ಶನಿವಾರ-ಭಾನುವಾರವೂ ತೆರೆಯಲಿವೆ ನೋಂದಣಿ ಕಚೇರಿ: ಸಚಿವ ಕೃಷ್ಣ ಬೈರೇಗೌಡ

Date:

Advertisements

ಜನರಿಗೆ ಸುಗಮ ಆಡಳಿತ ನೀಡುವ ಭಾಗವಾಗಿ ಅಕ್ಟೋಬರ್ 21ರ ನಂತರ ನೋಂದಣಿ ಕಚೇರಿಗಳು ಶನಿವಾರ-ಭಾನುವಾರದ ರಜೆ ದಿನಗಳಲ್ಲೂ ಕಾರ್ಯನಿರ್ವಹಿಸಲಿವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಸೋಮವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಅವರು, “ದುಡಿಯುವ ಮಧ್ಯಮ ವರ್ಗದ ಜನ ವಾರದ ದಿನಗಳಲ್ಲಿ ತಮ್ಮ ಕೆಲಸಗಳನ್ನು ಬಿಟ್ಟು ನೋಂದಣಿ ಕಚೇರಿಗಳಿಗೆ ಆಗಮಿಸುವುದು ಕಷ್ಟ. ಅಲ್ಲದೆ, ನೋಂದಣಿಗಾಗಿ ಹೊರ ರಾಜ್ಯದಿಂದ ಆಗಮಿಸುವವರಿಗೂ ಅನಾನುಕೂಲ ಉಂಟಾಗುತ್ತಿದೆ. ಹೀಗಾಗಿ ದುಡಿಯುವ ವರ್ಗದ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಎರಡನೇ-ನಾಲ್ಕನೇ ಶನಿವಾರ ಹಾಗೂ ಭಾನುವಾರಗಳಲ್ಲೂ ನೋಂದಣಿ ಕಚೇರಿಗಳನ್ನು ತೆರೆಯಲು ನಿರ್ಧರಿಸಲಾಗಿದೆ” ಎಂದರು.

“ಅಕ್ಟೋಬರ್ 21ರ ನಂತರ ಪ್ರತಿ ನೋಂದಣಿ ಜಿಲ್ಲೆಗಳಲ್ಲಿ ಒಂದು ರಿಜಿಸ್ಟರ್ ಕಚೇರಿ ಶನಿವಾರ ಮತ್ತು ಭಾನುವಾರ ರಜಾ ದಿನಗಳಲ್ಲೂ ಕಾರ್ಯನಿರ್ವಹಿಸಲಿವೆ. ರಜೆ ದಿನಗಳಲ್ಲಿ ಯಾವ ನೋಂದಣಿ ಕಚೇರಿ ಕಾರ್ಯನಿರ್ವಹಿಸಲಿವೆ ಎಂದು ಅವಧಿಗೆ ಮೊದಲೇ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ನೋಂದಣಿಗಾಗಿ ಸಾರ್ವಜನಿಕರು ಅರ್ಜಿ ಹಾಕಿದಾಗ ಯಾವ ಕಚೇರಿ ತೆರೆದಿರುತ್ತದೆ ಎಂಬ ಮಾಹಿತಿಯನ್ನು ಆನ್ಲೈನ್ ಮೂಲಕ ನೀಡಲಾಗುತ್ತದೆ” ಎಂದು ತಿಳಿಸಿದರು.

Advertisements

ಮುಂದುವರೆದು, “ಶನಿವಾರ-ಭಾನುವಾರಗಳಲ್ಲೂ ನೋಂದಣಿ ಕಚೇರಿಗಳನ್ನು ತೆರೆಯಬೇಕು ಎಂಬ ಒತ್ತಾಯ ಈ ಹಿಂದಿನಿಂದಲೂ ಇತ್ತು. ಅಲ್ಲದೆ, ಬಜೆಟ್ ವೇಳೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಇಲಾಖೆಗೆ ಸೂಚನೆ ನೀಡಿದ್ದರು. ಹೀಗಾಗಿ ಇದಕ್ಕೆ ಬೇಕಾದಂತೆ ಕಾನೂನುಗಳನ್ನು ತಿದ್ದುಪಡಿ ಮಾಡಿ, ಈ ಬಗ್ಗೆ ಕ್ಯಾಬಿನೆಟ್ನಿಂದಲೂ ಒಪ್ಪಿಗೆ ಪಡೆಯಲಾಗಿದೆ” ಎಂದರು.

