ಮಹಿಳಾ ಮೀಸಲಾತಿ ಮಸೂದೆ ಕೈಗೆತ್ತಿಕೊಳ್ಳಲು ನರೇಂದ್ರ ಮೋದಿ ಸರ್ಕಾರಕ್ಕೆ 10 ವರ್ಷ ಬೇಕಾಯಿತೆ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಕಪಿಲ್ ಸಿಬಲ್, ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಬೆಂಬಲ ನೀಡುತ್ತಿರುವಾಗ ಮೋದಿಜೀ ಅವರು ಈಗ ಮಸೂದೆಯನ್ನು ಪರಿಚಯಿಸಲು ಸುಮಾರು 10 ವರ್ಷಗಳ ಕಾಲ ಏಕೆ ಕಾಯುತ್ತಿದ್ದರು ಎಂದು ಆಶ್ಚರ್ಯ ಪಡುತ್ತೀರಾ? ಬಹುಶಃ 2024 ರ ಸಾರ್ವತ್ರಿಕ ಚುನಾವಣೆಯೇ ಕಾರಣ. ಆದರೆ ಒಬಿಸಿ ಮಹಿಳೆಯರಿಗೆ ಸರ್ಕಾರ ಮೀಸಲಾತಿ ನೀಡದಿದ್ದರೆ 2024 ರಲ್ಲಿ ಬಿಜೆಪಿಯು ಉತ್ತರ ಪ್ರದೇಶವನ್ನು ಕಳೆದುಕೊಳ್ಳಬಹುದು! ಅದರ ಬಗ್ಗೆ ಯೋಚಿಸಿ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಹಿಳಾ ಮೀಸಲಾತಿ ಮಸೂದೆಗೆ ಸೋನಿಯಾ, ರಾಹುಲ್ ಬೆಂಬಲ
ಕೇಂದ್ರ ರಾಜ್ಯ ಖಾತೆಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಸೋಮವಾರ ಟ್ವಿಟರ್‌ನಲ್ಲಿ ಮಸೂದೆ ಅನುಮೋದನೆ ನೀಡಿದೆ ಎಂದು ಬಗ್ಗೆ ಟ್ವೀಟ್ ಮಾಡಿದ್ದರು. ಆದರೆ ಒಂದು ಗಂಟೆಯೊಳಗೆ ಪೋಸ್ಟ್ ಅದನ್ನು ಅಳಿಸಲಾಯಿತು.
ಸೋಮವಾರ ಸಂಜೆ 90 ನಿಮಿಷಕ್ಕೂ ಹೆಚ್ಚು ಕಾಲ ನಡೆದ ಸಚಿವ ಸಂಪುಟ ಸಭೆಯಲ್ಲಿ ಏನಾಯಿತು ಎಂಬುದರ ಕುರಿತು ಯಾವುದೇ ಅಧಿಕೃತ ವರದಿಗಳಿಲ್ಲದಿದ್ದರೂ, ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ನೀಡಿದೆ ಎಂಬ ವಿಚಾರ ನಂತರ ಗೊತ್ತಾಯಿತು.
ಯುಪಿಎ 1 ಮತ್ತು 2ರ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಸಿಬಲ್ ಕಳೆದ ವರ್ಷ ಮೇ ತಿಂಗಳಲ್ಲಿ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.