- ‘ಕಾಂಗ್ರೆಸ್ ಗೆಲುವಿನ ಹಿಂದೆ ಅನೈತಿಕತೆ, ಅಕ್ರಮ ಚಟುವಟಿಕೆಗಳು ಮಾತ್ರ ಇವೆ’
- ‘ಸಿಎಂ ಆಪ್ತ ಭೈರತಿ ಸುರೇಶ್ ಬೆಂಬಲಿಗರಿಂದ ನಕಲಿ ವೋಟರ್ ಐಡಿ ತಯಾರಿಕೆ’
ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದ ಫಾರ್ಮುಲಾ ಈಗ ಬಯಲಾಗಿದೆ. ಮತದಾರರಿಗೆ ಮೋಸ ಮಾಡಲು ನುಡಿದಂತೆ ಜಾರಿಯಾಗದ ಗ್ಯಾರಂಟಿಗಳು ಅರ್ಧದಷ್ಟು ಸಹಾಯ ಮಾಡಿದರೆ ಉಳಿದವೆಲ್ಲಾ ನಕಲಿ ಮತಗಳು ಎಂದು ಬಿಜೆಪಿ ಕಿಡಿಕಾರಿದೆ.
ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ, ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬೈರತಿ ಸುರೇಶ್ ಸಂಗಡಿಗರು ನಕಲಿ ವೋಟರ್ ಐಡಿ ಮಾಡುತ್ತಿದ್ದಾಗ ಸಿಕ್ಕಿಬಿದ್ದಿರುವುದು ಈ ಹಗರಣದಲ್ಲಿ ಸಿದ್ದರಾಮಯ್ಯರವರೇ ಶಾಮೀಲಾಗಿರುವುದಕ್ಕೆ ಸ್ಪಷ್ಟ ಸಾಕ್ಷಿ” ಎಂದು ಆರೋಪಿಸಿದೆ.
“ಮತದಾರರಿಂದ ದೇಶಾದ್ಯಂತ ತಿರಸ್ಕೃತವಾಗಿರುವ ಕಾಂಗ್ರೆಸ್ ಪಕ್ಷದ ಗೆಲುವಿನ ಹಿಂದೆ ಸದಾ ಇರುವುದು ಅನೈತಿಕತೆ ಮತ್ತು ಅಕ್ರಮ ಚಟುವಟಿಕೆಗಳು ಮಾತ್ರ” ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಏನಿದು ಪ್ರಕರಣ?
ನಕಲಿ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್‌ಗಳನ್ನು ಮಾಡಿಕೊಡುತ್ತಿರುವ ಆರೋಪದ ಮೇಲೆ ಸಚಿವ ಭೈರತಿ ಸುರೇಶ್ ಅವರ ಆಪ್ತ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದುಡ್ಡು ಕೊಟ್ಟರೆ ವೋಟರ್ ಐಡಿ, ಆಧಾರ್, ಡಿಎಲ್ ಮಾಡಿಕೊಡುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ಹೆಬ್ಬಾಳದ ಕನಕ ನಗರದಲ್ಲಿರುವ ಎಂಎಸ್ಎಲ್ ಟೆಕ್ನೊ ಸಲ್ಯೂಷನ್ ಕಂಪನಿ ಮೇಲೆ ದಾಳಿ ಮಾಡಿ, ಮೌನೇಶ್ ಕುಮಾರ್, ಭಗತ್ ಹಾಗೂ ರಾಘವೇಂದ್ರ ಅವರನ್ನು ವಶಕ್ಕೆ ಪಡೆದಿದ್ದಾರೆ.
ಇವರಲ್ಲಿ ಮೌನೇಶ್ ಎಂಬುವವ ಸಚಿವ ಭೈರತಿ ಸುರೇಶ್ ಅವರಿಗೆ ಆಪ್ತನಾಗಿದ್ದು, ಅವರ ಜೊತೆಗಿನ ಸಾಕಷ್ಟು ಫೋಟೋಗಳು ವೈರಲ್ ಆಗುತ್ತಿದೆ.
ಕರ್ನಾಟಕದಲ್ಲಿ @INCKarnataka ಗೆದ್ದ ಫಾರ್ಮುಲಾ ಈಗ ಬಯಲಾಗಿದೆ. ಮತದಾರರಿಗೆ ಮೋಸ ಮಾಡಲು ನುಡಿದಂತೆ ಜಾರಿಯಾಗದ ಗ್ಯಾರಂಟಿಗಳು ಅರ್ಧದಷ್ಟು ಸಹಾಯ ಮಾಡಿದರೆ ಉಳಿದವೆಲ್ಲಾ ನಕಲಿ ಮತಗಳು. @siddaramaiah ಅವರ ಆಪ್ತ ಬೈರತಿ ಸುರೇಶ್ ಸಂಗಡಿಗರು ನಕಲಿ ವೋಟರ್ ಐಡಿ ಮಾಡುತ್ತಿದ್ದಾಗ ಸಿಕ್ಕಿಬಿದ್ದಿರುವುದು ಈ ಹಗರಣದಲ್ಲಿ ಸಿದ್ದರಾಮಯ್ಯರವರೇ… pic.twitter.com/smoaF1DWuI
— BJP Karnataka (@BJP4Karnataka) October 21, 2023