ಅಕ್ರಮ ತಡೆಗೆ ಡಿಜಿಟಲ್ ಇಂಟಗ್ರೇಷನ್ ಖಾತಾ ಜಾರಿ

“ಅಕ್ರಮ ನೋಂದಣಿ ಹಾಗೂ ತೆರಿಗೆ ವಂಚನೆಯನ್ನು ತಡೆಯುವ ಸಲುವಾಗಿ ನೋಂದಣಿ ಸಮಯದಲ್ಲಿ ಡಿಜಿಟಲ್ ಇಂಟಗ್ರೇಷನ್ ಖಾತಾ ನಿಯಮವನ್ನು ಜಾರಿಗೊಳಿಸಲಾಗಿದೆ” ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

“ನಿಜವಾದ ಸ್ವತ್ತಿಗೆ ಖಾತೆ ಇಲ್ಲದಿದ್ದರೂ ಕೆಲವರು ಕೇವಲ ಪೇಪರ್‌ನಲ್ಲಿ ಖಾತೆ ಪ್ರಿಂಟ್ ಮಾಡಿಸಿ ಅದರ ಮೂಲಕ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯತ್-ಬಿಬಿಎಂಪಿ ನಗರಸಭೆ ಖಾತೆ ಮಾಡಿಸದಿದ್ದರೂ ಇಂತಹ ಬೋಗಸ್ ಖಾತೆ ಮೂಲಕ ಅಕ್ರಮ ನೋಂದಣಿ ಮಾಡಲಾಗುತ್ತಿದೆ. ಇದರಿಂದ ಹಲವು ಅಮಾಯಕರು ಸಮಸ್ಯೆಗೆ ಸಿಲುಕುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ನೋಂದಣಿ ಮಾಡಿಸುವಾಗ ಇತರೆ ಎಂಬ ಒಂದು ಕ್ಯಾಟಗರಿ ಇದೆ. ಆಶ್ರಯ ನಿವೇಶನಗಳನ್ನು ನೋಂದಾಯಿಸುವಾಗ ಮಾತ್ರ ಈ ಕ್ಯಾಟಗರಿಯನ್ನು ಬಳಸಲಾಗುತ್ತದೆ. ಇದರಲ್ಲಿ ಮಾರುಕಟ್ಟೆ ಬೆಲೆ (ಗೈಡನ್ಸ್ ವ್ಯಾಲ್ಯೂ) ಕಡಿಮೆ ಇರತ್ತೆ. ನೋಂದಣಿ ಶುಲ್ಕವೂ ಕಡಿಮೆ ಇರುತ್ತದೆ. ಹೀಗಾಗಿ ಹಲವರು ತಮ್ಮದು ಖಾಸಗಿ ಸ್ವತ್ತಾಗಿದ್ರೂ ಇತರೆ ಎಂದು ತೋರಿಸಿ ದೊಡ್ಡ ಪ್ರಮಾಣದಲ್ಲಿ ಕಟ್ಟಬೇಕಿರುವ ವೆಚ್ಚವನ್ನು ಮೋಸ ಮಾಡುತ್ತಿದ್ದಾರೆ” ಎಂದು ವಿವರಿಸಿದರು.

