ದಲಿತನೆಂಬ ಕಾರಣಕ್ಕೆ ಕಾಂಗ್ರೆಸ್‌ ಶಾಸಕನಿಂದ ಹಲ್ಲೆ: ಒಂದೂವರೆ ವರ್ಷದಿಂದ ಆಸ್ಪತ್ರೆಯಲ್ಲೇ ಇರುವ ಯುವಕ

Date:

Advertisements
ನನ್ನ ದೈಹದ ಮೇಲಾಗಿರುವ ಗಾಯಗಳು ಒಂದು ದಿನ ಗುಣವಾಗುತ್ತವೆ. ಆದರೆ, ನಾನು ಪ್ರತಿದಿನ ಅನುಭವಿಸುವ ಮಾನಸಿಕ ವೇದನೆ ಗುಣವಾಗುವುದೇ? ಒಂದೂವರೆ ವರ್ಷದಿಂದ ನ್ಯಾಯಕ್ಕಾಗಿ ಕಾಯುತ್ತಿದ್ದೇನೆ. ಆದರೆ, ಆರೋಪಿಯನ್ನು ರಕ್ಷಿಸಲಾಗುತ್ತಿದೆ ಎನ್ನುತ್ತಿದ್ದಾರೆ ಸಂತ್ರಸ್ತ ಹರ್ಷಾಧಿಪತಿ

ದಲಿತ ಯುವಕ ಹರ್ಷಾಧಿಪತಿ ವಾಲ್ಮೀಕಿ ಕಳೆದ 17 ತಿಂಗಳುಗಳಿಂದು ರಾಜಸ್ಥಾನದ ಜೈಪುರದಲ್ಲಿರುವ ಎಸ್‌ಎಂಎಸ್‌ ಆಸ್ಪತ್ರೆಯಲ್ಲಿ ಹಾಸಿಗೆಗೆ ಅಂಟಿಕೊಂಡು ಬದುಕುತ್ತಿದ್ದಾರೆ. ಅವರ ಕಾಲು ಮುರಿದಿದ್ದು, ಲೋಹದ ರಾಡ್‌ ಹಾಕಲಾಗಿದೆ. ಇಂದಿಗೂ ಅವರು ಮತ್ತೊಬ್ಬರ ನೆರವಿಲ್ಲದೆ ನಡೆಯಲಾಗದ ಪರಿಸ್ಥಿತಿಯಲ್ಲಿದ್ದಾರೆ. ಒಂದೂವರೆ ವರ್ಷಗಳಿಂದ ಅವರು ಕಿಟಕಿಯಲ್ಲಿ ಇಣುಕಿ ಹೊರ ಜಗತ್ತನ್ನು ನೋಡುತ್ತಿದ್ದಾರೆ. ಕಾಲು ಸೇರಿದಂತೆ ಅವರ ದೇಹದ ಹಲವಾರು ಮೂಳೆಗಳು ಮುರಿದಿವೆ – ತನ್ನ ಈ ಪರಿಸ್ಥಿತಿಗೆ ತನ್ನ ಜಾತಿ ಮತ್ತು ಕಾಂಗ್ರೆಸ್‌ ಶಾಸಕನೇ ಕಾರಣವೆಂದು ಹರ್ಷಾಧಿಪತಿ ಹೇಳಿದ್ದಾರೆ.

ಮೂಲತಃ ರಾಜಸ್ಥಾನದ ಧೋಲ್‌ಪುರದ ಹರ್ಷಾಧಿಪತಿ ಅವರು ವಿದ್ಯುತ್ ಶುಲ್ಕ ವಸೂಲಿ ಮಾಡುವ ಕಾಯಕ ಮಾಡುತ್ತಿದ್ದರು. ಯಾವ ಗ್ರಾಮಗಳಲ್ಲಿ ಜನರು ವಿದ್ಯುತ್ ಬಿಲ್‌ ಪಾವತಿಸಿರುವುದಿಲ್ಲವೋ ಅಂತಹ ಗ್ರಾಮಗಳಿಗೆ ತೆರಳಿ ಶುಲ್ಕ ಪಾವತಿಸುವಂತೆ ಒತ್ತಾಯಿಸುವುದು ಅವರ ಕೆಲಸವಾಗಿತ್ತು. ಆದರೆ, ಅವರು ಆ ಸಂದರ್ಭದಲ್ಲಿ ಜಾತಿ ನಿಂದನೆಗೂ ಒಳಗಾಗುತ್ತಿದ್ದರು.

