ಬಿಹಾರದಲ್ಲಿ ಈ ವರ್ಷದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಯ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿಯ ಹಿರಿಯ ನಾಯಕರುಗಳು ಮಂಗಳವಾರ ಸಭೆ ಸೇರಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಭೇಟಿಯಾಗಿದ್ದಾರೆ.
ಈ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಜಂಟಿ ಕಾರ್ಯತಂತ್ರ ರೂಪಿಸಲು ಗುರುವಾರ ಪಾಟ್ನಾದಲ್ಲಿ ಸಿಪಿಐ(ಎಂಎಲ್) ಸೇರಿದಂತೆ ಮೈತ್ರಿಕೂಟದ ಎಲ್ಲಾ ಪಕ್ಷಗಳು ಸಭೆ ನಡೆಯಲಿದೆ. ಅದಕ್ಕೂ ಮುನ್ನವೇ ತೇಜಸ್ವಿ ಯಾದವ್ ಕಾಂಗ್ರೆಸ್‌ನ ನಾಯಕರುಗಳನ್ನು ಭೇಟಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಬಿಜೆಪಿಯ ‘400 ಪಾರ್’ ಸಿನಿಮಾ ಮತದಾನದ ಮೊದಲ ದಿನವೇ ಫ್ಲಾಪ್: ತೇಜಸ್ವಿ ಯಾದವ್ ವ್ಯಂಗ್ಯ
ಸಭೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್, ಬಿಹಾರ ಉಸ್ತುವಾರಿ ಕೃಷ್ಣ ಅಲ್ಲಾವರು, ರಾಜ್ಯ ಘಟಕದ ಅಧ್ಯಕ್ಷ ರಾಜೇಶ್ ಕುಮಾರ್ ಮತ್ತು ಹಿರಿಯ ನಾಯಕ ಗುರುದೀಪ್ ಸಪ್ಪಲ್ ಹಾಗೂ ಆರ್‌ಜೆಡಿಯ ಮನೋಜ್ ಕೆ ಝಾ ಮತ್ತು ಸಂಜಯ್ ಝಾ ಅವರು ಭಾಗವಹಿಸಿದ್ದರು.
ಸಚಿನ್ ಪೈಲಟ್ ಸೇರಿದಂತೆ ಕಾಂಗ್ರೆಸ್ ನಾಯಕರು ಚುನಾವಣೆಯ ನಂತರ ಮೈತ್ರಿಕೂಟದ ಸಿಎಂ ಅಭ್ಯರ್ಥಿ ನಿರ್ಧರಿಸಲಾಗುವುದು ಎಂದು ಸಾರ್ವಜನಿಕವಾಗಿ ಹೇಳುತ್ತಿದ್ದಾರೆ. ಮೈತ್ರಿಕೂಟ ಚರ್ಚಿಸಿ ಸರ್ವಾನುಮತದಿಂದ ನಿರ್ಧಾರವನ್ನು ಕೈಗೊಳ್ಳುತ್ತದೆ. ಅದರ ಬಗ್ಗೆ ಯಾವುದೇ ಚಿಂತಿಸುವ ಅಗತ್ಯವಿಲ್ಲ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
इस बार, बिहार में बदलाव निश्चित है।
— Mallikarjun Kharge (@kharge) April 15, 2025
आज हमने बिहार के पूर्व उपमुख्यमंत्री श्री @yadavtejashwi से मुलाक़ात कर, महागठबंधन की मजबूती पर चर्चा की।
आने वाले चुनाव में बिहार की जनता को हम एक सशक्त, सकारात्मक, न्यायप्रिय व कल्याणकारी विकल्प देंगे। भाजपा और उसके अवसरवादी ठगबंधन से… pic.twitter.com/0w3EOanx8w
ಇನ್ನು ಏಪ್ರಿಲ್ 17ರಂದು ನಡೆಯುವ ಸಭೆಯಲ್ಲಿ ಮೈತ್ರಿಕೂಟದ ಪ್ರಚಾರ, ಸೀಟು ಹಂಚಿಕೆ, ಕಾರ್ಯತಂತ್ರ ಮೊದಲಾದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.