ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಸಂದರ್ಶನ ನಡೆಸಿದ್ದು, ಅದರ ಸಂಪೂರ್ಣ ವಿಡಿಯೋವನ್ನು ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಬುಧವಾರ ಬಿಡುಗಡೆಗೊಳಿಸಿದ್ದಾರೆ.
ಅಕ್ಟೋಬರ್ 14ರಂದು ಈ ಮಾತುಕತೆ ನಡೆಸಿರುವುದಾಗಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.
ಸಂದರ್ಶನದ ವೇಳೆ ಪುಲ್ವಾಮಾ ದಾಳಿ, ಅದಾನಿ ಹಗರಣ, ಮಣಿಪುರ ಹಿಂಸಾಚಾರ, ಜಾತಿ ಜನಗಣತಿ, ಇಸ್ರೇಲ್-ಹಮಾಸ್ ಸಂಘರ್ಷ, ದೇಶದ ಗೋದಿ ಮಾಧ್ಯಮಗಳು, ರಾಜಕೀಯ ಘಟನೆಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
क्या ये संवाद ED-CBI की भाग दौड़ बढ़ा देगा?
पुलवामा, किसान आंदोलन और अग्निवीर जैसे महत्वपूर्ण मुद्दों पर राज्यपाल, पूर्व सांसद और किसान नेता, सत्यपाल मलिक जी के साथ दिलचस्प चर्चा!
पूरा वीडियो मेरे यूट्यूब चैनल पर देखिए। pic.twitter.com/tIGkXDRjzD
— Rahul Gandhi (@RahulGandhi) October 25, 2023
ಈ ಸಂದರ್ಶನದಲ್ಲಿ 2019ರಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯವನ್ನು ಮತ್ತೆ ಬಿಚ್ಚಿಟ್ಟಿರುವ ಸತ್ಯಪಾಲ್ ಮಲಿಕ್, ಸರ್ಕಾರದ ವ್ಯವಸ್ಥಿತ ವೈಫಲ್ಯವು 40 ಸಿಆರ್‌ಪಿಎಫ್ ಸೈನಿಕರ ಸಾವಿಗೆ ಕಾರಣವಾಯಿತು ಎಂದು ಹೇಳಿದರು.
ಘಟನೆಯ ಬಗ್ಗೆ ಮೆಲುಕು ಹಾಕಿದ ಅವರು, ‘ಪುಲ್ವಾಮಾ ಘಟನೆ ಏಕೆ ಸಂಭವಿಸಿತು? ಅವರು ಐದು ವಿಮಾನಗಳನ್ನು ಕೇಳಿದ್ದರು. ನನ್ನನ್ನು ಕೇಳಿದ್ದರೆ, ನಾನು ಅದನ್ನು ತಕ್ಷಣವೇ ಕೊಡುತ್ತಿದ್ದೆ. ಹಿಮದಲ್ಲಿ ಸಿಲುಕಿದ ವಿದ್ಯಾರ್ಥಿಗಳಿಗೆ ನಾನು ವಿಮಾನವನ್ನು ಒದಗಿಸಿದ್ದೆ. ದೆಹಲಿಯಲ್ಲಿ ವಿಮಾನವನ್ನು ಬಾಡಿಗೆಗೆ ಪಡೆಯುವುದು ಸುಲಭ. ಆದರೆ ಅವರ ಅರ್ಜಿಯು ಗೃಹ ಸಚಿವಾಲಯದಲ್ಲಿ ನಾಲ್ಕು ತಿಂಗಳಿನಿಂದ ಬಿದ್ದಿತ್ತು. ತದನಂತರ ಅದನ್ನು ತಿರಸ್ಕರಿಸಲಾಯಿತು. ನಂತರ ಸಿಆರ್‌ಪಿಎಫ್ ಸಿಬ್ಬಂದಿ ಅಸುರಕ್ಷಿತ ಎಂದು ತಿಳಿದ ರಸ್ತೆಯನ್ನು ಹಿಡಿದರು’ ಎಂದು ಮಲಿಕ್ ಹೇಳಿದರು.
