ಸ್ವಾತಂತ್ರ್ಯ ದಿನಾವರಣೆಯ ಹಿನ್ನೆಲೆ ಥಾಣೆ ಜಿಲ್ಲೆಯ ಕಲ್ಯಾಣ್ ಡೊಂಬಿವ್ಲಿ ನಗರಸಭೆಯು ಮಾಂಸದ ಅಂಗಡಿಗಳು ಮತ್ತು ಕಸಾಯಿಖಾನೆಗಳನ್ನು ಮುಚ್ಚುವಂತೆ ಆದೇಶಿಸಿದ್ದು, ಮಾಂಸ ನಿಷೇಧದ ವಿರುದ್ಧ ಕೋಳಿಗಳನ್ನು ಹಿಡಿದು ಪ್ರತಿಭಟನೆ ನಡೆಸಲಾಗಿದೆ. ನಗರಸಭೆಯ ಪ್ರಧಾನ ಕಚೇರಿಯ ಹೊರಗೆ ಶುಕ್ರವಾರ ಹಲವು ವಿರೋಧ ಪಕ್ಷಗಳು, ಮಾಂಸ ಮಾರಾಟಗಾರರ ಸಂಘಗಳು ಮತ್ತು ಸಮುದಾಯ ಗುಂಪುಗಳ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ಕಲ್ಯಾಣ್ ಪ್ರದೇಶದ ಕೆಡಿಎಂಸಿ ಮುಖ್ಯ ಕಚೇರಿಯ ಹೊರಗೆ ನಡೆದ ಪ್ರದರ್ಶನದಲ್ಲಿ ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಾರ್ಯಕರ್ತರೂ ಭಾಗವಹಿಸಿದ್ದರು.
ಇದನ್ನು ಓದಿದ್ದೀರಾ? ಸ್ವಾತಂತ್ರ್ಯದ ದಿನವೇ ಮಾಂಸದ ಅಂಗಡಿಗಳಿಗೆ ಇಲ್ಲ ಸ್ವಾತಂತ್ರ್ಯ!
ಆಗಸ್ಟ್ 14ರ ಮಧ್ಯರಾತ್ರಿಯಿಂದ ಆಗಸ್ಟ್ 15ರ ಮಧ್ಯರಾತ್ರಿಯವರೆಗೆ ಎಲ್ಲಾ ಕಸಾಯಿಖಾನೆಗಳು ಮತ್ತು ಪರವಾನಗಿ ಪಡೆದ ಮೇಕೆ, ಕುರಿ, ಕೋಳಿಗಳು ಮತ್ತು ಇತರೆ ಪ್ರಾಣಿಗಳ ಕಸಾಯಿಖಾನೆಗಳನ್ನು 24 ಗಂಟೆಗಳ ಕಾಲ ಮುಚ್ಚಬೇಕು ಎಂದು ಕೆಡಿಎಂಸಿ ಇತ್ತೀಚೆಗೆ ಆದೇಶ ಹೊರಡಿಸಿದೆ.
ಆದೇಶವನ್ನು ಉಲ್ಲಂಘಿಸಿದರೆ 1949ರ ಮಹಾರಾಷ್ಟ್ರ ಪುರಸಭೆ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಅದು ಎಚ್ಚರಿಸಿದೆ. ಹಾಗೆಯೇ ಸರ್ಕಾರಿ ಆದೇಶದ ಪ್ರಕಾರ ತಮ್ಮ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ಹೊಸ ನಿರ್ಧಾರವೇನಲ್ಲ ಎಂದು ಪುರಸಭೆ ಆಯುಕ್ತ ಅಭಿನವ್ ಗೋಯಲ್ ಸಮರ್ಥಿಸಿಕೊಂಡಿದ್ದಾರೆ.
