ಕೋಲಾರ ಜಿಲ್ಲಾ ಕಾಂಗ್ರೆಸ್‌ ಸಭೆಯಲ್ಲಿ ಗಲಾಟೆ, ಕೈ ಕೈ ಮಿಲಾಯಿಸಿದ ಮುಖಂಡರು

Date:

Advertisements

ಕೋಲಾರ ನಗರದ ಹೊರ ವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಿನ್ನಮತ ಸ್ಫೋಟಗೊಂಡು ಜನ ಪ್ರತಿನಿಧಿಗಳ ಕಣ್ಣೆದುರೇ ಕಾರ್ಯಕರ್ತರ ಗಲಾಟೆ ಮಾಡಿ, ಕೈ ಕೈ ಮಿಲಾಸುವ ಹಂತಕ್ಕೆ ತಲುಪಿದ ಘಟನೆ ನಡೆದಿದೆ.

ಮಾಜಿ ಸಭಾಧ್ಯಕ್ಷ ಕೆ ಆರ್ ರಮೇಶ್ ಕುಮಾರ್ ಸೇರಿದಂತೆ ಕೆಲವರಿಗೆ ಸಭೆಗೆ ಆಹ್ವಾನ ಇಲ್ಲ. ಕೆಲ ಮುಖಂಡರಿಗೆ ಆಹ್ವಾನ ನೀಡಿಲ್ಲ ಎಂದು ಗಲಾಟೆ ಆರಂಭವಾಗಿದ್ದು, ಕಾಂಗ್ರೆಸ್ ಶಾಸಕರ ಎದುರೇ ಪರಸ್ಪರ ತಳ್ಳಾಟ ನೂಕಾಟ ನಡೆದಿದೆ. ಪರಸ್ಪರ ಗುಂಪುಗಳ ಮಧ್ಯೆ ಮುಖಂಡರು ಕೈ ಕೈ ಮಿಲಾಯಿಸಿದ್ದಾರೆ. ಗುಂಪುಗಳ ಗಲಾಟೆ ಮಧ್ಯೆ ಶಾಸಕರು ಸುಮ್ಮನಾಗಿದ್ದಾರೆ.

ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಹಾಗೂ ಕೋಲಾರ ಜಿಲ್ಲೆ ಉಸ್ತುವಾರಿ ನಾರಾಯಣಸ್ವಾಮಿ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಮಾಲೂರು ಶಾಸಕ ನಂಜೇಗೌಡ, ಎಂಎಲ್ ಸಿ, ಮಾಜಿ ಸಭಾಪತಿ ಸುದರ್ಶನ್ ವೇದಿಕೆ ಮೇಲೆ ಕುಳಿತ್ತಿದ್ದರು.

Advertisements

ಸಭೆಯ ಪ್ರಾರಂಭದಲ್ಲೇ ವೇದಿಕೆಯ ಮುಂಭಾಗದಲ್ಲಿದ್ದ ಕಾರ್ಯಕರ್ತರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೀ ನಾರಾಯಣ್ ಹಾಗೂ ಬ್ಲಾಕ್ ಅಧ್ಯಕ್ಷ ಪ್ರಸಾದ್ ಬಾಬು ರವರೊಡನೆ ‘ನೀವು ಜಿಲ್ಲೆಯಲ್ಲಿ ನಡೆಯುವ ಯಾವುದೇ ಕಾಂಗ್ರೆಸ್ ಕಾರ್ಯಕ್ರಮಗಳಿಗೆ ಹಿರಿಯರನ್ನು ಕರೆಯದೇ ಕಡೆಗಣಿಸುತ್ತಿದ್ದೀರಿ. ನೀವು ಸಭೆಯಿಂದ ಹೊರ ನಡೆಯಿರಿ’ ಎಂದು ಗಲಾಟೆ ಮಾಡಿ, ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ್ ಅವರನ್ನ ಹೊರತಳ್ಳಲು ಪ್ರಯತ್ನಿಸಿದರು.

ತೀರ್ಮಾನ ನಾಯಕರದ್ದು: ಲಕ್ಷ್ಮೀ ನಾರಾಯಣ್

ಸುದ್ದಿಗಾರರಿಗೆ ಅಲ್ಲಿಯೇ ಸ್ಪಷ್ಟನೆ ನೀಡಿದ ಲಕ್ಷ್ಮೀ ನಾರಾಯಣ್, “ನನ್ನ ಮೇಲೆ ಹಲ್ಲೆ ಏನೂ ನಡೆದಿಲ್ಲ. ಇಲ್ಲಿಯ ಘಟನೆಯನ್ನ ಖುದ್ದು ನಾಯಕರುಗಳು ವೀಕ್ಷಿಸಿದ್ದಾರೆ. ಮುಂದಿನ ತೀರ್ಮಾನ ಅವರೇ ಮಾಡುತ್ತಾರೆ” ಎಂದರು.

ಸಭೆ ನಂತರ ಗಲಾಟೆ ಹಾಗೂ ಗೊಂದಲಗಳ ಬಗ್ಗೆ ಮಾಹಿತಿ ಹಂಚಿಕೊಂಡ ಉಸ್ತುವಾರಿ ನಾರಾಯಣಸ್ವಾಮಿ, “ನಾನು ಮೊದಲನೇ ಬಾರಿ ಸಭೆಗೆ ಬಂದಿದ್ದೆ. ಜಿಲ್ಲಾಧ್ಯಕ್ಷರ ಮೇಲೆ ಹಲ್ಲೆ ನಡೆಯಬಾರದು. ನಮ್ಮದೊಂದು ಕುಟುಂಬ ಹಾಗಾಗಿ ನಾನು ಇಲ್ಲೇ ಈಗಲೇ ನಾಯಕರ ಅಭಿಪ್ರಾಯ ಪಡೆದು ಭಿನ್ನಮತ ಸ್ಫೋಟಕ್ಕೆ ಅಂತ್ಯ ಹಾಡುವೆ” ಎಂದು ತಿಳಿಸಿದರು.

ಕಾರ್ಯಕರ್ತರ ಸಭೆಯಲ್ಲಾದ ಗಲಾಟೆ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಬಣ ಹಾಗೂ ಕೆ ಎಚ್ ಮುನಿಯಪ್ಪನವರ ನಡುವಿನ ಭಿನ್ನಮತದ ಸ್ಫೋಟವೆಂದು ಬಣ್ಣಿಸಲಾಗುತ್ತಿದೆ. ಇಂದಿನ ಸಭೆಗೆ ಶ್ರೀನಿವಾಸಪುರ ಕ್ಷೇತ್ರದ ರಮೇಶ್ ಕುಮಾರ್ ಬಣದ ಕಾರ್ಯಕರ್ತರು ಯಾರೂ ಭಾಗವಹಿಸು‌ವುದಿಲ್ಲ ಎಂದು ಶುಕ್ರವಾರವೇ ಘೋಷಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಕೋಲಾರ | ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಬೀಗಿದ ಮೈತ್ರಿ

ತೀವ್ರ ಕುತೂಹಲ ಮೂಡಿಸಿದ್ದ ಕೋಲಾರದ ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಚುನಾವಣಾ...

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

Download Eedina App Android / iOS

X