ರಾಯಚೂರು ಮತ್ತು ಯಾದಗಿರಿ ಜಿಲ್ಲೆಗೆ ಹೊಂದಿಕೊಂಡಿರುವ ರಾಯಚೂರು ಲೋಕಸಭಾ ಕ್ಷೇತ್ರವೂ ಎಸ್ ಟಿ ಮೀಸಲು ಕ್ಷೇತ್ರ. ರಾಯಚೂರು ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ, ಯಾದಗಿರಿ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದೆ. ರಾಯಚೂರು ಜಿಲ್ಲೆಯ ಎರಡು ತಾಲೂಕು ಮಸ್ಕಿ ಹಾಗೂ ಸಿಂಧನೂರು ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತವೆ.
2009ರಲ್ಲಿ ಯಾದಗಿರಿಯನ್ನು ಕರ್ನಾಟಕ ರಾಜ್ಯದ 30ನೇ ಹೊಸ ಜಿಲ್ಲೆಯಾಗಿ ಪ್ರಕಟಿಸಲಾಯಿತು. ಅಂತಿಮ ಯಾದಗಿರಿ ಜಿಲ್ಲೆಯಲ್ಲಿ ನಾಲ್ಕು ತಾಲ್ಲೂಕು ಸುರಪುರ, ಶಹಾಪುರ, ಗುರುಮಠಕಲ್ ಹಾಗೂ ಯಾದಗಿರಿ ಬರುತ್ತವೆ. ಗುರುಮಠಕಲ್ ಕಲ್ಬುರ್ಗಿ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. ಯಾದಗಿರಿ ಜಿಲ್ಲೆಯ ಕರ್ನಾಟಕದ ಎರಡನೇ ಅತಿ ಚಿಕ್ಕ ಜಿಲ್ಲೆಯಾಗಿದೆ.
ರಾಯಚೂರು- ಯಾದಗಿರಿ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 19,52,400 ಸಾವಿರಕ್ಕಿಂತ ಹೆಚ್ಚು ಮತದಾರರು ಇದ್ದಾರೆ. ವಿಧಾನ ಸಭಾವಾರು ಗಮನಿಸಿದರೆ ಯಾದಗಿರಿ ವಿಧಾನಸಭಾ ಕ್ಷೇತ್ರ ಒಟ್ಟು 268678, ಶಹಾಪುರ 238,979, ಸುರಪುರ 275,483, ದೇವದುರ್ಗ 233,492, ಮಾನ್ವಿ 233,867, ಲಿಂಗಸಗೂರು 255,628, ರಾಯಚೂರು ನಗರ 232,744, ಗ್ರಾಮೀಣ 229,071 ಮತದಾರರು ಇದ್ದಾರೆ.
1952ರಲ್ಲಿ ಲೋಕಸಭಾ ಕ್ಷೇತ್ರ ರಚನೆ ಆಗಿದ್ದು, 1957ರಲ್ಲಿ ಚುನಾವಣೆ ನಡೆದ್ದು ಜಿ.ಎಸ್. ಮೇಲುಕೋಟೆ ಲೋಕಸಭಾ ಸದಸ್ಯರಾಗಿ ಆಯ್ಕೆ ಆಗುತ್ತಾರೆ. 1999 /2004ರಲ್ಲಿ ಎರಡು ಬಾರಿ ವೆಂಕಟೇಶ್ ನಾಯಕ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಜಯಿಯಾದರು. 2009 ರಲ್ಲಿ ಎಸ್ ಫಕೀರಪ್ಪ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡಿ ಗೆದ್ದರು.
2014ರಲ್ಲಿ ಇಡೀ ದೇಶದಲ್ಲಿ ಮೋದಿ ಹವಾ ಇದ್ರೂ ರಾಯಚೂರಿನಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ ಬಿ.ವಿ.ನಾಯಕ ಲೋಕಸಭೆಗೆ ಆಯ್ಕೆ ಆಗುತ್ತಾರೆ. 2019ರಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಆಯ್ಕೆ ಆಗುತ್ತಾರೆ. 17 ಲೋಕಸಭಾ ಚುನಾವಣೆಯಲ್ಲಿ ರಾಯಚೂರು – ಯಾದಗಿರಿ ಲೋಕಸಭಾ ಕ್ಷೇತ್ರದಲ್ಲಿ ವೆಂಕಟೇಶ ನಾಯಕ ನಾಲ್ಕು ಬಾರಿ ಲೋಕಸಭೆ ಪ್ರವೇಶ ಮಾಡಿದ್ದಾರೆ. 17 ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ 13 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳೇ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು ಇದೆ. ಬಿಜೆಪಿ ಎರಡು ಬಾರಿ ಗೆದ್ದರೇ, ಸ್ವತಂತ್ರ ಪಕ್ಷದ ಅಭ್ಯರ್ಥಿ ಒಂದು ಬಾರಿ, ಜನತಾದಳ ಒಂದು ಬಾರಿ ಗೆಲುವು ಸಾಧಿಸಿದೆ.
