ಷಹಜಹಾನ್‌ ಪ್ರಕರಣ | ಮೀನುಗಾರಿಕೆ ಸಂಸ್ಥೆ ಮೂಲಕ ಅಕ್ರಮ ಹಣ ವರ್ಗಾವಣೆ; ಇಡಿ ವಿವರ

Date:

Advertisements

ಭೂಕಬಳಿಕೆ, ಮೀನುಗಾರಿಕೆ ವ್ಯವಹಾರದ ಮೂಲಕ ಅಕ್ರಮ ಹಣ ವರ್ಗಾವಣೆ, ಭಯದ ವಾತಾವರಣ ಸೃಷ್ಟಿಸಿ ಜನರ ಮೇಲೆ ದಬ್ಬಾಳಿಕೆ ಆರೋಪ ಹೊತ್ತಿರುವ ಟಿಎಂಸಿಯಿಂದ ಅಮಾನತಾಗಿರುವ ಶೇಖ್ ಷಹಜಹಾನ್‌ ಅವರನ್ನು ತನ್ನ ಕಸ್ಟಡಿಗೆ ನೀಡಬೇಕೆಂದು ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಯ (ಇಡಿ) ಮನವಿ ಮಾಡಿದೆ.

ಷಹಜಹಾನ್ ವಿರುದ್ಧದ ಪಿಎಂಎಲ್‌ಎ (ಅಕ್ರಮ ಹಣ ವರ್ಗಾವಣೆ ತಡೆಗಟ್ಟುವಿಕೆ) ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಇಡಿ ಅಫಿಡವಿಟ್ ಸಲ್ಲಿಸಿದೆ. “ಷಹಜಹಾನ್ ಮತ್ತು ಇತರರು – ಹಲ್ಲೆ, ಕೊಲೆ, ಕೊಲೆ ಬೆದರಿಕೆ, ಸುಲಿಗೆ, ಇತ್ಯಾದಿ ಸಂಘಟಿತ ಕೃತ್ಯಗಳಲ್ಲಿ ತೊಡಗುವ ಮೂಲಕ ಭಯೋತ್ಪಾದನೆಯ ವಾತಾವರಣವನ್ನು ಸೃಷ್ಟಿಸಿದ್ದಾರೆ. ಅಲ್ಲದೆ, ಸಾರ್ವಜನಿಕರ ಭೂಮಿಯನ್ನು ಕಬಳಿಸಿದ್ದಾರೆ ಹಾಗೂ ಅಕ್ರಮ ಹಣದ ಲಾಭ/ಸವಲತ್ತುಗಳನ್ನು ಪಡೆದಿದ್ದಾರೆ” ಎಂದು ಇಡಿ ವಿವರಿಸಿದೆ.

