ಕಾಂಗ್ರೆಸ್‌ನಲ್ಲಿ ಹೊಸ ನಾಯಕರು ತಯಾರಾಗುವವರೆಗೆ, ಹೊಸ ನಾಯಕತ್ವ ಬೆಳೆಯುವವರೆ ಪಕ್ಷಕ್ಕೆ ಸಿದ್ದರಾಮಯ್ಯ ಅನಿವಾರ್ಯ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಇತ್ತೀಚೆಗೆ, “ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ಬೇಕು” ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರಡ್ಡಿ ಹೇಳಿದ್ದರು. ಅವರ ಹೇಳಿಕೆ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾಡತನಾಡಿದ ಜಾರಕಿಹೊಳಿ, “ಸಿದ್ದರಾಮಯ್ಯ ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಲಿದ್ದರೂ, ಅವರು ರಾಜಕೀಯದಲ್ಲಿ ಇರಬೇಕು. ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಿದ್ದರಾಮಯ್ಯ ಸಕ್ರಿಯವಾಗಿ ಇರಬೇಕು” ಎಂದು ಹೇಳಿದ್ದಾರೆ.
“ಇನ್ನೂ ಒಂದು ಅವಧಿಯವರೆಗೆ ಸಿದ್ದರಾಮಯ್ಯ ರಾಜಕೀಯದಲ್ಲಿ ಸಕ್ರಿಯರಾಗಿ ಇರಬೇಕು. ಕಾಂಗ್ರೆಸ್ ಗೆಲ್ಲಲು ಸಿದ್ದರಾಮಯ್ಯ ಅನಿವಾರ್ಯವಾಗಿದ್ದಾರೆ” ಎಂದು ಸತೀಶ್ ಜಾರಕಿಹೊಳಿ ಕೇಳಿದ್ದಾರೆ.
ಇನ್ನು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಮಾತನಾಡಿದ ಅವರು, “ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸುವ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀರ್ಮಾನಿಸುತ್ತಾರೆ. ಬೇರೆ ರಾಜ್ಯಗಳಲ್ಲಿ ಪಕ್ಷದ ಅಧ್ಯಕ್ಷರನ್ನು ಬದಲಿಸುವ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಆದರೆ, ಕರ್ನಾಟಕದಲ್ಲಿ ಅಧ್ಯಕ್ಷ ಬದಲಾವಣೆ ಕುರಿತು ಯಾವುದೇ ಚರ್ಚೆ ಆಗಿಲ್ಲ. ಚರ್ಚೆ ಬಂದಾಗ, ಅಭಿಪ್ರಾಯ ತಿಳಿಸುತ್ತೇವೆ” ಎಂದು ಹೇಳಿದ್ದಾರೆ.
ಸರಿ ಅಣ್ಣಾ ಸಿದ್ಧರಾಮಯ್ಯ ಮಾತ್ರ ಬಾಯಲ್ಲಿ ಸಮಾಜವಾದ ನುಡಿದರೆ ಸಾಲದು
ಅವರ ಕಛೇರಿ ಕುರುಬ ಸಮುದಾಯದ ಅಧಿಕಾರಿಗಳ ಕೂಟ
ಅದೇ ನಾಯಕರ ಅಡ್ಡಾ ಆಗಿದೆ
ದಲಿತ ಮಂತ್ರಿ ಮಹೋದಯರವರು ಉಪಜಾತಿಗಳ ವಾರಸುಧಾರರರು
ಸರ್ಕಾರಿ ಆಡಳಿತ ಭ್ರಷ್ಟರ ಕೂಪ
ಕೇವಲ ಸಿದ್ಧರಾಮಯ್ಯ ಟ್ರಂಪ್ ಕಾರ್ಡ್ ಆದರೆ ಪ್ರಯೋಜನ ಏನು?
ಬಿಜೆಪಿಗೂ. ಕಾಂಗ್ರೇಸಿಗೂ ವ್ಯತ್ಯಾಸ ಏನು?
ಕೇವಲ ಓಟು ಗೆಲ್ಲಲಿಕ್ಕೆ ಮಾತ್ರಾನಾ?