8 ವಿಧಾನಸಭಾ ಕ್ಷೇತ್ರದಲ್ಲಿ 4 ಎಸ್ ಟಿ ಮೀಸಲು ಕ್ಷೇತ್ರಗಳು ಇದ್ರೆ, 3 ಸಾಮಾನ್ಯ ಕ್ಷೇತ್ರಗಳು ಇವೆ. ಒಂದು ಮಾತ್ರ ಎಸ್ ಸಿ ಮೀಸಲು ಕ್ಷೇತ್ರವಾಗಿದೆ. ಹೀಗಾಗಿ ನಾಯಕ ಸಮುದಾಯದ ನಾಯಕರೇ ಈ ಕ್ಷೇತ್ರದ ಟಿಕೆಟ್ ಗಾಗಿ ಪೈಪೋಟಿಗೆ ಇಳಿಯುತ್ತಾರೆ.
2018 ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 4 ಕಡೆ ವಿಜಯ ಪತಾಕೆಯನ್ನು ಹಾರಿಸಿತು. ಮಾನ್ವಿ ಕ್ಷೇತ್ರದ ಜೆಡಿಎಸ್ ಗೆಲುವು ಆಗಿತ್ತು. ಮೂರು ಕಡೆ ಕಾಂಗ್ರೆಸ್ ಗೆದ್ದು ಬಿಗಿದಿದೆ. 18ರ ಸಮಯದಲ್ಲಿ ಮೋದಿ ಹವಾದಿಂದ ರಾಯಚೂರು ಲೋಕಸಭಾ ಅಭ್ಯರ್ಥಿಯಾಗಿ ರಾಜಾ ಅಮರೇಶ್ವರ ನಾಯಕ ಅವರು ಆಯ್ಕೆಯಾಗಿದ್ದರು.
ರಾಯಚೂರು ನಗರ : ಶಿವರಾಜ್ ಪಾಟೀಲ್ (ಬಿಜೆಪಿ)
ರಾಯಚೂರು ಗ್ರಾಮೀಣ : ಬಸನಗೌಡ ದದ್ದಲ್ (ಕಾಂಗ್ರೆಸ್)
ಮಾನ್ವಿ : ರಾಜಾ ವೆಂಕಟಪ್ಪ ನಾಯಕ (ಜೆಡಿಎಸ್)
ದೇವದುರ್ಗ : ಶಿವನಗೌಡ ನಾಯಕ (ಬಿಜೆಪಿ)
ಲಿಂಗಸಗೂರು : ಡಿ ಎಸ್ ಹುಲಗೆರಿ (ಕಾಂಗ್ರೆಸ್)
ಸುರಪುರ: ರಾಜೂಗೌಡ (ಬಿಜೆಪಿ)
ಶಹಾಪುರ : ಶರಣಬಸಪ್ಪ (ಕಾಂಗ್ರೆಸ್)
ಯಾದಗಿರಿ : ವೆಂಕಟರೆಡ್ಡಿ ಮುದ್ನಾಳ (ಬಿಜೆಪಿ)
2023ರ ಚುನಾವಣೆಯಲ್ಲಿ ಗಮನಿಸಬೇಕಾದರೆ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ 5 ಕಡೆ ಕಾಂಗ್ರೆಸ್. 2 ಕಡೆ ಬಿಜೆಪಿ, 1 ಜೆಡಿಎಸ್ ಗೆದ್ದಿದೆ.
ರಾಯಚೂರು ನಗರ : ಶಿವರಾಜ್ ಪಾಟೀಲ್ (ಬಿಜೆಪಿ)
ರಾಯಚೂರು ಗ್ರಾಮೀಣ : ಬಸನಗೌಡ ದದ್ದಲ್ (ಕಾಂಗ್ರೆಸ್)
ಮಾನ್ವಿ : ಹಂಪಯ್ಯ ನಾಯಕ (ಕಾಂಗ್ರೆಸ್)
ದೇವದುರ್ಗ : ಕರೆಮ್ಮಾ ಜಿ ನಾಯಕ (ಜೆಡಿಎಸ್)
ಲಿಂಗಸಗೂರು : ಮಾನಪ್ಪ ವಜ್ಜಲ (ಬಿಜೆಪಿ)
ಸುರಪುರ: ರಾಜಾ ವೆಂಕಟಪ್ಪ ನಾಯಕ (ಕಾಂಗ್ರೆಸ್)
ಶಹಾಪುರ : ಶರಣಬಸಪ್ಪ (ಕಾಂಗ್ರೆಸ್)
ಯಾದಗಿರಿ : ಚನ್ನ ರೆಡ್ಡಿ (ಕಾಂಗ್ರೆಸ್)
ಈ ಬಾರಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಕುಮಾರ ನಾಯಕ ಮತ್ತು ಬಿಜೆಪಿ ಅಭ್ಯರ್ಥಿ ಇನ್ನು ಅಂತಿಮವಾಗಿಲ್ಲ. ಮಾಜಿ ಕಾಂಗ್ರೆಸ್ ಸಂಸದ ಬಿ ವಿ ನಾಯಕ ಮತ್ತು ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಮಧ್ಯೆ ಟಿಕೆಟ್‌ಗಾಗಿ ಜಿದ್ದಾಜಿದ್ದಿ ನಡೆದಿದೆ. ಯಾವ ನಾಯಕರಿಗೆ ಟಿಕೆಟ್ ನೀಡಬೇಕು ಎಂಬ ವಿಚಾರವಾಗಿ ಸಭೆಗಳು ನಡೆಸಿ ಚರ್ಚೆ ನಡೆದಿದೆ.
ವಿಷಯ ವಿಶ್ಲೇಷಣೆ ಸ್ಪಷ್ಟವಾಗಿ ಮತ್ತು ಅದ್ಭುತವಾಗಿದೆ.👍