ಧರ್ಮಸ್ಥಳದ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣವನ್ನು ಎಸ್.ಐ.ಟಿ ತನಿಖೆಗೆ ವಹಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಗತಿಪರ ಸಂಘಟನೆಗಳ ಸದಸ್ಯರು ಭೇಟಿ ಮಾಡಿ ಮನವಿ ಮಾಡಿದರು.
ಮನವಿಗೆ ಉತ್ತರಿಸಿರುವ ಸಿಎಂ ಸಿದ್ದರಾಮಯ್ಯ, ಪ್ರಕರಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಕೆ.ಎಸ್.ವಿಮಲಾ, ಗೌರಮ್ಮ, ಲಕ್ಷ್ಮಿ ಪ್ರಭಾ ಬೆಳವಂಗಲ, ಡಾ: ಲೀಲಾ ಸಂಪಿಗೆ, ದೇವಿ, ರೂತ್ ಮನೋರಮಾ, ಅಕ್ಕೈ ಪದ್ಮಶಾಲಿ, ಅಖಿಲಾ, ಬಿ.ಎಂ. ಭಟ್ ,ಭೀಮನಗೌಡ, ಬಸಮ್ಮ, ಸುಮತಿ ಹಾಗೂ ಲಹರಿ ಸೇರಿದಂತೆ ನಾನಾ ಪ್ರಗತಿಪರ ಸಂಘಟನೆಗಳ 23 ಸದಸ್ಯರು ಇದ್ದರು.