ರಾಹುಲ್ ಗಾಂಧಿ ಅನರ್ಹತೆ | ನರೇಂದ್ರ ಮೋದಿ ಒಬ್ಬ ಹೇಡಿ: ಪ್ರಿಯಾಂಕ ವಾದ್ರಾ ಕಿಡಿ

Date:

Advertisements
  • ನಾವು ಪರಿವಾರವಾದಿಗಳಾದರೆ, ರಾಮ ಯಾರು?
  • ನನ್ನ ಅಣ್ಣನ ಪದವಿಗಳನ್ನೂ ಬಿಜೆಪಿ ನೋಡಿಲ್ಲ

ನಮ್ಮ ದೇಶದ ಪ್ರಧಾನಿ ಮಂತ್ರಿ, ನರೇಂದ್ರ ಮೋದಿ ಒಬ್ಬ ಹೇಡಿ. ಹೌದು, ಹೀಗೆ ಹೇಳಿದ್ದಕ್ಕಾಗಿ ಕೇಸ್ ಹಾಕಿಸಿ, ನನ್ನನ್ನೂ ಜೈಲಿನಲ್ಲಿರಿಸಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸವಾಲು ಹಾಕಿದ್ದಾರೆ.

“ನೆನಪಿಡಿ, ನಮ್ಮ ದೇಶದ ಬಹಳ ಹಿಂದಿನ ಪರಂಪರೆ, ಹಿಂದೂ ಧರ್ಮದ ಹಳೇ ಪರಂಪರೆಯೆಂದರೆ, ಅಹಂಕಾರಿ ರಾಜರಿಗೆ ಜನರೇ ಉತ್ತರ ಕೊಡುತ್ತಾರೆ. ಅಂತಹವರನ್ನು ಸೋಲಿಸುವ ಸಂಪ್ರದಾಯವಿದೆ” ಎಂದು ಅವರು ಕಿಡಿ ಕಾರಿದ್ದಾರೆ.

ರಾಹುಲ್ ಗಾಂಧಿ ಅವರ ಸಂಸದ ಸ್ಥಾನದ ಅನರ್ಹತೆ ವಿರೋಧಿಸಿ ಕಾಂಗ್ರೆಸ್, ದೆಹಲಿಯ ರಾಜ್‌ಘಾಟ್‌ನಲ್ಲಿ ಬೃಹತ್ ಸಂಕಲ್ಪ ಸತ್ಯಾಗ್ರಹ ಆಯೋಜಿಸಿದೆ. ಕಾಂಗ್ರೆಸ್‌ನ ಅಹೋರಾತ್ರಿ ಸತ್ಯಾಗ್ರಹದಲ್ಲಿ ಮಾತನಾಡಿರುವ ಪ್ರಿಯಾಂಕಾ, ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

Advertisements

“ನನ್ನ ಹುತಾತ್ಮ ತಂದೆಯನ್ನು ನೀವು ಲೋಕಸಭೆಯಲ್ಲಿ ಅವಮಾನ ಮಾಡಿದ್ದಿರಿ. ಅವರ ಪುತ್ರನನ್ನು ಮೀರ್ ಜಾಫರ್ ಎಂದು ಕರೆದಿರಿ. ನಿಮ್ಮ ಪಕ್ಷದ ಮುಖ್ಯಮಂತ್ರಿಯೊಬ್ಬ, ‘ರಾಹುಲ್ ಗಾಂಧಿಗೆ ಇವತ್ತಿಗೂ ತನ್ನ ತಂದೆ ಯಾರೆಂದು ಗೊತ್ತಿಲ್ಲ’ ಎನ್ನುವ ಮೂಲಕ ನನ್ನ ತಾಯಿಗೆ ಅವಮಾನಿಸಿದರು” ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

“ಗಾಂಧಿ ಪರಿವಾರ ನೆಹರು ಅವರ ಉಪನಾಮವನ್ನೇಕೆ ಬಳಸಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ನನ್ನ ಇಡೀ ಕುಟುಂಬವನ್ನು ಅವಮಾನಿಸಿದರು. ಆದರೆ, ಈವರೆಗೂ ಅವರ ಮೇಲೆ ಯಾವ ಕೇಸು ದಾಖಲಾಗಲಿಲ್ಲ. ಸಂಸತ್ತಿನಿಂದ ಅವರನ್ನು ಹೊರಗಟ್ಟಲಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.

