ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮುಖ್ಯಸ್ಥ ಪ್ರೇಮ್ ಸಿಂಗ್ ತಮಾಂಗ್ (ಪಿಎಸ್ ತಮಾಂಗ್) ಅವರು ಜೂನ್ 9ರಂದು ಎರಡನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬುಧವಾರ ಹೇಳಿದ್ದಾರೆ.
ತಮಾಂಗ್ ಮತ್ತು ಅವರ ಸಂಪುಟದ ಪ್ರಮಾಣ ವಚನ ಸಮಾರಂಭವು ರಾಜ್ಯ ರಾಜಧಾನಿ ಗ್ಯಾಂಗ್ಟಾಕ್‌ನ ಪಾಲ್ಜೋರ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಐದು ವರ್ಷಗಳ ಹಿಂದೆ ನಡೆದಂತೆ ಜೂನ್ 9ರಂದು ಪಾಲ್ಜೋರ್ ಸ್ಟೇಡಿಯಂನಲ್ಲಿ ನೂತನ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಪ್ರೇಮ್ ಸಿಂಗ್ ತಮಾಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ವಿಧಾನಸಭೆ ಫಲಿತಾಂಶ: ಅರುಣಾಚಲ ಪ್ರದೇಶದಲ್ಲಿ ಬಿಜೆಪಿ, ಸಿಕ್ಕಿಂನಲ್ಲಿ ಎಸ್ಕೆಎಂಗೆ ಗೆಲುವು
ಸಿಕ್ಕಿಂನ ವಿವಿಧ ಭಾಗಗಳಿಂದ ಜನರು ಬರುವ ನಿರೀಕ್ಷೆಯಿದೆ. ಜೊತೆಗೆ ಎಸ್‌ಕೆಎಂ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಪಿಎಸ್ ತಮಾಂಗ್ ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಮತ್ತು ಸಿಕ್ಕಿಂನ ಏಕೈಕ ಲೋಕಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಎಸ್‌ಕೆಎಂ ಗೆಲುವು ಸಾಧಿಸಿದೆ. ಪಕ್ಷದ ಮೇಲೆ ಮತ್ತೊಮ್ಮೆ ನಂಬಿಕೆ ಇಟ್ಟಿದ್ದಕ್ಕಾಗಿ ಜನರಿಗೆ ತಮಾಂಗ್ ಧನ್ಯವಾದ ಅರ್ಪಿಸಿದ್ದಾರೆ.
#WATCH | Gangtok: Sikkim CM Prem Singh Tamang met state Governor Lakshman Acharya earlier today.
Sikkim Krantikari Morcha (SKM) led by CM Prem Singh Tamang won 31 seats out of 32 Assembly seats. pic.twitter.com/9V7oclnL6b
— ANI (@ANI) June 3, 2024
ಲೋಕಸಭೆ ಚುನಾವಣೆಯ ಜೊತೆ ಏಕಕಾಲದಲ್ಲಿಯೇ ನಡೆದ ವಿಧಾನಸಭೆ ಚುನಾವಣೆಯಲ್ಲಿ 32 ಸ್ಥಾನಗಳ ಪೈಕಿ 31 ಸ್ಥಾನಗಳನ್ನು ಎಸ್‌ಕೆಎಂ ಗೆದ್ದುಕೊಂಡಿದೆ.
ಇನ್ನು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಸ್‌ಕೆಎಂ ಮುಖ್ಯಸ್ಥ, ಸಂಸದ ಇಂದ್ರ ಹ್ಯಾಂಗ್ ಸುಬ್ಬ ಎಸ್‌ಕೆಎಂ ಎನ್‌ಡಿಎ ಭಾಗವಾಗಲಿದೆ ಎಂದು ತಿಳಿಸಿದ್ದಾರೆ.