ಇಂದು ಏಳು ರಾಜ್ಯಗಳ 13 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬೀಳಲಿದೆ. ಲೋಕಸಭಾ ಚುನಾವಣೆಯ ನಂತರ ಮೊದಲ ಬಾರಿಗೆ ಚುನಾವಣಾ ಕಸರತ್ತು ನಡೆಯುತ್ತಿದ್ದು, ಇದೀಗ ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟದ ಪೈಕಿ ಯಾವ ಮೈತ್ರಿಕೂಟದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಕಾದುನೋಡಬೇಕಿದೆ.
ಜುಲೈ 10ರಂದು ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಮಧ್ಯಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ 13 ವಿಧಾನಸಭೆ ಸ್ಥಾನಗಳಿಗೆ ಉಪಚುನಾವಣೆ ನಡೆದಿದೆ.
ಬಿಹಾರದ ರುಪೌಲಿ, ಪಶ್ಚಿಮ ಬಂಗಾಳದ ರಾಯ್‌ಗಂಜ್, ರಣಘಾಟ್ ದಕ್ಷಿಣ, ಬಾಗ್ದಾ ಮತ್ತು ಮಾಣಿಕ್ತಾಲಾ, ತಮಿಳುನಾಡಿನ ವಿಕ್ರವಂಡಿ, ಮಧ್ಯಪ್ರದೇಶದ ಅಮರವಾರ, ಉತ್ತರಾಖಂಡದ ಬದರಿನಾಥ್ ಮತ್ತು ಮಂಗಳೌರ್, ಪಂಜಾಬ್‌ನ ಜಲಂಧರ್ ಪಶ್ಚಿಮ, ಹಿಮಾಚಲ ಪ್ರದೇಶದ ಡೆಹ್ರಾ, ಹಮೀರ್‌ಪುರ ಮತ್ತು ನಲಗಢದಲ್ಲಿ ಚುನಾವಣೆ ನಡೆದಿದ್ದು ಇವುಗಳಲ್ಲಿ ನಾಲ್ಕು ರಾಜ್ಯಗಳಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳು ಆಡಳಿತ ನಡೆಸುತ್ತಿದ್ದರೆ ಉಳಿದೆಡೆ ಬಿಜೆಪಿ ಅಥವಾ ಎನ್‌ಡಿಎ ಸರ್ಕಾರವಿದೆ.
ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ಪಾಲು ಹೆಚ್ಚಿದೆ. 2021ರ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಮಾಣಿಕ್ತಾಲಾ ಕ್ಷೇತ್ರವನ್ನು ಗೆದ್ದುಕೊಂಡರೆ, ಬಿಜೆಪಿಯು ರಾಯ್‌ಗಂಜ್, ರಣಘಾಟ್ ದಕ್ಷಿಣ್ ಮತ್ತು ಬಾಗ್ದಾದಲ್ಲಿ ಗೆದ್ದಿದೆ. ಅದಾದ ಬಳಿಕ ಬಿಜೆಪಿ ಶಾಸಕರು ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ಜುಲೈ 10ರಂದು ಏಳು ರಾಜ್ಯಗಳ 13 ವಿಧಾನಸಭೆ ಸ್ಥಾನಗಳ ಉಪಚುನಾವಣೆ
ಹಿಮಾಚಲ ಪ್ರದೇಶದ ಡೆಹ್ರಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಸುಖವಿಂದರ್ ಸಿಂಗ್ ಸುಖು ಅವರ ಪತ್ನಿ ಕಮಲೇಶ್ ಠಾಕೂರ್ ಸೇರಿದಂತೆ ಅನೇಕ ಅನುಭವಿಗಳು ಮತ್ತು ಕೆಲವು ಚೊಚ್ಚಲ ಅಭ್ಯರ್ಥಿಗಳ ಭವಿಷ್ಯವು ಇಂದು ನಿರ್ಧಾರವಾಗಲಿದೆ.
