ತೆಲಂಗಾಣದ ಬಿಆರ್‌ಎಸ್ (ಭಾರತ್ ರಾಷ್ಟ್ರ ಸಮಿತಿ) ಪಕ್ಷದ ಶಾಸಕಿ ಲಾಸ್ಯ ನಂದಿತಾ (37) ಅವರು ಶುಕ್ರವಾರ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ.
ಹೈದರಾಬಾದ್‌ನ ಔಟರ್ ರಿಂಗ್ ರೋಡ್‌ನಲ್ಲಿ ನಂದಿತಾ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. “ಕಾರು ಅತಿವೇಗದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಲಾಸ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.
ಲಾಸ್ಯ ನಂದಿತಾ ಅವರು ಸಿಕಂದರಾಬಾದ್ ಕಂಟೋನ್ಮೆಂಟ್ (ಪ.ಜಾತಿ) ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದರು. ಇತ್ತೀಚೆಗಷ್ಟೇ ರಸ್ತೆ ಅಪಘಾತದಲ್ಲಿ ಸ್ವಲ್ಪದರಲ್ಲೇ ಬಚಾವಾಗಿದ್ದ ಶಾಸಕಿ ಲಾಸ್ಯ ನಂದಿತಾ ಅವರನ್ನು ಸಾಲು ಸಾಲು ಅವಘಡಗಳು ಕಾಡಿದ್ದನ್ನು ಗಮನಿಸಬಹುದು.
ಇತ್ತೀಚೆಗೆ ಶಾಸಕಿ ಬಿಆರ್‌ಎಸ್‌ನ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ಬಳಿಕ ಮನೆಗೆ ಮರಳುತ್ತಿದ್ದಾಗ ಅವರ ಕಾರು ಅಪಘಾತಕ್ಕೀಡಾಗಿತ್ತು. ಆಗ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಆ ವೇಳೆ ಕರ್ತವ್ಯದಲ್ಲಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಮೃತಪಟ್ಟಿದ್ದರು. ಕಳೆದ ತಿಂಗಳು ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು. ಹತ್ತು ದಿನಗಳ ಹಿಂದೆ ಲಾಸ್ಯ ನಂದಿತಾ ಅವರ ಇನ್ನೋವಾ ಕಾರು ಕೂಡ ಅಪಘಾತಕ್ಕೀಡಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಂಡ್ ಎಂಬ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನ ಪ್ರಶ್ನಿಸಬಾರದೇ?
ಕಳೆದ ವರ್ಷ ಇದೇ ತಿಂಗಳಲ್ಲಿ ಶಾಸಕಿ ಲಾಸ್ಯ ನಂದಿತಾ ಅವರ ತಂದೆ ಸಾಯಣ್ಣ ಮೃತಪಟ್ಟಿದ್ದರು. ಸಾಯಣ್ಣ 2023 ರ ಫೆಬ್ರವರಿ 19ರಂದು ನಿಧನರಾಗಿದ್ದರು. ಇದೀಗ ಅವರ ಮಗಳು 2024ರ ಫೆಬ್ರವರಿ 23ರಂದು ನಿಧನರಾಗಿದ್ದಾರೆ. ಇದು ಅವರ ಕುಟುಂಬದವರನ್ನು ತೀವ್ರ ಆಘಾತಕ್ಕೀಡು ಮಾಡಿದೆ.
ಶಾಸಕಿ ಲಾಸ್ಯ ನಂದಿತಾ ನಿಧನಕ್ಕೆ ಬಿಆರ್‌ಎಸ್ ನಾಯಕರು ಕಂಬನಿ ಮಿಡಿದಿದ್ದಾರೆ. ಸ್ವಲ್ಪ ಸಮಯದ ನಂತರ, ಮೃತದೇಹವನ್ನು ಚಿಕ್ಕಡಪಲ್ಲಿಯಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಗುತ್ತದೆ.
Bharat Rashtra Samithi (BRS) president and former Telangana Chief Minister K. Chandrasekhar Rao has expressed grief over death of young party MLA G. Lasya Nanditha in a road accident.
KCR said he was shocked over tragic death of Lasya, who had become MLA at a young age. He… pic.twitter.com/ZRrTa5xzcp
— IANS (@ians_india) February 23, 2024