“ಈ ಹಿಂದೆ ನೋಂದಣಿ ಮುಖ್ಯಸ್ಥರಾಗಿದ್ದ ತ್ರಿಲೋಕ್ ಚಂದ್ರ ಅವರು ಈ ಬಗ್ಗೆ ಬೆಂಗಳೂರಿನಲ್ಲಿ ಅಧ್ಯಯನ ನಡೆಸಿ ವರದಿ ನೀಡಿದ್ದಾರೆ. ಅಧ್ಯಯನದ ವೇಳೆ ಬೆಂಗಳೂರಿನ 4 ನೋಂದಣಿ ಕಚೇರಿಯನ್ನು ಆಯ್ಕೆ ಮಾಡಿಕೊಂಡು ಈ ಕಚೇರಿಗಳಲ್ಲಿ ನಕಲಿ ಖಾತೆ ಮೂಲಕ ಎಷ್ಟು ನೋಂದಣಿಯಾಗುತ್ತಿವೆ ಹಾಗೂ ತೆರಿಗೆ ವಂಚನೆ ಪ್ರರಕಣಗಳನ್ನೂ ಗುರುತಿಸಿದ್ದಾರೆ. ಅವರ ಪ್ರಕಾರ 1-7-2018 ರಿಂದ 10-12-2019ರ ಅವಧಿಯಲ್ಲಿ ಬೆಂಗಳೂರು ಒಂದರಲ್ಲೇ ರೂ. 250 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಿದ್ದಾರೆ” ಎಂದರು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

“ಇನ್ನೂ ನೋಂದಣಿ ಮಾಡುವಾಗ ಸ್ಕೆಚ್ ಕಡ್ಡಾಯ ಬೇಕು. ಆದರೆ ಕೆಲವೆಡೆ ಸ್ಕೆಚ್ ಇಲ್ಲದೆಯೂ ನೋಂದಣಿ ಮಾಡಲಾಗಿದೆ. ಜನವರಿಯಿಂದ ಈಚೆಗೆ 200 ನೋಂದಣಿ ಸ್ಕೆಚ್ ಇಲ್ಲದೆ ಮಾಡಲಾಗಿದೆ. ಸೈಟು ಅಥವಾ ಜಮೀನನನ್ನು ಟಿಡಿಆರ್ ಅಂತೇಳಿ ನೋಂದಣಿ ಮಾಡಿಸಿದ್ದಾರೆ. ಇದರಿಂದ ಅಕ್ರಮದ ಜೊತೆಗೆ ತೆರಿಗೆ ಹಣವೂ ವಂಚಿಸಲಾಗುತ್ತಿದೆ. ಇದನ್ನು ಹೇಗೆ ತಡೆಗಟ್ಟುವುದು ಎಂದು ಕಳೆದ ಎಂಟು ತಿಂಗಳಿನಿಂದ ಯೋಚಿಸಿ ಬೋಗಸ್ ಖಾತಾ ಮೂಲಕ ಆಗುತ್ತಿರುವ ಅಕ್ರಮಗಳಿಗೆ ತಡೆಯೊಡ್ಡಲು, ಅಮಾಯಕರಿಗೆ ನ್ಯಾಯ ಒದಗಿಸಲು ನಿರ್ಧರಿಸಲಾಯಿತು” ಎಂದರು.