ಉತ್ತರಾಖಂಡದ ಮಂಗಳೌರ್‌ನಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಎಸ್‌ಪಿ ಶಾಸಕ ಸರ್ವತ್ ಕರೀಂ ಅನ್ಸಾರಿ ನಿಧನದ ಬಳಿಕ ನಡೆದ ಉಪಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈವರೆಗೆ ಕಾಂಗ್ರೆಸ್ ಅಥವಾ ಬಿಎಸ್‌ಪಿ ವಶದಲ್ಲಿರುವ ಮುಸ್ಲಿಂ ಮತ್ತು ದಲಿತರ ಪ್ರಾಬಲ್ಯವಿರುವ ಮಂಗಳೌರ್ ಕ್ಷೇತ್ರದಲ್ಲಿ ಬಿಜೆಪಿ ಎಂದಿಗೂ ಗೆಲುವು ಕಂಡಿಲ್ಲ.
ಪಂಜಾಬ್‌ನ ಜಲಂಧರ್ ಪಶ್ಚಿಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಭಗವಂತ್ ಮಾನ್‌ಗೆ ಅಗ್ನಿಪರೀಕ್ಷೆಯಾಗಿದೆ.
ಇದನ್ನು ಓದಿದ್ದೀರಾ? ಉಪಚುನಾವಣೆ | 13 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ; ಉತ್ತರಾಖಂಡದಲ್ಲಿ ಘರ್ಷಣೆ
ಈ ಹಿಂದೆ ಹಲವು ಬಾರಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪರವಾಗಿ ಸ್ಪರ್ಧಿಸಿ ಸ್ಥಾನವನ್ನು ಗೆದ್ದಿದ್ದ ಹಾಲಿ ಶಾಸಕ ಬಿಮಾ ಭಾರತಿ ಅವರ ರಾಜೀನಾಮೆಯಿಂದ ಬಿಹಾರದಲ್ಲಿ ಉಪಚುನಾವಣೆ ಅನಿವಾರ್ಯವಾಗಿತ್ತು. ಇತ್ತೀಚೆಗೆ ಆರ್‌ಜೆಡಿ ಟಿಕೆಟ್‌ನಲ್ಲಿ ಬಿಮಾ ಭಾರತಿ ಲೋಕಸಭೆ ಚುನಾವಣೆಯನ್ನು ಸ್ಪರ್ಧಿಸಿದ್ದಾರೆ.
ತಮಿಳುನಾಡಿನ ವಿಕ್ರವಾಂಡಿ ವಿಧಾನಸಭಾ ಕ್ಷೇತ್ರದಲ್ಲಿ ಏಪ್ರಿಲ್ 6ರಂದು ಡಿಎಂಕೆ ಶಾಸಕ ಎನ್ ಪುಗಜೆಂಧಿ ಅವರು ನಿಧನ ಹೊಂದಿದ ಕಾರಣ ಉಪಚುನಾವಣೆ ನಡೆದಿದೆ. ಮೂರು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಕಮಲೇಶ್ ಶಾ ಅವರು ಮಾರ್ಚ್‌ನಲ್ಲಿ ಬಿಜೆಪಿಗೆ ಸೇರಿದ ಬಳಿಕ ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲೆಯ ಅಮರವಾರ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿದೆ.
ಈ ಎಲ್ಲ ಕ್ಷೇತ್ರಗಳು ಎನ್‌ಡಿಎ ತೆಕ್ಕೆಗೆ ಸೇರಲಿದೆಯೇ ಅಥವಾ ಇಂಡಿಯಾ ಒಕ್ಕೂಟದ ಪಾಳಾಗಲಿದೆಯೇ ಕಾದು ನೋಡಬೇಕು.
Glimpses inside of the counting venue of the Bye election for 90 Ranaghat Dakshin (SC) AC of Nadia district West Bengal.#ByeElection2024 #Counting #Elections2024@ECISVEEP@SpokespersonECI@rajivkumarec@anuj_chandak pic.twitter.com/D6N6tNaszQ
— CEO West Bengal (@CEOWestBengal) July 13, 2024