ಷಹಜಹಾನ್ ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಸಬೀನಾ ಎಂಬ ಮೀನುಗಾರಿಕೆ ಕಂಪನಿಯನ್ನು ನಡೆಸುತ್ತಿದ್ದರು. ಆ ಕಂಪನಿಯ ಮ್ಯಾನೇಜರ್ ಅನ್ನು ಇಡಿ ವಿಚಾರಣೆಗೆ ಒಳಪಡಿಸಿದ್ದು; “2019ರಲ್ಲಿ, ಷಹಜಹಾನ್ ಮೀನು ಮಾರುಕಟ್ಟೆಯಲ್ಲಿ ಸಭೆ ನಡೆಸಿದ್ದರು. ಸಭೆಯಲ್ಲಿ ತಮ್ಮ ಸಂಸ್ಥೆಯ ಮೂಲಕ ಮಾತ್ರ ಮೀನು ಮಾರಾಟ ಮಾಡುವಂತೆ ಮಾರುಕಟ್ಟೆಯಲ್ಲಿನ ಎಲ್ಲ ಮೀನು ಮಾರಾಟಗಾರರಿಗೆ ಬೆದರಿಕೆ ಹಾಕಿದರು. ಅವರ ಮಾತು ಕೇಳದಿದ್ದರೆ, ವ್ಯಾಪಾರ ಬಂದ್ ಮಾಡುವುದಾಗಿ ಬೆದರಿಕೆ ಹಾಕಿದರು. ಸಬೀನಾ ಕಂಪನಿಯು 50% ಸೀಗಡಿಗಳನ್ನು ನೇರವಾಗಿ ಮೀನು ಮಾರಾಟಗಾರರು/ರೈತರಿಂದ, 10-15% ಸೀಗಡಿಗಳನ್ನು ಅವರ (ಷಹಜಹಾನ್) ಸ್ವಂತ ಕೃಷಿಭೂಮಿಯಿಂದ ಮತ್ತು 35-40% ಸೀಗಡಿ ಸಾಕಣೆಯಿಂದ ಅಕ್ರಮವಾಗಿ ಗ್ರಾಮಸ್ಥರಿಂದ ಪಡೆದುಕೊಳ್ಳುತ್ತಾರೆ ಎಂದು ಮ್ಯಾನೇಜರ್ ವಿವರಿಸಿದ್ದಾರೆ” ಎಂದು ಇಡಿ ಹೇಳಿದೆ.

Advertisements

ಫೆಬ್ರವರಿಯಲ್ಲಿ ಷಹಜಹಾನ್ ಬಂಧನಕ್ಕೆ ಒತ್ತಾಯಿಸಿ ಸಂದೇಶಖಾಲಿಯಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ, ಷಹಜಹಾನ್ ಮತ್ತು ಅವರ ಬೆಂಬಲಿಗರು ಎಕರೆಗಟ್ಟಲೆ ಕೃಷಿಭೂಮಿಯನ್ನು ಜನರಿಂದ ಹೇಗೆ ಕಿತ್ತುಕೊಂಡು ಅದನ್ನು ಮೀನುಗಾರಿಕೆಗೆ ಪರಿವರ್ತಿಸಿದರು ಎಂಬುದು ಪ್ರಮುಖ ಆರೋಪಗಳಲ್ಲಿ ಒಂದಾಗಿದೆ.

“ಶಾಹಜಹಾನ್ ತನ್ನ ಬೆಂಬಲಿಗರ ತಂಡವನ್ನು ಹೊಂದಿದ್ದರು. ಆ ತಂಡವು ಷಹಜಹಾನ್ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಭೂಮಿಯಿಂದ ಸಬೀನಾ ಕಂಪನಿಗೆ ಸೀಗಡಿ ಮಾರಾಟ ಮಾಡುತ್ತಿದ್ದರು. ವಾಸ್ತವದಲ್ಲಿ, ಈ ಜನರು ತಮ್ಮ ಹೆಸರಿನಲ್ಲಿ ಯಾವುದೇ ಭೂಮಿಯನ್ನು ಹೊಂದಿಲ್ಲ. ಅವರೆಲ್ಲರ ಬ್ಯಾಂಕ್ ಖಾತೆಗಳನ್ನು ಷಹಜಹಾನ್ ನಿಯಂತ್ರಿಸಿದರು ಮತ್ತು ನಿರ್ವಹಿಸುತ್ತಿದ್ದರು. ಸಬೀನಾ ಕಂಪನಿಯಿಂದ ಬರುತ್ತಿದ್ದ ಹಣವನ್ನು ಅವರೆಲ್ಲರೂ ಷಹಜಹಾನ್ ಸೂಚನೆಯ ಮೇರೆಗೆ ತಮ್ಮ ಹೆಸರಿನಲ್ಲಿ ಜಮೀನು ಖರೀದಿಸಲು ಬಳಸಿದ್ದಾರೆ. ಅವು ನಿಜವಾದ ಬೇನಾಮಿ ಆಸ್ತಿಗಳಲ್ಲಿವೆ” ಎಂದು ಅಫಿಡವಿಟ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಬಗ್ಗೆ ಇಡಿ ತಿಳಿಸಿದೆ.

