ಪಂಚಾಯತಿ ಮಟ್ಟದಲ್ಲಿ ಸಾವಿರ ಹೊಸ ಮದ್ಯದಂಗಡಿಗಳಿಗೆ ಸರ್ಕಾರದಿಂದ ಪ್ರಸ್ತಾವ: ಸಾಣೇಹಳ್ಳಿ ಶ್ರೀ ವಿರೋಧ

Date:

Advertisements
  • ಪಂಚಾಯತಿ ಮಟ್ಟದಲ್ಲಿ ಹೊಸದಾಗಿ ಮದ್ಯದಂಗಡಿಗಳನ್ನು ತೆರೆಯಲು ಮುಂದಾಗಿರುವ ಪ್ರಸ್ತಾವನೆಗೆ ವಿರೋಧ
  • ಕುಡುಕರ ರಾಜ್ಯವನ್ನಾಗಿಸಿ ಅಧಿಕಾರವನ್ನು ಸ್ಥಿರಗೊಳಿಸಿಕೊಳ್ಳುವ ಸಂಚು ಇದರ ಹಿಂದಿದೆಯೇ?

ರಾಜ್ಯ ಸರ್ಕಾರವು ಪಂಚಾಯತಿ ಮಟ್ಟದಲ್ಲಿ ಹೊಸದಾಗಿ ಮದ್ಯದಂಗಡಿಗಳನ್ನು ತೆರೆಯಲು ಮುಂದಾಗಿರುವ ಪ್ರಸ್ತಾವನೆ ಸುದ್ದಿಗೆ ವಿರೋಧ ವ್ಯಕ್ತಪಡಿಸಿರುವ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಸಾವಿರ ಮದ್ಯದಂಗಡಿ ಯೋಜನೆ ಕೈಬಿಟ್ಟು ಆರೋಗ್ಯ ಭಾಗ್ಯ ಕರುಣಿಸುವ ಹೃದಯವಂತಿಕೆ ಮೆರೆಯಲಿ’ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಪತ್ರಿಕೆಗಳಲ್ಲಿ ಅಬಕಾರಿ ಇಲಾಖೆಯ ಮತ್ತು ಅಬಕಾರಿ ಮಂತ್ರಿಗಳ ಹೊಸ ಅಜೆಂಡಾ ನೋಡಿ ತುಂಬಾ ವೇದನೆಯಾಯ್ತು. ಇವರಿಗೆ ಯಾರು ಬುದ್ಧಿ ಹೇಳಬೇಕು ಎನ್ನುವುದೇ ತಿಳಿಯದಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಕರ್ನಾಟಕವನ್ನು ಕುಡುಕರ ರಾಜ್ಯವನ್ನಾಗಿಸಿ ತಮ್ಮ ಅಧಿಕಾರವನ್ನು ಸ್ಥಿರಗೊಳಿಸಿಕೊಳ್ಳುವ ಸಂಚು ಇದರ ಹಿಂದಿದೆಯೇ? ಈಗಾಗಲೇ ಕುಡುಕರ ಹಾವಳಿ ಹೆಚ್ಚಾಗಿ ಸಂಪತ್ತು, ಆರೋಗ್ಯ, ಮರ್ಯಾದೆ, ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಪಾರ್ಥೇನಿಯಂನಂತೆ ಬೆಳೆಯುತ್ತಿರುವುದನ್ನು ಜನಪ್ರತಿನಿಧಿಗಳು ಗಮನಿಸದಿರುವುದು ವಿಷಾದನೀಯ” ಎಂದು ಸಾಣೇಹಳ್ಳಿ ಸ್ವಾಮೀಜಿ ತಿಳಿಸಿದ್ದಾರೆ.

Advertisements

“ಜನರ ಆರೋಗ್ಯ, ಆರ್ಥಿಕ ಮತ್ತು ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕಾದ್ದು ಜನಪರ ನೇತಾರನ ಜವಾಬ್ದಾರಿ. ಕ್ಷಣಿಕ ಲಾಭಕ್ಕಾಗಿ ಎಲ್ಲ ಆದರ್ಶಗಳನ್ನು ಗಾಳಿಗೆ ತೂರುವ ನೇತಾರರು ಬುದ್ಧ, ಬಸವಣ್ಣ, ಟಿಪ್ಪು, ಗಾಂಧಿ ಮತ್ತಿತರ ದಾರ್ಶನಿಕರ ಚಿಂತನೆಗಳನ್ನು ಜಾರಿಗೆ ತರುವುದು ಯಾವಾಗ? ಅನುಭವಿಸುತ್ತಿರುವ ಕುಟುಂಬದವರು ಮೌನವಹಿಸದೆ ಮದ್ಯದ ದುಷ್ಪರಿಣಾಮ ಈಗಲಾದರೂ ಸರ್ಕಾರದ ಧೋರಣೆಯ ವಿರುದ್ಧ ಬಂಡೇಳುವ ಕಾರ್ಯವನ್ನು ಮಾಡಬೇಕು” ಎಂದು ತರಳಬಾಳು ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕರೆ ಕೊಟ್ಟಿದ್ದಾರೆ.

“ಸಮಾಜಮುಖಿ ಚಿಂತಕರು, ಸಾಮಾಜಿಕ ಕಳಕಳಿಯುಳ್ಳ ಸಂಘಟನೆಗಳು ಮುಖ್ಯವಾಗಿ ಮಠಾಧೀಶರು ಈಗಲಾದರೂ ಧ್ವನಿಯೆತ್ತಬೇಕು. ತಮ್ಮ ತಮ್ಮ ವಲಯದಲ್ಲಿ ಹೋರಾಟ ಮಾಡುವ ಸಂಕಲ್ಪ ಸ್ವೀಕರಿಸಬೇಕು. ಪ್ರವಾಹದ ವಿರುದ್ಧ ಈಜುವುದು ಸುಲಭವಲ್ಲವೆಂದು ನಮಗೂ ಗೊತ್ತು. ಹಾಗಂತ ಅದನ್ನು ಸ್ವಾಗತಿಸಬೇಕು ಎಂದಲ್ಲ. ದೊಡ್ಡ ಅನಾಹುತ ಸಂಭವಿಸುವ ಮೊದಲೇ ಸರ್ಕಾರ ಎಚ್ಚೆತ್ತು ಸಾವಿರ ಮದ್ಯದಂಗಡಿಯ ಯೋಜನೆಯನ್ನು ಬಿಟ್ಟು ಜನರ ಆರ್ಥಿಕ, ನೈತಿಕ ಮೌಲ್ಯಗಳನ್ನು ಕಾಪಾಡುವ, ಆರೋಗ್ಯ ಭಾಗ್ಯ ಕರುಣಿಸುವ ಹೃದಯವಂತಿಕೆ ಮೆರೆಯಲಿ” ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಹೇಳಿಕೆ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X