ಈ ನಡುವೆ ಶುಕ್ರವಾರ ಮುಂಜಾನೆಯಿಂದಲೇ ಕಲ್ಯಾಣ್‌ನ ಶಿವಾಜಿ ಚೌಕ್ ಮತ್ತು ಶಂಕರರಾವ್ ಚೌಕ್ ನಡುವೆ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ ಅತುಲ್ ಝೆಂಡೆ ಹೇಳಿದರು. ಇನ್ನು ಮಾಂಸ ನಿಷೇಧ ವಿರೋಧಿಸಿ ಪ್ರತಿಭಟನೆ ಪ್ರಾರಂಭವಾಗುವ ಮುನ್ನವೇ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಹಲವಾರು ಪ್ರತಿಭಟನಾಕಾರರನ್ನು ಬಂಧಿಸಿದರು.
ಪ್ರತಿಭಟನೆಯಲ್ಲಿ ಭಾಗಿಯಾಗಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಥಾಣೆ ಜಿಲ್ಲಾಧ್ಯಕ್ಷ ಸಚಿನ್ ಪೋಟೆ, “ಹುಂಜ ಬೆಳಿಗ್ಗೆ ಜನರನ್ನು ಎಬ್ಬಿಸುತ್ತದೆ. ಇಂದು, ಆಡಳಿತವನ್ನು ಎಬ್ಬಿಸಲು ನಾವು ಕೋಳಿಗಳನ್ನು ತಂದಿದ್ದೇವೆ” ಎಂದು ಹೇಳಿದರು.
कल्याण डोंंबिवली पालिकेने घेतलेला मटण मांस विक्री बंदीचा निर्णय मागे न घेतल्याने विविध सामाजिक कार्यकर्त्यांनी पालिकेसमोर हातात कोंंबड्या आणून जोरदार निदर्शने केलीhttps://t.co/2jrmCKw8Ui#viralvideo #socialmedia #KDMC #egg #chicken pic.twitter.com/RmdiyqRXwU
— LoksattaLive (@LoksattaLive) August 15, 2025
ಇನ್ನು ಮಹಾರಾಷ್ಟ್ರದಲ್ಲಿ, ನಾಗ್ಪುರ, ನಾಸಿಕ್, ಮಾಲೆಗಾಂವ್ ಮತ್ತು ಛತ್ರಪತಿ ಸಂಭಾಜಿನಗರ ಪುರಸಭೆಗಳು ಸಹ ಇದೇ ರೀತಿಯ ಆದೇಶಗಳನ್ನು ಹೊರಡಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಸ್ವಾತಂತ್ರ್ಯ ಆಚರಣೆ ದಿನವೇ ವೈಯಕ್ತಿಕ ಸ್ವಾತಂತ್ರ್ಯದ ಎಷ್ಟಿದೆ ಎಂಬ ಪ್ರಶ್ನೆಯನ್ನು ಎತ್ತಿದೆ.
ವಿರೋಧ ಪಕ್ಷಗಳು ಸಹ ಈ ಕ್ರಮವನ್ನು ಟೀಕಿಸಿವೆ. ಆದರೆ ಸ್ವಾತಂತ್ರ್ಯ ದಿನದಂದು ಕಸಾಯಿಖಾನೆಗಳನ್ನು ಮುಚ್ಚುವ ನೀತಿಯನ್ನು ಮೊದಲು 1988 ಲ್ಲಿ ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತರಲಾಗಿದೆ ಎಂದು ಬಿಜೆಪಿ ವಾದಿಸಿದೆ. “ಜನರ ಆಹಾರ ಆಯ್ಕೆಗಳನ್ನು ನಿಯಂತ್ರಿಸುವ ಆಸಕ್ತಿಯನ್ನು ಸರ್ಕಾರ ಹೊಂದಿಲ್ಲ. ಕಸಾಯಿಖಾನೆ ಮುಚ್ಚುವ ವಿವಾದವು ಅನಗತ್ಯ” ಎಂದು ಮುಖ್ಯಮಂತ್ರಿ ಫಡ್ನವೀಸ್ ಪ್ರತಿಪಾದಿಸಿದ್ದಾರೆ.