“ನನ್ನ ಜಾತಿ ಯಾವುದೆಂದು ಪ್ರಶ್ನಿಸುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಜನರು ನನ್ನನ್ನು ಸುತ್ತುವರೆದು, ‘ಠಾಕೂರ್ ಸಮುದಾಯದವರ ಬೀದಿಗೆ ಬರಲು ಹೇಗೆ ಧೈರ್ಯ ಮಾಡಿದೆ’ ಎಂದು ಬೆದರಿಕೆ ಹಾಕುತ್ತಿದ್ದರು. ಗ್ರಾಮವೊಂದರಲ್ಲಿ ವ್ಯಕ್ತಿಯೊಬ್ಬ ಫೋನ್‌ ಮೂಲಕ ಶಾಸಕ ಮಾಲಿಂಗ ಎಂದು ಹೇಳಲಾದ ವ್ಯಕ್ತಿಯೊಂದಿಗೆ ಮಾತಾಡಿಸಿದ್ದರು. ಫೋನ್‌ ಮಾತನಾಡಿದ ಅವರು ನನ್ನ ಜಾತಿ ನಿಂದನೆ ಮಾಡಿದ್ದರು” ಎಂದು ಹೇಳಿಕೊಂಡಿದ್ದಾರೆ.

Advertisements

“ಕಳೆದ ವರ್ಷ ಮಾರ್ಚ್‌ 28ರಂದು ರಜಪೂತ ಸಮುದಾಯಕ್ಕೆ ಸೇರಿದ, ಮೂರನೇ ಬಾರಿ ಶಾಸಕರಾಗಿರುವ ಮಾಲಿಂಗ ಅವರು ತಮ್ಮ ಸಹಚರರೊಂದಿಗೆ ನನ್ನ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದರು. ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದರು. ಅವರು ನನ್ನನ್ನು ಥಳಿಸಿ, ಬಿಟ್ಟು ಹೋದರು. ಬಳಕ ನನ್ನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದರು. ಒಂದೂವರೆ ವರ್ಷದಿಂದ ಆಸ್ಪತ್ರೆಯ ಈ ಹಾಸಿಗೆ ಮೇಲೆ ಜೀವಿಸುತ್ತಿದ್ದೇನೆ” ಎಂದು ಹರ್ಷಾಧಿಪತಿ ಅಳಲು ತೋಡಿಕೊಂಡಿದ್ದಾರೆ.

ಶಾಸಕ ಮಾಲಿಂಗ ವಿರುದ್ಧ ಹರ್ಷಾಧಿಪತಿ ದೂರು ನೀಡಿದ್ದರು. ಶಾಸಕನ ವಿರುದ್ಧ ಎಸ್‌ಟಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ತನ್ನ ವಿರುದ್ಧ ಆರೋಪಗಳು ಸುಳ್ಳು ಮತ್ತು ಆಧಾರರಹಿತ ಎಂದು ಹೇಳಿದ್ದ ಶಾಸಕ, ಬಿಜೆಪಿಗರ ಪಿತೂರಿಯಿಂದ ತನ್ನನ್ನು ಆರೋಪಿಯಾಗಿ ಮಾಡಲಾಗಿದೆ ಎಂದು ಹೇಳಿಕೊಂಡಿದ್ದರು.

