ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೆಂಪು ಗುಲಾಬಿ ಮತ್ತು ತ್ರಿವರ್ಣ ಧ್ವಜವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಸಂಸತ್ತಿನಲ್ಲಿ ವಿಪಕ್ಷಗಳು ಮತ್ತು ಬಿಜೆಪಿ ನಡುವೆ ಸಂಘರ್ಷ ನಡೆಯುತ್ತಿರುವ ನಡುವೆಯೇ ರಾಜನಾಥ್ ಸಿಂಗ್ ಅವರಿಗೆ ಈ ಉಡುಗೊರೆಯನ್ನು ನೀಡುವ ಮೂಲಕ ವಿಪಕ್ಷ ನಾಯಕರುಗಳು ವಿನೂತನವಾಗಿ ಪ್ರತಿಭಟಿಸಿದ್ದಾರೆ.
ಇದನ್ನು ಓದಿದ್ದೀರಾ? ದಾವಣಗೆರೆ | ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ಕೊಡುವುದಕ್ಕೆ ವಿಳಂಬ; ಹಸಿರು ಸೇನೆ ಪ್ರತಿಭಟನೆ
ಇನ್ನು ಈಗಾಗಲೇ ತಾರತಮ್ಯ ಮಾಡುವ ಆರೋಪದಲ್ಲಿ ಈ ಅಧಿವೇಶನದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಇಂಡಿಯಾ ಒಕ್ಕೂಟ ಮಂಡಿಸಿದೆ.
ಇದಕ್ಕೂ ಮುನ್ನ ಅದಾನಿ-ಮೋದಿ ಭಾಯಿ ಭಾಯಿ (ಅದಾನಿ ಮೋದಿ ಸಹೋದರರು) ಎಂಬ ಬ್ಯಾಗ್ ಹಿಡಿದು, ಟಿ ಶರ್ಟ್ ಧರಿಸಿ ಪ್ರತಿಭಟಿಸಿದ್ದ ಇಂಡಿಯಾ ಒಕ್ಕೂಟದ ನಾಯಕರು ಬುಧವಾರ ಮತ್ತೆ ವಿನೂತನ ಪ್ರತಿಭಟನೆ ನಡೆಸಿದರು.
ಇನ್ನು ಎಎನ್‌ಐ ಹಂಚಿಕೊಂಡ ವಿಡಿಯೋದಲ್ಲಿ ರಾಜನಾಥ್ ಸಿಂಗ್ ಅವರು ಕಾರಿನಿಂದ ಇಳಿದು ಸಂಸತ್ ಭವನದ ಮೆಟ್ಟಿಲುಗಳವರೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಈ ವೇಳೆ ಹಲವು ಕಾಂಗ್ರೆಸ್ ನಾಯಕರು ಗುಲಾಬಿ ಮತ್ತು ತ್ರಿವರ್ಣ ಧ್ವಜವನ್ನು ರಕ್ಷಣಾ ಸಚಿವರಿಗೆ ನೀಡುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು.
#WATCH | Delhi | In a unique protest in Parliament premises, Congress MP and LoP Lok Sabha, Rahul Gandhi gives a Rose flower and Tiranga to Defence Minister Rajnath Singh pic.twitter.com/9GlGIvh3Yz
— ANI (@ANI) December 11, 2024
ಇತರೆ ನಾಯಕರು ನೀಡಿದ ತ್ರಿವರ್ಣ ಧ್ವಜವನ್ನು ರಾಜನಾಥ್ ಸಿಂಗ್ ಪಡೆಯುವುದಿಲ್ಲ. ಈ ವೇಳೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮುಂದೆ ಹೋಗಿ ನಗು ಮುಖದೊಂದಿಗೆ ರಾಜನಾಥ್ ಸಿಂಗ್ ಅವರಿಗೆ ಗುಲಾಬಿ ಹೂವು ಮತ್ತು ತ್ರಿವರ್ಣ ಧ್ವಜ ನೀಡಿದ್ದಾರೆ. ಇದನ್ನು ಸ್ವೀಕರಿಸಿ ರಕ್ಷಣಾ ಸಚಿವರು ಸಂಸತ್ ಭವನಕ್ಕೆ ತೆರಳಿದ್ದಾರೆ.
ಇದನ್ನು ಓದಿದ್ದೀರಾ? ಶೀಘ್ರವೇ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ‘ಪಿಂಡದಾನ’ ಮಾಡುತ್ತಾರೆ: ಆಚಾರ್ಯ ಪ್ರಮೋದ್ ಕೃಷ್ಣಂ
ಇನ್ನು ರಾಹುಲ್ ಗಾಂಧಿ ಮಾತ್ರವಲ್ಲ ಪ್ರಿಯಾಂಕಾ ಗಾಂಧಿ ವಾದ್ರಾ, ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂನಂತಹ ಮಿತ್ರ ಪಕ್ಷಗಳ ಸಂಸದರು ಗುಲಾಬಿಗಳು ಮತ್ತು ಧ್ವಜಗಳೊಂದಿಗೆ ಬಿಜೆಪಿ ಸಂಸದರನ್ನು ಕಾಯುತ್ತಿದ್ದರು. ಇಂಡಿಯಾ ಒಕ್ಕೂಟದ ನಾಯಕರು ಹಲವು ದಿನಗಳಿಂದ ಅದಾನಿ ವಿಚಾರದಲ್ಲಿ ಸದನದಲ್ಲಿ ಚರ್ಚೆಗೆ ಆಗ್ರಹಿಸುತ್ತಿದ್ದಾರೆ.