“ಯಾವುದೇ ಖಾತೆ ಇರಲಿ ಪೇಪರ್ ಖಾತೆ ಆಧಾರದಲ್ಲಿ ನೋಂದಣಿಯಾಗುವಾಗ ವೆರಿಫಿಕೇಷನ್‌ಗೆ ತಿಂಗಳೇ ಬೇಕು. ಅಲ್ಲಿಯವರೆಗೆ ನೋಂದಣಿಯನ್ನು ಬಾಕಿ ಇಡಲಾಗಲ್ಲ. ಪೇಪರ್ ಅನ್ನು ಯಾರು ಬೇಕಾದರೂ ಮುದ್ರಿಸಬಹುದು. ಅದಕ್ಕೆ ನಾವೀಗ ಒಂದು ತೀರ್ಮಾನ ಮಾಡಿದ್ದೇವೆ. ಗ್ರಾಮ ಪಂಚಾಯತ್- ಮುನಿಸಿಪಾಲಿಟಿ ಬಿಬಿಎಂಪಿ ಬಿಡಿಎ ಯಾರೇ ಇರಬಹುದು, ಎಲ್ಲಾ ಖಾತೆಯನ್ನೂ ಡಿಜಿಟಲ್ ಮಾಡಬೇಕು. ಖಾತೆ ಡಿಜಿಟಲ್ ಆಗಿರಬೇಕು. ರಿಜಿಸ್ಟ್ರೇಷನ್ ಸಮಯದಲ್ಲಿ ನಮ್ಮ ಹಾಗೂ ಅವರ ಸಿಸ್ಟಂ ಲಿಂಕ್ ಮಾಡಿ, ಖಾತೆ ನಂಬರ್ ಹೆಸರು ಹಾಗೂ ವಿಳಾಸ ಹೊಂದಾಣಿಕೆ ಆದ್ರೆ ಆಟೋಮ್ಯಾಟಿಕ್ ಖಾತೆ ಮಾಡಿಕೊಡಲಾಗುವುದು” ಎಂದರು.

“ಡಿಜಿಟಲ್ ಇಂಟಗ್ರೇಷನ್ ಖಾತಾವನ್ನು ಈ ತಿಂಗಳ ಆರಂಭದಲ್ಲೇ ಪ್ರಾಯೋಗಿಕವಾಗಿ 4 ಜಿಲ್ಲೆಗಳಲ್ಲಿ ಜಾರಿ ಮಾಡಲಾಗಿದೆ. ಇಂದಿನಿಂದ 8 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ರಾಜ್ಯದಲ್ಲಿ ಈವರೆಗೆ ಎಲ್ಲೂ ಸಮಸ್ಯೆ ಬಂದಿಲ್ಲ. ಬೆಂಗಳೂರಲ್ಲಿ ಸಮಸ್ಯೆ ಬರಬಹುದು. ಹೀಗಾಗಿ ಫೆಬ್ರವರಿಯಲ್ಲೇ ಬಿಡಿಎ, ಕೆಎಡಿಬಿ, ಕರ್ನಾಟಕ ಹೌಸಿಂಗ್ ಬೋರ್ಡ್, ಕರ್ನಾಟಕ ರಾಜೀವ್ ಗಾಂಧಿ ವಸತಿ ನಿಗಮ ಎಲ್ಲರನ್ನೂ ಕರೆಸಿ ತಮ್ಮ ಖಾತೆಗಳನ್ನು ಡಿಜಿಟಲೀಕರಣಗೊಳಿಸಿ ಎಂದು ತಿಳಿಸಲಾಗಿದೆ. ಬಿಬಿಎಂಪಿಯದ್ದೂ ಮಾಡಬೇಕು. ಅವರಿಗೂ ಸೂಚನೆ ನೀಡಲಾಗಿದೆ. ಮುಂದಿನ ತಿಂಗಳಿನಿಂದ ಬಿಬಿಎಂಪಿಯದ್ದೂ ಇ-ಖಾತಾ ಮೂಲಕವೇ ರಿಜಿಸಸ್ಟ್ರೇಷನ್ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದರು.

“ಇದೆಲ್ಲ ಜಾರಿಯಾದಲ್ಲಿ ಒಂದು ಕಡೆ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ, ಬಹಳ ಮುಖ್ಯವಾಗಿ ಅಕ್ರಮಗಳಿಗೆ ಕಡಿವಾಣ, ಅಮಾಯಕರ ಶೋಷಣೆಗೆ ಕಡಿವಾಣ, ಸರ್ಕಾರಕ್ಕೆ ಬರಬೇಕಾದ ತೆರಿಗೆ ವಂಚನೆ ತಡೆಗೆ ಈ ತೀರ್ಮಾನ ಸಹಕಾರಿಯಾಗಲಿದೆ” ಎಂದು ಸಚಿವರು ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X