“ಇಷ್ಟೆಲ್ಲಾ ಯಾಕೆ ನಡೆಯುತ್ತಿದೆ ಗೊತ್ತೇ? ಇಷ್ಟು ದಿನಗಳ ಕಾಲ ನಾವು ಮೌನವಾಗಿದ್ದೆವು. ನೀವು ಅಷ್ಟೆಲ್ಲಾ ಅಪಪ್ರಚಾರ, ಅವಮಾನ ಮಾಡಿದರೂ ನನ್ನ ಅಣ್ಣ ನಿಮಗೆ ಏನು ಹೇಳಲಿಲ್ಲ. ಬರೀ ಅಪ್ಪಿಕೊಂಡರು. ಸೈದ್ದಾಂತಿಕ ವ್ಯಾತ್ಯಾಸಗಳ ನಡುವೆಯೂ ರಾಹುಲ್ ದ್ವೇಷ ಹರಡಲಿಲ್ಲ” ಎಂದು ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ನಾವು ಪರಿವಾರವಾದಿಗಳು ಎನ್ನುತ್ತೀರಿ. ಹಾಗಾದರೆ ರಾಮ ಯಾರು? ಭಗವಾನ್ ರಾಮನನ್ನು ವನವಾಸಕ್ಕೆ ಕಳುಹಿಸಿದರು. ಅವರು ತಮ್ಮ ಕುಟುಂಬದ ಧರ್ಮವನ್ನು ಪಾಲಿಸಿದರು. ಅದಕ್ಕೆ ಅವರನ್ನು ಕುಟುಂಬವಾದಿ ಎಂದು ಹೇಳುತ್ತಾರೆಯೆ? ಪಾಂಡವರು ಕುಟುಂಬವಾದಿಗಳೆ? ದೇಶಕ್ಕಾಗಿ ಹೋರಾಡಿದ ಈ ಕುಟುಂಬಗಳನ್ನು ಕುಟುಂಬವಾದಿಗಳು ಎಂದು ಕರೆಯಬೇಕೆ? ನನ್ನ ಕುಟುಂಬದವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ ಎನ್ನುವ ವಿಷಯಕ್ಕೆ ನಾವು ನಾಚಿಕೆಪಡಬೇಕೇನು? ಈ ಧ್ವಜದಲ್ಲಿ ಅವರ ರಕ್ತವಿದೆ. ಈ ಮಣ್ಣಿನಲ್ಲಿ ಅವರ ರಕ್ತವಿದೆ. ಈ ದೇಶದ ಪ್ರಜಾಪ್ರಭುತ್ವಕ್ಕೆ ನನ್ನ ಕುಟುಂಬದವರು ರಕ್ತ ನೀಡಿದ್ದಾರೆ. ಆದರೆ, ನಮ್ಮನ್ನು ಬೆದರಿಸಿ, ಅವಹೇಳನ ಮಾಡಿ ಭಯಪಡಿಸಬಹುದು ಎಂದು ತಿಳಿದರೆ, ಅದು ನಿಮ್ಮ ಭ್ರಮೆಯಷ್ಟೆ” ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

“ನನ್ನ ಅಣ್ಣ ಜಗತ್ತಿನ ಎರಡು ಪ್ರತಿಷ್ಠಿತ ಮತ್ತು ವಿಶ್ವವಿಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ್ದಾನೆ. ನೀವು ಅವನ ಪದವಿಗಳನ್ನ ಸಹ ನೋಡಿಲ್ಲ. ಆದರೆ, ಮಾಧ್ಯಮಗಳ ಮೂಲಕ ಅವನನ್ನು ಪಪ್ಪು ಎಂದು ಬಿಂಬಿಸಿದಿರಿ. ನಿಮಗೆ ಆಮೇಲೆ ಗೊತ್ತಾಗಿದೆ ಅವನು ಪಪ್ಪು ಅಲ್ಲ, ಅವನ ಪರವಾಗಿ ಲಕ್ಷಾಂತರ ಮಂದಿ ನಿಂತಿದ್ದಾರೆ. ಅವನೊಂದಿಗೆ ನಡೆಯುತ್ತಾರೆ ಎಂಬುದು” ಎಂದು ಬಿಜೆಪಿಯನ್ನು ಕುಟುಕಿದ್ದಾರೆ.

“ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ ವ್ಯಕ್ತಿ ಕಳೆದ ವರ್ಷ ಕೇಸ್‌ಗೆ ತಡೆ ಹಿಡಿದಿದ್ದ ಎಂಬುದು ನಿಮಗೆ ಗೊತ್ತಿದೆಯೇ? ರಾಹುಲ್, ಅದಾನಿ ಪ್ರಕರಣದ ಬಗ್ಗೆ ಮಾತನಾಡಿದ ಬಳಿಕ ಹಳೆಯ ಪ್ರಕರಣ ಮತ್ತೆ ತೆರೆಯಲಾಯಿತು” ಎಂದು ಕಿಡಿಕಾರಿದ್ದಾರೆ.

“ಈ ದೇಶ ಪ್ರೀತಿಯಿಂದ ಮಾತನಾಡುತ್ತದೆ ಎನ್ನುವುದನ್ನು ನನ್ನ ಕುಟುಂಬ ನನಗೆ ಕಲಿಸಿದೆ. ಆದರೆ, ಇಂದಿನಿಂದ ಎಲ್ಲವೂ ಬದಲಾಗಲಿದೆ ಎಂದು ನನಗೆ ತಿಳಿದಿದೆ” ಎಂದಿದ್ದಾರೆ.

“ಈ ದೇಶದ ಮಾಧ್ಯಮಗಳ ಮೇಲೆ ಎಷ್ಟು ಒತ್ತಡವಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಪ್ರಜಾಪ್ರಭುತ್ವ ಅಪಾಯದಲ್ಲಿದ್ದಾಗಲಾದರೂ ಎದ್ದೇಳಿ. ಪ್ರತಿಪಕ್ಷದ ನಾಯಕನನ್ನು ಎಂಟು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಸರ್ಕಾರ ನಿರ್ಬಂಧಿಸಿದರೆ ಅದು ಅಪಾಯಕಾರಿ ನಡೆ” ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X