ರಾಜಸ್ಥಾನ ಪೊಲೀಸರು ಪ್ರಕರಣದ ಇತರ ಆರೋಪಿಗಳನ್ನು ಘಟನೆ ನಡೆದ ಕೆಲವೇ ದಿನಗಳಲ್ಲಿ ಬಂಧಿಸಿದ್ದರು. ಆದರೆ, ಶಾಸಕ ಮಾಲಿಂಗ ಅವರನ್ನು ಬಂಧಿಸಿರಲಿಲ್ಲ. 2022ರ ಮೇ 11ರಂದು ಮುಖ್ಯಮಂತ್ರಿ ಗೆಹ್ಲೋಟ್‌ ಅವರನ್ನು ಭೇಟಿಯಾಗಿದ್ದ ಶಾಸಕ, ಬಳಿಕ ತಾವು ಮುಗ್ಧನೆಂದು ಹೇಳಿಕೊಂಡು ಪೊಲೀಸರಿಗೆ ಶರಣಾದರು. ಧೋಲ್‌ಪುರ ಸ್ಥಳೀಯ ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿತು. ಅದೇ ಸಂದರ್ಭದಲ್ಲಿ ಕೋವಿಡ್‌ ಪಾಸಿಟಿವ್ ಬಂದಿದೆಯೆಂದು ಶಾಸಕ ಮಾಲಿಂಗ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಆಸ್ಪತ್ರೆಯಲ್ಲಿರುವಾಗಲೇ, ಒಂದು ವಾರದಲ್ಲಿ ಅವರಿಗೆ ಹೈಕೋರ್ಟ್‌ ಜಾಮೀನು ನೀಡಿತು. ಪ್ರಕರಣ ನಡೆದು ಒಂದೂವರೆ ವರ್ಷಗಳಾಗಿವೆ. ಆದರೂ, ತನಿಖೆ ನಡೆಸುತ್ತಿರುವ ಸಿಐಡಿ ಇನ್ನೂ ತನಿಖಾ ವರದಿ ಸಲ್ಲಿಸಿಲ್ಲ.

ಈ ನಡುವೆ, ಆರೋಪಿ ಶಾಸಕ ಮಾಲಿಂಗ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗೆ ಹಲವು ಭಾರಿ ವೇದಿಕೆ ಹಂಚಿಕೊಂಡಿದ್ದಾರೆ. ತನ್ನ ಜನ್ಮದಿನದಂದು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರನ್ನು ಭೇಟಿಯಾಗಿದ್ದಾರೆ. ಮಾತ್ರವಲ್ಲದೆ, ಇತ್ತೀಚೆಗೆ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪಕ್ಕದಲ್ಲಿ ನಡೆದಿದ್ದಾರೆ.

ಇದೆಲ್ಲವನ್ನೂ ಗಮನಿಸಿತ್ತಿರುವ ಹರ್ಷಾಧಿಪತಿ ತನಗೆ ನ್ಯಾಯ ಸಿಗುವುದೇ? ಆರೋಪಿಗೆ ಶಿಕ್ಷೆಯಾಗುವುದೇ ಎಂಬ ಪ್ರಶ್ನೆಯನ್ನು ಸಮಾಜದ ಮುಂದಿಟ್ಟಿದ್ದಾರೆ.

“ನನ್ನ ದೈಹದ ಮೇಲಾಗಿರುವ ಗಾಯಗಳು ಒಂದು ದಿನ ಗುಣವಾಗುತ್ತವೆ. ಆದರೆ, ನಾನು ಪ್ರತಿದಿನ ಅನುಭವಿಸುವ ಮಾನಸಿಕ ವೇದನೆ ಗುಣವಾಗುವುದೇ? ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ ಅವರು ನನ್ನ ಮೇಲೆ ಕುರ್ಚಿ ಎಸೆದು, ಜಾತಿ ನಿಂದನೆ ಮಾಡಿದರು. ಅವರ ಸಹಚರರು ನನ್ನನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿದರು. ಒಂದೂವರೆ ವರ್ಷದಿಂದ ನ್ಯಾಯಕ್ಕಾಗಿ ಕಾಯುತ್ತಿದ್ದೇನೆ. ಆದರೆ, ಆರೋಪಿಯನ್ನು ರಕ್ಷಿಸಲಾಗುತ್ತಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಈ ವರದಿ ಓದಿದ್ದೀರಾ?: ಫ್ಯೂಡಲ್ ಸಮಾಜ, ಗಾದೆಗಳು ಮತ್ತು ನಿಂದನಾತ್ಮಕ ವಾಗ್ದಾಳಿಗಳು: ರಂಗನಾಥ ಕಂಟನಕುಂಟೆ ಬರೆಹ