ಪುಲ್ವಾಮಾ ಘಟನೆಯಲ್ಲಿ ಉಂಟಾದ ಭದ್ರತಾ ಲೋಪಗಳನ್ನು ತಿಳಿಸಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಮೌನವಾಗಿರಲು ಹೇಳಿದ್ದರು ಎಂದು ಅವರು ಹೇಳಿದರು.
‘ಪುಲ್ವಾಮಾ ಘಟನೆ ನಡೆದಾಗ ನಾನು ಪ್ರಧಾನಿ ಮೋದಿಯವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಸಂಜೆ 5-6 ಗಂಟೆ ಸುಮಾರಿಗೆ ಅವರು ನನಗೆ ಮತ್ತೆ ಕರೆ ಮಾಡಿದರು. ಇಷ್ಟೊಂದು ಸಿಆರ್‌ಪಿಎಫ್ ಸಿಬ್ಬಂದಿ ಸಾವಿಗೀಡಾಗಲು ನಮ್ಮ ತಪ್ಪೇ ಕಾರಣ ಎಂದು ಹೇಳಿದ್ದೆ. ಇದನ್ನು ಎಲ್ಲಿಯೂ ಹೇಳಬೇಡಿ ಎಂದು ಕೇಳಿಕೊಂಡರು. ಆಗ ನನ್ನ ಸಹಪಾಠಿಯಾಗಿದ್ದ ಎನ್‌ಎಸ್‌ಎ ಅಜಿತ್ ದೋವಲ್ ಕರೆ ಮಾಡಿ ಈ ಬಗ್ಗೆ ಎಲ್ಲಿಯೂ ಹೇಳಬೇಡಿ ಎಂದು ಕೇಳಿಕೊಂಡರು. ಅಷ್ಟೊತ್ತಿಗಾಗಲೇ ಎರಡು ಚಾನೆಲ್‌ಗಳಿಗೆ ಹೇಳಿದ್ದೆ. ನಂತರ, ನನ್ನ ಹೇಳಿಕೆಗಳು ತನಿಖೆಯ ಮೇಲೆ ಪರಿಣಾಮ ಬೀರಬಹುದು ಎಂದು ನಾನು ಭಾವಿಸಿದೆ, ಆದರೆ ಯಾವುದೇ ತನಿಖೆ ಇರಲಿಲ್ಲ. ಅದನ್ನು ಚುನಾವಣೆ ಉದ್ದೇಶಕ್ಕೆ ಬಳಸಿಕೊಂಡರು. ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಪುಲ್ವಾಮಾ ಘಟನೆಯನ್ನು ಬಳಸಿಕೊಂಡರು,” ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲರು ಹೇಳಿದರು.
Rahul Gandhi revealed a very important thing from the day the Pulwama attack happened.
He said, I was locked in the room at the airport when martyrs’ bodies were arriving, I had to fight to get out of the room. The whole set-up was made like an event for Modi.
Satyapal Malik… pic.twitter.com/6lGEKif79z
— Shantanu (@shaandelhite) October 25, 2023
ಮಣಿಪುರ ವಿಷಯದ ಕುರಿತು ಮಾತನಾಡಿದ ಮಲಿಕ್, ಪರಿಸ್ಥಿತಿಯು ಸಾಮಾನ್ಯವಾಗಿದೆ ಸರ್ಕಾರದ ವೈಫಲ್ಯ ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ಮತ್ತು ನಂತರದ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಅವರು ಆರೋಪಿಸಿದರು. ಆದರೆ ಇದು ನಡೆದು ಕೇವಲ ಆರು ತಿಂಗಳಾಗಿದೆ. ನಾನು ಲಿಖಿತವಾಗಿ ಬೇಕಾದರೆ ಬರೆದು ಕೊಡುತ್ತೇನೆ, ಅವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರು ಹೇಳಿದರು.
