ಗಾಝಾದಲ್ಲಿ ಇಸ್ರೇಲ್ ನಿರಂತರ ಬಾಂಬ್ ಸುರಿಯುತ್ತಿದ್ದು, ಅಮಾಯಕ ನಾಗರಿಕರು ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಸ್ರೇಲ್‌ಗೆ ಕೊನೆಯ ಎಚ್ಚರಿಕೆ ನೀಡಿರುವ ‘ಹಮಾಸ್’, ಗಾಝಾದ ಅಮಾಯಕರ ಮೇಲೆ ಬಾಂಬ್ ಸುರಿದರೆ ಇಸ್ರೇಲಿ ಒತ್ತೆಯಾಳುಗಳನ್ನು ಗಲ್ಲಿಗೇರಿಸಿ ಹತ್ಯೆ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಹಮಾಸ್‌ನ ಕಸ್ಸಾಮ್ ಬ್ರಿಗೇಡ್‌ನ ವಕ್ತಾರ ಅಬೂ ಒಬೈದಾ ಆಡಿಯೋ ಬಿಡುಗಡೆಗೊಳಿಸಿರುವುದಾಗಿ ‘ಅಲ್-ಜಝೀರಾ’ ವರದಿ ಮಾಡಿದೆ.
ಇಸ್ರೇಲ್ ಗಾಝಾದ ಮೇಲೆ ಬಾಂಬ್ ದಾಳಿ ಮುಂದುವರಿಸಿ, ನಾಗರಿಕರನ್ನು ಕೊಲ್ಲುವುದನ್ನು ಮುಂದುವರಿಸಿದರೆ ವಶದಲ್ಲಿರುವ ಇಸ್ರೇಲಿ ಬಂಧಿತರನ್ನು ಗಲ್ಲಿಗೇರಿಸುವುದಾಗಿ ಹಮಾಸ್‌ನ ಕಸ್ಸಾಮ್ ಬ್ರಿಗೇಡ್ ಎಚ್ಚರಿಕೆ ನೀಡಿದೆ.
“My children were next to me, [then] I didn’t hear a sound coming from them.”
As Israeli air attacks kill hundreds of Palestinians in the besieged Gaza Strip, including many children, civilians recount harrowing experiences ⤵️ pic.twitter.com/XWr2KgWCju
— Al Jazeera English (@AJEnglish) October 9, 2023
“ಇದು ನಮ್ಮ ಪ್ರಮುಖ ಘೋಷಣೆ. ನಿಮ್ಮ ಒಂದೊಂದು ಬಾಂಬ್‌ಗಳು ಗಾಝಾದ ಮೇಲೆ ಬಿದ್ದರೆ, ನಮ್ಮ ವಶದಲ್ಲಿರುವ ಇಸ್ರೇಲಿ ಬಂಧಿತರನ್ನು ಒಬ್ಬೊಬ್ಬರನ್ನಾಗಿ ಗಲ್ಲಿಗೆ ಏರಿಸುತ್ತೇವೆ. ನೀವು ಅಮಾಯಕರ ಮೇಲೆ ಬಾಂಬ್ ಹಾಕುವುದನ್ನು ನಿಲ್ಲಿಸದೇ ಇದ್ದಲ್ಲಿ ನಾವು ಅದನ್ನು ಮಾಡಬೇಕಾದ ಅನಿವಾರ್ಯತೆ ನೀವು ಸೃಷ್ಟಿ ಮಾಡಬೇಡಿ” ಎಂದು ಹಮಾಸ್‌ನ ಕಸ್ಸಾಮ್ ಬ್ರಿಗೇಡ್‌ಗಳ ವಕ್ತಾರ ಅಬೂ ಒಬೈದಾ ಹೇಳಿರುವುದಾಗಿ ವರದಿ ಮಾಡಿದೆ.
“ನಾವು ಈ ಬಲವಂತದ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಬೇಡಿ. ನಿಮ್ಮ ಬಾಂಬ್ ಬಿದ್ದಂತೆ ನಾವು ಒತ್ತೆಯಾಳುಗಳನ್ನು ಗಲ್ಲಿಗೇರಿಸುತ್ತೇವೆ. ಅದರ ವಿಡಿಯೋವನ್ನು ಕೂಡ ಪ್ರಸಾರ ಮಾಡಬೇಕಾದ ಅನಿವಾರ್ಯತೆ ಸೃಷ್ಟಿ ಮಾಡಬೇಡಿ. ಇದು ನಿಮಗೆ ಕೊನೆಯ ಎಚ್ಚರಿಕೆ. ನಾವು ಆ ರೀತಿ ಮಾಡಿದರೆ ಅದಕ್ಕೆ ಇಸ್ರೇಲಿ ನಾಯಕರೇ ಜವಾಬ್ದಾರಿಯಾಗುತ್ತಾರೆ” ಎಂದು ಹಮಾಸ್ ತಿಳಿಸಿರುವುದಾಗಿ ಜಝೀರಾ ವರದಿ ಮಾಡಿದೆ.
Al Jazeera’s @YoumnaElSayed17 was reporting on the destruction caused by Israeli air strikes on the Al Yarmouk neighbourhood of Gaza when more air attacks hit close by ⤵️ pic.twitter.com/tsBXSW6Dqm
— Al Jazeera English (@AJEnglish) October 9, 2023
100ಕ್ಕೂ ಹೆಚ್ಚು ಜನರನ್ನು ಹಮಾಸ್ ತನ್ನ ವಶದಲ್ಲಿಟ್ಟುಕೊಂಡಿದ್ದು, ಅವರೆಲ್ಲರನ್ನೂ ಗಾಝಾದ ಯಾವುದೋ ಪ್ರದೇಶಕ್ಕೆ ಕರೆದೊಯ್ದಿರುವುದಾಗಿ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಎಂದು ಇಸ್ರೇಲ್‌ನ ವಿದೇಶಾಂಗ ಸಚಿವ ಎಲಿ ಕೊಹೆನ್ ಹೇಳಿದ್ದಾರೆ.
ಹಮಾಸ್ ದಾಳಿಯಲ್ಲಿ 700ಕ್ಕೂ ಹೆಚ್ಚು ಇಸ್ರೇಲಿ ನಾಗರಿಕರು ಸಾವನ್ನಪ್ಪಿದ್ದರೆ, ಇಸ್ರೇಲ್ ಗಾಝಾದ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿರವುದರಿಂದ 500ಕ್ಕೂ ಅಧಿಕ ಪ್ಯಾಲೆಸ್ತೀನಿಯರು ಮೃತಪಟ್ಟಿರುವುದಾಗಿ ವರದಿಯಾಗಿದೆ.