ಜುಲೈ 31ರಂದು ಹರ್ಷಾಧಿಪತಿ ಅವರ ಪ್ರಕರಣದ ವಿಚಾರಣೆ ನಡೆಸಿದ ರಾಜಸ್ಥಾನ ಹೈಕೋರ್ಟ್‌ ನ್ಯಾಯಮೂರ್ತಿ ಫರ್ಜಂದ್ ಅಲಿ ಅವರು, “ಪ್ರಕರಣದ ಆರೋಪಿಯು ಹಾಲಿ ಶಾಸಕರಾಗಿದ್ದಾರೆ. ಸ್ಥಾಯಿ ಸಮಿತಿ ಸೂಚನೆಯ ಪ್ರಕಾರ, ಸಿಐಡಿ, ಸಿಬಿ ತನಿಖೆ ನಡೆಸುತ್ತಿದೆ. ಆದರೆ, 16-17 ತಿಂಗಳು ಕಳೆದರೂ ಇದುವರೆಗೂ ತನಿಖೆಯ ವರದಿ ಸಲ್ಲಿಕೆಯಾಗಿಲ್ಲ. ಹೀಗಾಗಿ, ‘ರಾಜ್ಯ ಪೊಲೀಸರು ಆಡಳಿತ ಪಕ್ಷದ ಪ್ರಭಾವಕ್ಕೆ ಒಳಗಾಗಿದ್ದಾರೆ’ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಈ ಬಗ್ಗೆ ತನಿಖಾ ಸಂಸ್ಥೆ ಏನು ಹೇಳುತ್ತದೆ” ಎಂದು ಪ್ರಶ್ನಿಸಿದ್ದಾರೆ.

ಕೋರ್ಟ್‌ ಪ್ರಶ್ನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸರ್ಕಾರಿ ವಕೀಲ, ಎಎಜಿ ಘನಶ್ಯಾಮ್ ರಾಥೋಡ್, “ತನಿಖೆಯ ವರದಿಯನ್ನು ಇನ್ನೂ ಏಕೆ ಸಲ್ಲಿಸಿಲ್ಲ ಎಂದು ನ್ಯಾಯಾಲಯವು ನನ್ನನ್ನು ಕೇಳಿದೆ. ಈ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ, ಸಿಬಿಗೆ ಮೇಲ್ ಮಾಡಿದ್ದೇನೆ” ಎಂದು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ ತೀರ್ಪಿನ ಕಾರಣ ನನ್ನ ಸಮುದಾಯದಿಂದಲೇ ಟೀಕೆಗೊಳಗಾದೆ: ಸಿಜೆಐ

"ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ (ಒಳಮೀಸಲಾತಿ) ತೀರ್ಪಿನ ಕಾರಣದಿಂದಾಗಿ ನನ್ನ ಸಮುದಾಯದಿಂದಲೇ...

ಮೀರತ್ ಗಡಿಯಾರ ಗೋಪುರ ಹತ್ತಿ ವಿಡಿಯೋ ಮಾಡುವ ಸಾಹಸ ಮಾಡಿದ ‘ಸ್ಪೈಡರ್‌ಮ್ಯಾನ್’ ಬಂಧನ!

'ಸ್ಪೈಡರ್‌ಮ್ಯಾನ್' ವೇಷಭೂಷಣವನ್ನು ಧರಿಸಿ ಮೀರತ್‌ನ ಐತಿಹಾಸಿಕ ಗಡಿಯಾರ ಗೋಪುರವನ್ನು ಹತ್ತಿ ಅಪಾಯಕಾರಿ...

ಸರ್ಕಾರದಿಂದ ನಷ್ಟ ಸರಿದೂಗಿಸಲಾಗದು, ರೈತರೇ ಕಷ್ಟಕ್ಕೆ ಒಗ್ಗಿಕೊಳ್ಳಬೇಕು: ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ

ಇತ್ತೀಚಿಗೆ ಆದ ಅತಿವೃಷ್ಟಿಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲು...

Download Eedina App Android / iOS

X