ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜ್ ಪ್ರತಾಪ್ ಯಾದವ್ ಅವರು ಹೋಳಿ ಆಚರಣೆ ವೇಳೆ ಪೊಲೀಸ್ ಅಧಿಕಾರಿಯೊಬ್ಬರನ್ನು ಕುಣಿಸಿದ ವಿಡಿಯೋವನ್ನು ಪಿಟಿಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ. “ನೃತ್ಯ ಮಾಡದಿದ್ದರೆ ಅಮಾನತು ಮಾಡಿಸುತ್ತೇನೆ” ಎಂದು ಪೊಲೀಸ್ ಅಧಿಕಾರಿಗೆ ಹೇಳುವುದು ಕಂಡುಬಂದಿದೆ.
ಶುಕ್ರವಾರ ಪಾಟ್ನಾದಲ್ಲಿರುವ ತೇಜ್ ಪ್ರತಾಪ್ ಅವರ ನಿವಾಸದಲ್ಲಿ ಹೋಳಿ ಆಚರಣೆ ನಡೆದಿತ್ತು. ಈ ವೇಳೆ ಪೊಲೀಸ್ ಅಧಿಕಾರಿಗೆ ಕುಣಿಯುವಂತೆ ತಿಳಿಸಿರುವುದು ವಿಡಿಯೋದಲ್ಲಿ ಕಾಣಬಹುದು. ಸದ್ಯ ತೇಜ್ ಪ್ರತಾಪ್ ನಡೆಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ. ಕೆಲವರು ಇದು ತಮಾಷೆ ಎಂದು ಹೇಳಿದರೆ, ಇನ್ನು ಕೆಲವರು ಇದು ದರ್ಪ ಎಂದಿದ್ದಾರೆ.
ಇದನ್ನು ಓದಿದ್ದೀರಾ? ಉದ್ಯೋಗಕ್ಕಾಗಿ ಜಮೀನು ಹಗರಣ | ಲಾಲು ಪ್ರಸಾದ್, ತೇಜಸ್ವಿ ಯಾದವ್‌ಗೆ ಜಾಮೀನು
“ಸಿಪಾಯಿ ನಾವೊಂದು ಹಾಡು ಹಾಕುತ್ತೇವೆ. ಅದಕ್ಕೆ ನೀವು ಕುಣಿಯಬೇಕು. ತಪ್ಪು ತಿಳಿಯಬೇಡಿ, ಇದು ಹೋಳಿ ಆಚರಣೆ ಸಂದರ್ಭ ಕುಣಿಯಿರಿ. ನೀವು ಕುಣಿಯದಿದ್ದರೆ ಅಮಾನತು ಮಾಡಿಸುತ್ತೇನೆ” ಎಂದು ಹೇಳಿದ್ದಾರೆ. ಹಾಗೆಯೇ ತಪ್ಪು ತಿಳಿಯಬೇಡಿ ಇದು ಹೋಳಿ ಎಂದು ಮತ್ತೆ ಪುನರುಚ್ಚರಿಸಿದ್ದಾರೆ.
VIDEO | A policeman was seen dancing on the instruction of RJD leader Tej Pratap Yadav during Holi celebration at his residence in Patna. #tejpratapyadav #Holi #Patna pic.twitter.com/oCIP0kL03r
— Press Trust of India (@PTI_News) March 15, 2025
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಜೆಡಿಯು, ಬಿಜೆಪಿ ಮತ್ತು ಆರ್‌ಜೆಡಿ ಮಿತ್ರಕೂಟ ಕಾಂಗ್ರೆಸ್ ಕೂಡಾ ಖಂಡಿಸಿದೆ. ತೇಜ್ ಪ್ರತಾಪ್ ನಡೆಯನ್ನು ಜೆಡಿಯು ರಾಷ್ಟ್ರೀಯ ವಕ್ತಾರ ರಾಜೀವ್ ರಂಜನ್ ಖಂಡಿಸಿದ್ದಾರೆ. ತೇಜ್ ಪ್ರತಾಪ್‌ಗೆ ಅಧಿಕಾರ ಸಿಗದ್ದಂತೆ ನೋಡಬೇಕು ಎಂದು ಬಿಜೆಪಿ ಹೇಳಿದೆ. ಕಾಂಗ್ರೆಸ್ ನಾಯಕ ರಾಶಿದ್ ಅಲ್ವಿ ಕೂಡಾ ತೇಜ್ ನಡೆಯನ್ನು ಖಂಡಿಸಿದ್ದಾರೆ.
