ಎಕ್ಸಿಟ್ ಪೋಲ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಎಕ್ಸಿಟ್ ಪೋಲ್‌ಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡಿಸಿರುವುದು ಎಂದು ಆರೋಪಿಸಿದೆ. ಇವೆಲ್ಲವೂ ಪ್ರಧಾನಿ ಮಾಸ್ಟರ್ ಮೈಂಡ್ ಮಾಡುತ್ತಿರುವ ಮಾನಸಿಕ ಆಟಗಳಾಗಿವೆ, ಆದರೆ ಫಲಿತಾಂಶ ವಿಭಿನ್ನವಾಗಿರುತ್ತದೆ ಎಂದು ಹೇಳಿದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತ ಪಡೆಯಲಿದೆ. ಪ್ರಧಾನಿ ಮೋದಿ ಅವರು ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳುತ್ತಾರೆ ಎಂದು ಶನಿವಾರದ ಹಲವಾರು ಎಕ್ಸಿಟ್ ಪೋಲ್‌ಗಳು ಹೇಳಿದೆ.
ಆಡಳಿತಾರೂಢ ಮೈತ್ರಿಕೂಟವು ತಮಿಳುನಾಡು ಮತ್ತು ಕೇರಳದಲ್ಲಿ ತನ್ನ ಖಾತೆಯನ್ನು ತೆರೆಯುತ್ತದೆ ಮತ್ತು ಕರ್ನಾಟಕದಲ್ಲೂ ಅಧಿಕ ಸ್ಥಾನ ಗೆಲ್ಲುತ್ತದೆ. ಬಿಹಾರ, ರಾಜಸ್ಥಾನ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ ಬಿಜೆಪಿ ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ ಎಂದು ಎಕ್ಸಿಟ್ ಪೋಲ್ ಹೇಳಿದೆ.
ಇದನ್ನು ಓದಿದ್ದೀರಾ? ‘ಎಕ್ಸಿಟ್ ಪೋಲ್’ಗಳು ಎಷ್ಟು ನಿಖರ? ನಿರಂತರವಾಗಿ ದಾರಿ ತಪ್ಪಿವೆ ಮತಗಟ್ಟೆ ಸಮೀಕ್ಷೆಗಳು!
ಎಕ್ಸಿಟ್ ಪೋಲ್‌ಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಜೂನ್ 4ರಂದು ನಿರ್ಗಮನ ಖಚಿತವಾಗಿರುವ ವ್ಯಕ್ತಿ ಈ ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನು ಆಯೋಜಿಸಿದ್ದಾರೆ. ಇಂಡಿಯಾ ಜನಬಂಧನ ಖಂಡಿತವಾಗಿಯೂ ಕನಿಷ್ಠ 295 ಸ್ಥಾನಗಳನ್ನು ಪಡೆಯುತ್ತದೆ, ಇದು ಸ್ಪಷ್ಟ ಮತ್ತು ನಿರ್ಣಾಯಕ ಬಹುಮತವಾಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
एक #ExitPoll ये भी है 👇👇
इस सर्वे पर आपकी क्या राय है ?
कमेंट में बताएं ✍️ pic.twitter.com/XSXj4EY17G— Ravish Kumar ᴾᵃʳᵒᵈʸ © (@SirRavishFC) June 1, 2024
“ಹೊರಹೋಗುವ ಪ್ರಧಾನ ಮಂತ್ರಿ ಈ ಮಧ್ಯೆ ಮೂರು ದಿನಗಳ ಕಾಲ ಆತ್ಮತೃಪ್ತಿಯಿಂದ ಉಳಿಯಬಹುದು. ಇವೆಲ್ಲವೂ ಅವರು ಮಾಸ್ಟರ್ ಮೈಂಡ್ ಮಾಡುತ್ತಿರುವ ಮಾನಸಿಕ ಆಟಗಳು. ಆದರೆ ನಿಜವಾದ ಫಲಿತಾಂಶಗಳು ತುಂಬಾ ವಿಭಿನ್ನವಾಗಿರುತ್ತದೆ” ಎಂದು ಎಕ್ಸ್ ಪೋಸ್ಟ್‌ನಲ್ಲಿ ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಇನ್ನು ಇಂಡಿಯಾ ಮೈತ್ರಿಕೂಟ 295ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಕ್ಷದ ಇಂಡಿಯಾ ಒಕ್ಕೂಟ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಎಕ್ಸಿಟ್ ಪೋಲ್ ಬಗ್ಗೆ ವಿಶ್ವಾಸವಿಲ್ಲ, ಕಾಂಗ್ರೆಸ್ ಡಬ್ಬಲ್ ಡಿಜಿಟ್ ದಾಟುತ್ತೆ: ಡಿ ಕೆ ಶಿವಕುಮಾರ್
ಎಕ್ಸಿಟ್ ಪೋಲ್ ನಂಬಬಹುದೇ?
2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಪ್ರಧಾನಿ ಮೋದಿ ಅವರು ಅಧಿಕಾರಕ್ಕೆರಿದಾಗಿನಿಂದ ಇಲ್ಲಿಯವರೆಗೂ ನಡೆದಿರುವ ಬಹುತೇಕ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗಳ ಚುನಾವಣೆ ಪೂರ್ವ ಸಮೀಕ್ಷೆ ಮತ್ತು ಮತಗಟ್ಟೆ ಸಮೀಕ್ಷೆ ನಡೆಸಿದ ಕೆಲವು ಗೋದಿ ಮೀಡಿಯಾಗಳು ಹಾಗೂ ಏಜೆನ್ಸಿಗಳು ಬಿಜೆಪಿಯೇ ಗೆಲುವು ಸಾಧಿಸುತ್ತೆ ಎಂದು ಹೇಳಿದ್ದವು.
ಇದನ್ನೇ ಇಟ್ಟುಕೊಂಡು ಗೋದಿ ಮೀಡಿಯಾಗಳು ಬೆಳಿಗ್ಗೆಯಿಂದ ರಾತ್ರಿಯವರೆಗೂ ವಿಜೃಂಭಿಸಿದ್ದವು. ಆದರೆ, ಫಲಿತಾಂಶದ ದಿನ ಗೋದಿ ಮೀಡಿಯಾಗಳು ನೀಡಿದ್ದ ಅಂಕಿಅಂಶಗಳು ಸಂಪೂರ್ಣವಾಗಿ ವಿಫಲವಾಗಿದ್ದವು.
ಎಕ್ಸಿಟ್ ಪೋಲ್ ಎಂಬುದು ಒಂದು ಊಹೆ ಅಷ್ಟೆ. ಊಹಿಸಿದುದೆಲ್ಲ ನಿಜವಾಗುವುದಿಲ್ಲ. ಕರ್ನಾಟಕದ ವಿಧಾನ ಸಭಾ ಚುನಾವಣೆಯ ಫಲಿತಾಂಶವೆ ಇದಕ್ಕೊಂದು ಉದಾಹರಣೆ.
ಒಂದು ವರ್ಷದ ಹಿಂದೆ ನಡೆದ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಆಡಳಿತ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು. ಚುನಾವಣಾ ಪೂರ್ವದಲ್ಲಿ ಹೆಚ್ಚಿನ ಎಲ್ಲ ಎಕ್ಸಿಟ್ ಪೋಲ್ ಗಳು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿತ್ತು.
ಆದುದಾದರು ಎನು ? ಬಿಜೆಪಿ ಸೋತಿತು . ಕಾಂಗ್ರೆಸ್ ಗೆದ್ದಿತು . ಎಕ್ಸಿಟ್ ಪೋಲ್ ಹುಸಿಯಾಯಿತು !