “ಈ ಚುನಾವಣೆಯಲ್ಲಿ ಬ್ರಾಂಡ್ ಮೋದಿ ಅಜೇಯರಲ್ಲ ಎಂಬುದು ಜನರಿಗೆ ತಿಳಿದಿದೆ. ಹಾಗಂತ ಪ್ರಧಾನಿ ಮೋದಿಗೆ ಯಾರೂ ಸವಾಲು ಹಾಕಲು ಸಾಧ್ಯವಿಲ್ಲ ಎಂದಲ್ಲ. ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರು ಪ್ರಧಾನಿ ಮೋದಿಗೆ ಸವಾಲು ಹಾಕಲಿ ಅಥವಾ ಹಾಕದಿರಲಿ, ಜನರು ಅವರಿಗೆ ಸವಾಲು ಹಾಕುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಪ್ರಶಾಂತ್ ಕಿಶೋರ್ ಚುನಾವಣಾ ಸಮೀಕ್ಷೆ ಸುಳ್ಳಾಗಿಲ್ಲವೇ, ಇದು ಬಿಜೆಪಿಯ ಮೈಂಡ್ ಗೇಮ್ ಅಲ್ಲವೇ?
“60 ಕೋಟಿಗೂ ಹೆಚ್ಚು ಜನರು ದಿನಕ್ಕೆ ನೂರು ರೂಪಾಯಿಗಿಂತ ಹೆಚ್ಚು ಸಂಪಾದನೆ ಮಾಡಲಾಗದ ಸ್ಥಿತಿ ದೇಶದಲ್ಲಿದೆ. ಇಂತಹ ದೇಶದಲ್ಲಿ ಸರ್ಕಾರದ ವಿರುದ್ಧ ಇರುವ ವಿಪಕ್ಷವನ್ನು ಎಂದಿಗೂ ದುರ್ಬಲಗೊಳಿಸಲಾಗುವುದಿಲ್ಲ. ಆ ಪ್ರಯತ್ನವನ್ನು ಮಾಡುವ ತಪ್ಪನ್ನು ಎಂದಿಗೂ ಮಾಡಬಾರದು. ವಿಪಕ್ಷಗಳು ದುರ್ಬಲವಾಗಬಹುದು. ಆದರೆ ಸರ್ಕಾರಕ್ಕೆ ಇರುವ ವಿರೋಧಗಳು ದುರ್ಬಲವಾಗುವುದಿಲ್ಲ” ಎಂದು ಅಭಿಪ್ರಾಯಿಸಿದರು.
“ಇಲ್ಲಿ [ಭಾರತ] ಶೇಕಡ 50ರಷ್ಟು ಮತಗಳನ್ನು ಪಡೆಯಲು ಸಾಧ್ಯವಿಲ್ಲ. 100 ಜನರು ಮತ ಚಲಾಯಿಸಿದರೆ, ಕೇವಲ 40 ಜನರು ಮಾತ್ರ ಪ್ರಧಾನಿ ಮೋದಿಯನ್ನು ಬೆಂಬಲಿಸುತ್ತಾರೆ. 60-62 ಜನರು ಅತೃಪ್ತಿಯಾಗಿಯೇ ಇರುತ್ತಾರೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ಮುಂದೆ ಸವಾಲುಗಳಿವೆ. ಗ್ರಾಮೀಣ ಸಂಕಷ್ಟ ದೇಶದ ಅತೀ ಪ್ರಮುಖ ಸಮಸ್ಯೆ. ಇಷ್ಟೆಲ್ಲ ಆದ ಬಳಿಕವೂ ಬಿಜೆಪಿ ಗೆದ್ದರೆ ವಿಪಕ್ಷಗಳು ಸಾಕಷ್ಟು ಬಲವಾಗಿಲ್ಲ, ವಿಶ್ವಾಸಾರ್ಹವಾಗಿಲ್ಲ ಎಂದರ್ಥವೇ ಹೊರತು, ಎಲ್ಲರೂ ಮೋದಿ ಸರ್ಕಾರದಿಂದ ಸಂತೋಷವಾಗಿದ್ದಾರೆ ಎಂದು ಅರ್ಥವಲ್ಲ” ಎಂದರು.
ಇದನ್ನು ಓದಿದ್ದೀರಾ? ಪ್ರಶಾಂತ್ ಕಿಶೋರ್ ಚುನಾವಣಾ ಭವಿಷ್ಯ ‘ಹಾಸ್ಯಾಸ್ಪದ, ಬಿಜೆಪಿ ಪ್ರಾಯೋಜಿತ’ ಎಂದ ಕಾಂಗ್ರೆಸ್
ಬ್ಯ್ರಾಂಡ್ ಮೋದಿ ಪತನ
ಪ್ರಶಾಂತ್ ಕಿಶೋರ್ 2024ರ ಚುನಾವಣೆಯಲ್ಲಿ ಪಿಎಂ ಮೋದಿ ಶಕ್ತಿಯನ್ನು ಬ್ಯ್ರಾಂಡ್ ಮೋದಿ ಎಂದು ಕರೆದಿದ್ದು 2014 ರ ಚುನಾವಣೆಗೆ ಹೋಲಿಸಿದ್ದಾರೆ. “2024ರಲ್ಲಿ ಮತ ಹಾಕಲು ಬೇರೆ ಯಾರೂ ಇಲ್ಲ ಎಂಬ ಭಾವನೆ ಜನರಲ್ಲಿದೆ. ಬ್ರ್ಯಾಂಡ್ ಮೋದಿ ದುರ್ಬಲವಾಗುತ್ತಿದೆ. ಬ್ರಾಂಡ್ ಮೋದಿ ಶಕ್ತಿ ಕುಸಿಯುತ್ತಿದೆ. ರಾಮಮಂದಿರದ ಹೆಸರಿನಲ್ಲಿ ಬಿಜೆಪಿ ಒಂದು ಹೆಚ್ಚುವರಿ ಮತವನ್ನೂ ಪಡೆಯುತ್ತಿಲ್ಲ” ಎಂದು ಅಭಿಪ್ರಾಯಿಸಿದ್ದಾರೆ.