ಷಹಜಹಾನ್‌ನೊಂದಿಗೆ ವ್ಯವಹರಿಸಿದ ರಫ್ತು ಕಂಪನಿಯ ಪಾಲುದಾರನ ಹೇಳಿಕೆಗಳನ್ನು ಇಡಿ ಉಲ್ಲೇಖಿಸಿದೆ: “ಶಾಹಜಹಾನ್ 2020-21ರಲ್ಲಿ ನನ್ನ ಕಚೇರಿಗೆ ಬಂದರು. ಅವರು ನನ್ನ ಸಂಸ್ಥೆಯೊಂದಿಗೆ ವ್ಯವಹಾರ ನಡೆಸಲು ಬಯಸಿರುವುದಾಗಿ ತಿಳಿಸಿದರು. ನಾವು ಮಾರ್ಚ್ 2021ರಿಂದ ವ್ಯಾಪಾರ ಆರಂಭಿಸಿದೆವು. ಕೆಲ ದಿನಗಳ ನಂತರ, ಅವರು ನನ್ನ ಕಚೇರಿಗೆ ಬಂದು ‘ಕೆಲವು ನಕಲಿ ರಶೀದಿಗಳನ್ನು ನೀಡಬೇಕು ಮತ್ತು ನಗದು ಹಣ ನೀಡುತ್ತೇನೆ, ಆ ಮೊತ್ತವನ್ನು ನನ್ನ ಸಂಸ್ಥೆಯಿಂದ ಸಬೀನಾ ಕಂಪನಿಯ ಖಾತೆಗೆ ವರ್ಗಾಯಿಸಬೇಕು. ಆ ಮೊತ್ತವನ್ನು ಸೀಗಡಿಗಳ ಮಾರಾಟಕ್ಕಾಗಿ ನಡೆದ ನಿಜವಾದ ವಹಿವಾಟು ಎಂದು ತೋರಿಸಬೇಕು’ ಎಂದು ಕೇಳಿದರು. ಆದರೆ, ನಾನು ಅದನ್ನು ನಿರಾಕರಿಸಿದೆ. ಅವರು ನನ್ನನ್ನು ಮತ್ತು ನನ್ನ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು” ಎಂದು ಪಾಲುದಾರ ಕಂಪನಿಯ ಮುಖ್ಯಸ್ಥೆ ಹೇಳಿದ್ದಾರೆ ಎಂಬುದನ್ನು ಇಡಿ ವಿವರಿಸಿದೆ.

ಜನವರಿ 5ರಂದು ಸಂದೇಶ್‌ಖಾಲಿಯಲ್ಲಿರುವ ಷಹಜಹಾನ್ ನಿವಾಸದಲ್ಲಿ ಶೋಧ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆ ಷಹಜಹಾನ್ ಬೆಂಬಲಿಗರು ದಾಳಿ ನಡೆಸಿದ್ದರು. ನಂತರ, ಆತ ಒಂದು ತಿಂಗಳ ಕಾಲ ತಲೆ ಮರೆಸಿಕೊಂಡಿದ್ದರು. ಜನವರಿ 8 ರಂದು, ಸಂದೇಶ್‌ಖಾಲಿಯ ಹಲವಾರು ಮಹಿಳೆಯರು ಆತನನ್ನು ಬಂಧಿಸುವಂತೆ ಒತ್ತಾಯಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಆತನ ಬೆಂಬಲಿಗರು ಹಲವು ವರ್ಷಗಳಿಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಫೆಬ್ರವರಿ 29ರಂದು ಷಹಜಹಾನ್ ಅವರನ್ನು ಬಂಧಿಸಲಾಯಿತು. ಆತನನ್ನು ಪಕ್ಷದಿಂದ ಟಿಎಂಸಿ ಅಮಾನತುಗೊಳಿಸಿತು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X