ದೆಹಲಿ ಚುನಾವಣೆಗೆ ಬಿಜೆಪಿ, ಎಎಪಿ, ಕಾಂಗ್ರೆಸ್ ಭರ್ಜರಿ ಪ್ರಚಾರವನ್ನು ನಡೆಸುತ್ತಿದೆ. ಈ ನಡುವೆ ಆಡಾಳಿತರೂಢ ಎಎಪಿ 11 ‘ಅಪ್ರಾಮಾಣಿಕ’ ನಾಯಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್‌ನಲ್ಲಿ ಲೋಕಸಭೆ ವಿಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ ಚಿತ್ರವೂ ಕೂಡಾ ಕಾಣಿಸಿಕೊಂಡಿದೆ.
ರಾಹುಲ್ ಗಾಂಧಿ ತನ್ನ ವಿರುದ್ಧವಾಗಿ ನೀಡಿರುವ ತಾನು ಯಾವುದೇ ಪ್ರತ್ಯುತ್ತರ ನೀಡುವುದಿಲ್ಲ ಎಂದು ಎಎಪಿ ಸಂಚಾಲಕ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ ಒಂದು ದಿನದ ಬಳಿಕ ರಾಹುಲ್ ಗಾಂಧಿ ಒಳಗೊಂಡ 11 ಅಪ್ರಾಮಾಣಿಕ ನಾಯಕರ ಈ ಪೋಸ್ಟರ್ ಅನ್ನು ಎಎಪಿ ಬಿಡುಗಡೆ ಮಾಡಿದೆ.
ಇದನ್ನು ಓದಿದ್ದೀರಾ? ದೆಹಲಿ ಚುನಾವಣೆ | ಚೀನೀ ಸಿಸಿಟಿವಿ ಕ್ಯಾಮೆರಾ ಬಳಕೆ, ಪಂಜಾಬ್ ಆಡಳಿತ ದುರುಪಯೋಗ: ಎಎಪಿ, ಬಿಜೆಪಿ ವಾಕ್ಸಮರ
ರಾಹುಲ್ ಗಾಂಧಿ ಮಾತ್ರವಲ್ಲದೆ ಪೋಸ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ನಾಯಕ ವಿರೇಂದ್ರ ಸಚ್‌ದೇವ, ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ, ವಿಜೇಂದರ್ ಗುಪ್ತಾ, ರಮೇಶ್ ಬಿಧುರಿ, ಕಾಂಗ್ರೆಸ್ ನಾಯಕ ಅಜಯ್ ಮಖೇನ್, ಸಂದೀಪ್ ದೀಕ್ಷಿತ್ ಚಿತ್ರಗಳು ಕೂಡಾ ಇದೆ.
ಕೇಜ್ರಿವಾಲ್ ಮತ್ತು ಪತ್ನಿ ಸುನೀತಾ ಕೇಜ್ರಿವಾಲ್ ಇರುವ ಚಿತ್ರದೊಂದಿಗೆ “ಕೇಜ್ರಿವಾಲ್ ಅವರ ಪ್ರಾಮಾಣಿಕತೆಯು ಈ ಅಪ್ರಾಮಾಣಿಕರಿಗೆ ತೊಂದರೆ ನೀಡಲಿದೆ” ಎಂದು ಬರೆಯಲಾಗಿದೆ.
एक अकेला पड़ेगा सब पर भारी 🔥 pic.twitter.com/5jkvWaDXt4
— AAP (@AamAadmiParty) January 25, 2025
ಈ ಬೆನ್ನಲ್ಲೇ ಎಎಪಿ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕೇಜ್ರಿವಾಲ್‌ಗೆ ಧೈರ್ಯವಿದ್ದರೆ, ಇಂಡಿಯಾ ಒಕ್ಕೂಟವನ್ನು ತೊರೆಯವುದಾಗಿ ಘೋಷಿಸಲಿ. ಕಾಂಗ್ರೆಸ್ 100 ಸಂಸದರೊಂದಿಗೆ ದೃಢವಾಗಿದೆ, ಎಲ್ಲಾ 7 ಸೀಟುಗಳನ್ನು ಬಿಜೆಪಿಗೆ ಕೊಟ್ಟವರು ಅರವಿಂದ್ ಕೇಜ್ರಿವಾಲ್” ಎಂದು ಕಾಂಗ್ರೆಸ್ ಅಭ್ಯರ್ಥಿ ಕಲ್ಕಾಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ಚುನಾವಣೆ ಪ್ರಚಾರದ ವೇಳೆ ಕೇಜ್ರಿವಾಲ್ ಕಾರಿನ ಮೇಲೆ ದಾಳಿ; ಬಿಜೆಪಿ ಗೂಂಡಾಗಳೆಂದ ಎಎಪಿ
“ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೈತ್ರಿಗಾಗಿ ನಮ್ಮೆಲ್ಲರ ಮುಂದೆ ಬೇಡುತ್ತಿದ್ದಿರಿ. ದೆಹಲಿಯಲ್ಲಿ 7 ಕ್ಷೇತ್ರಕ್ಕಾಗಿ ನಿಮ್ಮೊಂದಿಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ದೊಡ್ಡ ತಪ್ಪು ಮಾಡಿದೆ. ಕಾಂಗ್ರೆಸ್ ಇದರಿಂದಾಗಿ ದೊಡ್ಡ ನಷ್ಟವನ್ನು ಅನುಭವಿಸಬೇಕಾಯಿತು” ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್ ಇಂಡಿಯಾ ಒಕ್ಕೂಟದ ಭಾಗವಾಗಿ ಜೊತೆಯಾಗಿ ಸ್ಪರ್ಧಿಸಿತ್ತು. ಆದರೆ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಉಭಯ ಪಕ್ಷಗಳು ಮೈತ್ರಿ ಮಾಡಿಕೊಂಡಿಲ್ಲ. ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದೆ. ಇಂಡಿಯಾ ಒಕ್ಕೂಟದ ಕೆಲವು ಪಕ್ಷಗಳು ಎಎಪಿಗೆ ತನ್ನ ಬೆಂಬಲವನ್ನು ನೀಡಿದೆ.
