ಪಂಜಾಬ್‌ನಲ್ಲಿ ನಾಲ್ಕು ಪ್ರಮುಖ ರಾಜಕೀಯ ಪಕ್ಷಗಳು – ಎಎಪಿ, ಬಿಜೆಪಿ, ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ಎಲ್ಲ ಪಕ್ಷಗಳು ಘೋಷಿಸಿರುವ ಒಟ್ಟು 52 ಅಭ್ಯರ್ಥಿಗಳಲ್ಲಿ 15 ಮಂದಿ ಪಕ್ಷಾಂತರಿಗಳು ಎಂಬುದು ಗಮನಾರ್ಹ. ಇವರಲ್ಲಿ, 7 ಮಂದಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಮತ್ತು ಎಎಪಿಯಿಂದ ತಲಾ ಮೂವರು ಮತ್ತು ಎಸ್‌ಎಡಿಯಿಂದ ಒಬ್ಬರು ಸ್ಪರ್ಧಿಸಿದ್ದಾರೆ. ಅದರಲ್ಲು, ಇವರಲ್ಲಿ ಬಹುತೇಕ ಅಭ್ಯರ್ಥಿಗಳು ಕಾಂಗ್ರೆಸ್ ತೊರೆದವರಾಗಿದ್ದಾರೆ.
“ಬಿಜೆಪಿ ಮತ್ತು ಎಎಪಿ – ಎರಡೂ ಪಕ್ಷಗಳು ಪ್ರಬಲ ಅಭ್ಯರ್ಥಿಗಳ ಕೊರತೆ ಎದುರಿಸಿದ್ದು, ಪಕ್ಷಾಂತರಿಗಳನ್ನು ಕಣಕ್ಕಿಳಿಸಿವೆ. ಜಲಂಧರ್ ಕ್ಷೇತ್ರದಲ್ಲಿ ಎಲ್ಲ ಪಕ್ಷಗಳು ಪಕ್ಷಾಂತರಿಗಳನ್ನೇ ಕಣಕ್ಕಿಳಿಸಿವೆ. ಅಲ್ಲದೆ, ಬಿಜೆಪಿಯು ಎಸ್‌ಎಡಿ ಜೊತೆ ಮೈತ್ರಿ ಮಾಡಿಕೊಂಡು ಮೂರು ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿತ್ತು. ಆದರೆ, ಮೈತ್ರಿ ಮುರಿದಿರುವ ಪರಿಣಾಮ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆಗಳಿದಿದೆ. ಅದಕ್ಕೆ ಅಭ್ಯರ್ಥಿಗಳ ಅವಶ್ಯಕತೆ ಇದೆ. ಹೀಗಾಗಿ, ಪಕ್ಷಾಂತರಿಗಳನ್ನು ಕಣಕ್ಕಿಳಿಸುತ್ತಿದೆ” ಎಂದು ರಾಜಕೀಯ ವಿಶ್ಲೇಷಕ ಪ್ರೊಫೆಸರ್ ಕಲದೀಪ್ ಸಿಂಗ್ ಹೇಳಿದ್ದಾರೆ.
ಬಿಜೆಪಿಯಿಂದ ಕಣಕ್ಕಿಳಿದಿರುವ ಪಕ್ಷಾಂತರಿಗಳಲ್ಲಿ ಪಟಿಯಾಲದ ಹಾಲಿ ಸಂಸದೆ ಪ್ರಣೀತ್ ಕೌರ್ ಮತ್ತು ಲೂಧಿಯಾನದ ಸಂಸದ ರವನೀತ್ ಸಿಂಗ್ ಬಿಟ್ಟು ಸೇರಿದ್ದಾರೆ. ಈ ಇಬ್ಬರೂ, ಕಳೆದ ಮಾರ್ಚ್‌ನಲ್ಲಿ ಕಾಂಗ್ರೆಸ್ ತೊರೆದು, ಬಿಜೆಪಿ ಸೇಇದ್ದರು. ಜಲಂಧರ್‌ನಲ್ಲಿ ಸುಶೀಲ್ ಕುಮಾರ್ ರಿಂಕು ಮತ್ತು ಫಿರೋಜ್‌ಪುರನಲ್ಲಿ ಮಾಜಿ ಸಚಿವ ರಾಣಾ ಗುರ್ಮಿತ್ ಸಿಂಗ್ ಸೋಧಿ ಎಎಪಿಯಿಂದ ಸ್ಪರ್ಧಿಸಿದ್ದಾರೆ. ಇವರೂ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದರು.
ಪ್ರಣೀತ್ ಕೌರ್ ಅವರು ಬಿಜೆಪಿ ಸೇರುವ ಮುನ್ನ, ಅವರ ಅವರ ಪತಿ, ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಕಾಂಗ್ರೆಸ್ ಅನಧಿಕೃತವಾಗಿ ಮುಖ್ಯಮಂತ್ರಿ ಸ್ಥಾನದಿಂದ ಕಳಗಿಳಿಸಿತ್ತು. ಬಳಿಕ, ಕಾಂಗ್ರೆಸ್ ತೊರೆದ ಅವರು 2022ರ ಸೆಪ್ಟೆಂಬರ್‌ನಲ್ಲಿ ಬಿಜೆಪಿ ಸೇರಿದ್ದರು. ಇದೀಗ, ಕೌರ್ ಕೂಡ ಬಿಜೆಪಿ ಸೇರಿದ್ದಾರೆ.
ಇನ್ನು, 2022ರ ಜನವರಿಯಲ್ಲಿ ಬಿಜೆಪಿಗೆ ಸೇರಿದ್ದ ಎಸ್‌ಎಡಿ ಮಾಜಿ ಶಾಸಕ ಮಂಜಿತ್ ಸಿಂಗ್ ಮನ್ನಾ ಮಿಯಾನ್‌ವಿಂಡ್ ಅವರನ್ನು ಖದೂರ್ ಸಾಹಿಬ್‌ನಿಂದ ಬಿಜೆಪಿ ಕಣಕ್ಕಿಳಿಸಿದೆ.