ಇದೇ ವೇಳೆ ಪುಲ್ವಾಮಾ ದಾಳಿಯ ವೇಳೆ ತಮಗಾದ ಅನುಭವ ಬಿಚ್ಚಿಟ್ಟ ರಾಹುಲ್ ಗಾಂಧಿ, ಹುತಾತ್ಮರಿಗೆ ಗೌರವ ಸಲ್ಲಿಸಲು ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಆದರೆ ನನ್ನನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಲಾಯಿತು. ಅಲ್ಲೊಂದು ಸಮಾರಂಭ ಇದ್ದಂತೆ ಕಂಡಿತು. ಪ್ರಧಾನ ಪ್ರಧಾನಿ ಮೋದಿ ಅಲ್ಲಿದ್ದರು. ಕೊಠಡಿಯಿಂದ ಹೊರಹೋಗಲು ನಾನು ಜಗಳ ಮಾಡಬೇಕಾಯಿತು,” ಎಂದು ರಾಹುಲ್ ನೆನಪಿಸಿಕೊಂಡರು.
मोदी और अडानी की लूट की कहानी देश के गांव गांव तक पहुंच गई है।
इनकी लूट अब ज़्यादा नहीं चलने वाली।#Adani #RahulGandhi pic.twitter.com/SeQPbmbpQx— RG Mission 2024 (@RGMission24) October 25, 2023
ವಿಡಿಯೋದಲ್ಲಿ ಉದ್ಯಮಿ ಗೌತಮ್ ಅದಾನಿ ಹಗರಣವನ್ನು ಉಲ್ಲೇಖಿಸಿದ ಮಲಿಕ್, ಕನಿಷ್ಠ ಬೆಂಬಲ ಬೆಲೆಯ ಭರವಸೆಯನ್ನು ಈಡೇರಿಸಲು ಸರ್ಕಾರ ವಿಫಲವಾಗಿದ್ದರಿಂದ ಕೃಷಿ ಉತ್ಪನ್ನದ ಬೆಲೆಗಳನ್ನು ತನ್ನ ಪ್ರಯೋಜನಕ್ಕೆ ತಕ್ಕಂತೆ ಅದಾನಿ ಮಾಡಿಕೊಂಡರು. ದೊಡ್ಡ ಗೋದಾಮುಗಳ ಸ್ಥಾಪನೆಯಿಂದ ಅದಾನಿ ಸಂಸ್ಥೆ ಬೆಳೆಗಳನ್ನು ಕಡಿಮೆ ಬೆಲೆಗೆ ಖರೀದಿಸಿ ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶ ಹೊಂದಿದೆ. ನೀವು ಬೇಕಾದರೆ ಗಮನಿಸಿ, ಮುಂದಿನ ವರ್ಷ ಬೆಲೆ ಏರಿಕೆಯಾದಾಗ ಅದಾನಿ ಕಂಪೆನಿಯವರು ಮಾರಾಟ ಮಾಡುತ್ತಾರೆ. ಎಂಎಸ್‌ಪಿ ಜಾರಿಯಾದಲ್ಲಿ ರೈತರು ಕಡಿಮೆ ಬೆಲೆಗೆ ಅವರಿಗೆ ಮಾರಾಟ ಮಾಡುವುದಿಲ್ಲ’ ಎಂದು ಹೇಳಿದರು.
ಸತ್ಯಪಾಲ್ ಮಲಿಕ್ ಜೊತೆಗೆ ನಡೆಸಿದ ಸುಮಾರು 29 ನಿಮಿಷಗಳ ಸಂಪೂರ್ಣ ಸಂದರ್ಶನವನ್ನು ರಾಹುಲ್ ಗಾಂಧಿಯವರು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ, ಸಂದರ್ಶನದ ಹಲವು ಭಾಗಗಳನ್ನು ತಮ್ಮ ತಮ್ಮ ಟ್ವಿಟ್ಟರ್ ಹಾಗೂ ಸೋಷಿಯಲ್ ಮೀಡಿಯಾದ ಪ್ರೊಫೈಲ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಸಂಪೂರ್ಣ ಸಂದರ್ಶನ ಇಲ್ಲಿದೆ. ವೀಕ್ಷಿಸಲು ಯೂಟ್ಯೂಬ್ ಲಿಂಕ್ ಮೇಲೆ ಕ್ಲಿಕ್ ಮಾಡಿ